ETV Bharat / bharat

ಬೈಕ್ ಸವಾರನಿಗೆ ಗುದ್ದಿ ಒಂದು ಕಿಮೀ ಎಳೆದೊಯ್ದ ಆಟೋ ಚಾಲಕ.. ಯುವಕನ ಸ್ಥಿತಿ ಗಂಭೀರ - ಬೈಕ್ ಸವಾರನಿಗೆ ಡಿಕ್ಕಿ

ಆಟೋ ಚಾಲಕನೊಬ್ಬ ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ಬಿಹಾರದ ಸಹರ್ಸಾದಲ್ಲಿ ನಡೆದಿದೆ.

ಸದರ್ ಆಸ್ಪತ್ರೆ
ಸದರ್ ಆಸ್ಪತ್ರೆ
author img

By

Published : Jan 18, 2023, 7:34 PM IST

ಬೈಕ್ ಸವಾರನಿಗೆ ಗುದ್ದಿ ಒಂದು ಕಿಮೀ ಎಳೆದೊಯ್ದ ಆಟೋ ಚಾಲಕ.. ಯುವಕನ ಸ್ಥಿತಿ ಗಂಭೀರ

ಸಹರ್ಸಾ (ಬಿಹಾರ): ದೆಹಲಿಯ ಕಾಂಜಾವಾಲಾ ಪ್ರಕರಣದ ರೀತಿಯ ಮತ್ತೊಂದು ಪ್ರಕರಣವೊಂದು ಬಿಹಾರದ ಸಹರ್ಸಾದಲ್ಲಿ ಮುನ್ನೆಲೆಗೆ ಬಂದಿದೆ. ಜಿಲ್ಲೆಯ ಬಿಹ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಅಗ್ವಾನ್‌ಪುರ ಸಹರ್ಸಾ ರಸ್ತೆಯಲ್ಲಿ ಮಂಗಳವಾರ ರಾತ್ರಿ ಆಟೋ ಚಾಲಕನೊಬ್ಬ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದಾನೆ. ಘಟನೆ ಬಳಿಕ ಬೈಕ್ ಸವಾರ ಕೆಳಗೆ ಬಿದ್ದಿದ್ದು, ಆತನ ಕಾಲು ಆಟೋಗೆ ಸಿಲುಕಿಕೊಂಡಿದೆ. ನಂತರ ಆಟೋ ಚಾಲಕ ಆತನನ್ನು ಒಂದೂವರೆ ಕಿಲೋಮೀಟರ್​​ವರೆಗೆ ಎಳೆದೊಯ್ದು (ಆಟೋ ಚಾಲಕ ಯುವಕನನ್ನು ಸಹರ್ಸದಲ್ಲಿ ಎಳೆದುಕೊಂಡು ಹೋಗಿದ್ದಾನೆ) ಮತ್ತು ಗಾಯಗೊಂಡ ಸ್ಥಿತಿಯಲ್ಲಿ ಆತನನ್ನು ರಸ್ತೆಯ ಮೇಲೆ ಬಿಟ್ಟು ಪರಾರಿಯಾಗಿದ್ದಾನೆ.

ರಸ್ತೆ ಅಪಘಾತ ರಾತ್ರಿ ವೇಳೆ ನಡೆದಿದ್ದರಿಂದ ಇದರ ಲಾಭ ಪಡೆದ ಹೃದಯಹೀನ ಆಟೋ ಚಾಲಕ ಗಾಯಗೊಂಡಿದ್ದ ಯುವಕನನ್ನು ರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ನಂತರ ಸ್ಥಳೀಯರು ಗಾಯಗೊಂಡ ಯುವಕನನ್ನು ಗಮನಿಸಿ ಸದರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಚಿಕಿತ್ಸೆಯನ್ನು ನೀಡುತ್ತಿದ್ದು, ಅವನ ಸ್ಥಿತಿ ಇದೀಗ ತುಂಬಾ ಗಂಭೀರವಾಗಿದೆ ಎಂಬುದು ತಿಳಿದುಬಂದಿದೆ.

ಸಹರ್ಸಾದಲ್ಲಿ ಕಾಂಜಾವಾಲಾದಂತಹ ಪ್ರಕರಣ: ಯುವಕನ ಬಗ್ಗೆ ಮಾತನಾಡಿದ ಕುಟುಂಬಸ್ಥರು, ಗಾಯಾಳುಗಳಿಗೆ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಯುವಕನ ಕಾಲಿನ ಮೂಳೆ ಒಡೆದಿದ್ದು, ಪರಿಣಾಮ ಸಾಕಷ್ಟು ರಕ್ತ ಸೋರಿಕೆಯಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಯುವಕನನ್ನು ರಕ್ಷಿಸಬೇಕಾದರೆ ಆತನ ಕಾಲನ್ನು ಕತ್ತರಿಸಬೇಕಾಗುತ್ತದೆ. ಗಾಯಗೊಂಡವರನ್ನು ನೌಹಟ್ಟಾ ಪೊಲೀಸ್ ಠಾಣೆ ವ್ಯಾಪ್ತಿಯ ಹೆಂಪುರ ಗ್ರಾಮದ 25 ವರ್ಷದ ಕೋಮಲ್ ಕುಮಾರ್ ಎಂದು ಹೇಳಲಾಗುತ್ತಿದೆ.

ಅಜ್ಜನ ಸಾವಿನ ಸುದ್ದಿ ಕೇಳಿ ಮನೆಗೆ ಬರುತ್ತಿದ್ದ ಯುವಕ: ತನ್ನ ಅಜ್ಜನ ಸಾವಿನ ಸುದ್ದಿಯನ್ನು ಕೇಳಿದ ಯುವಕ ಮುಂಗೇರಿನಿಂದ ಜಿಲ್ಲೆಯ ನೌಹಟ್ಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ತನ್ನ ಗ್ರಾಮವಾದ ಹೆಂಪುರಕ್ಕೆ ಶವಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬರುತ್ತಿರುವಾಗ ಈ ಅವಘಡ ಸಂಭವಿಸಿದೆ ಎಂಬುದಾಗಿ ತಿಳಿದು ಬಂದಿದೆ. ವಿಹ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ದೋರ್ಮಾ ಬ್ರಹ್ಮಾ ಸ್ಥಳದ ಬಳಿ ಈ ಅಪಘಾತ ಸಂಭವಿಸಿದೆ.

ಬೈಕ್ ಸವಾರನನ್ನು ಒಂದೂವರೆ ಕಿಲೋಮೀಟರ್ ಎಳೆದೊಯ್ದ ಆಟೋ ಚಾಲಕ: ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಪರಾರಿಯಾಗಿರುವ ಕರುಣೆಯಿಲ್ಲದ ಆಟೋ ಚಾಲಕನ ಬಗ್ಗೆ ಇದುವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ. ಈಗಾಗಲೇ ಆತನ ಬಂಧನಕ್ಕೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ರಸ್ತೆ ಅಪಘಾತದಲ್ಲಿ ಗಾಯಗೊಂಡ ಯುವಕನ ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳಿದ್ದು, ಈಗಾಗಲೇ ಸಾಕಷ್ಟು ರಕ್ತ ನಷ್ಟವಾಗಿದೆ. ಗಾಯಾಳು ಜೀವ ಉಳಿಸಬೇಕಾದರೆ ಕಾಲು ಕತ್ತರಿಸಬೇಕಾಗಬಹುದು. ಪ್ರಸ್ತುತ ಅವರನ್ನು ಪ್ರಸ್ತುತ ತುರ್ತು ಚಿಕಿತ್ಸಾಲಯದಲ್ಲಿ ಇರಿಸಲಾಗಿದೆ ಎಂದು ಗಾಯಗೊಂಡ ಯುವಕನ ಚಿಕ್ಕಪ್ಪ ತಿಳಿಸಿದ್ದಾರೆ.

ದೆಹಲಿಯ ಕಾಂಜಾವಾಲಾ ಪ್ರಕರಣ: ದೆಹಲಿಯ ಸುಲ್ತಾನ್‌ಪುರಿಯಲ್ಲಿ ಹೊಸ ವರ್ಷಾಚರಣೆಯ ನಡುವೆ 23 ವರ್ಷದ ಅಂಜಲಿಯ ಜೊತೆ ದುರಂತವೊಂದು ನಡೆಯಿತು. ಸ್ಕೂಟಿಯಲ್ಲಿ ಹೋಗುತ್ತಿದ್ದ ಅಂಜಲಿಗೆ ಕಾರು ಡಿಕ್ಕಿ ಹೊಡೆದಿತ್ತು. ನಂತರ ಅಂಜಲಿಯನ್ನು ಕಾರಿನ ಬುಡದಲ್ಲಿ ಸಿಕ್ಕಿಸಿ 12 ಕಿಮೀವರೆಗೂ ಎಳೆದೊಯ್ಯಲಾಗಿತ್ತು. ದುಷ್ಟರ ಈ ಕೃತ್ಯದಿಂದ ಅಂಜಲಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಕಾರಿನಲ್ಲಿದ್ದ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಬಳಿಕ ಮತ್ತಿಬ್ಬರು ಆರೋಪಿಗಳ ಹೆಸರು ಬಯಲಿಗೆ ಬಂದಿತ್ತು. ಅದೇ ವೇಳೆಗೆ ಅಂಜಲಿಯ ಸ್ನೇಹಿತೆ ನಿಧಿ ಹೆಸರೂ ಮುನ್ನೆಲೆಗೆ ಬಂತು. ಪೊಲೀಸರು ಆಕೆಯನ್ನೂ ವಿಚಾರಣೆ ನಡೆಸಿದ್ದಾರೆ. ಘಟನೆಯ ನಂತರ ಸಿಕ್ಕಿಬಿದ್ದ ಏಳು ಮಂದಿಯನ್ನು ಪೊಲೀಸರು ಆರೋಪಿಗಳನ್ನಾಗಿ ಮಾಡಿದ್ದಾರೆ. ಅವರಲ್ಲಿ ಒಬ್ಬರಿಗೆ ನ್ಯಾಯಾಲಯ ಜಾಮೀನು ನೀಡಿದೆ.

ಇದನ್ನು ಓದಿ: ದೆಹಲಿಯ ಕಾಂಜಾವಾಲಾ ಹಿಟ್​ ಅಂಡ್​ ರನ್​ ಪ್ರಕರಣ: 11 ಪೊಲೀಸರು ಸಸ್ಪೆಂಡ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.