ಪಿಲಿಭಿತ್ (ಉತ್ತರ ಪ್ರದೇಶ): ನೆರೆಹೊರೆಯ ಇಬ್ಬರು ಸೇರಿ ಬಾಲಕಿ ಮೇಲೆ ಅತ್ಯಾಚಾರ ಎಸಗಲು ಮುಂದಾಗಿದ್ದಾರೆ. ಆದರೆ ಅತ್ಯಾಚಾರ ಯತ್ನ ವಿಫಲವಾದ ಕಾರಣ ಬಾಲಕಿಯನ್ನು ಟೆರೇಸ್‌ನಿಂದ ತಳ್ಳಿದ್ದಾರೆ. ಮೇಲಿಂದ ಬಿದ್ದ ಬಾಲಕಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅತ್ಯಾಚಾರ ನಡೆಸಲು ಮುಂದಾದಾಗ ಬಾಲಕಿಯ ತಂದೆ ಮನೆಗೆ ಬರುವುದನ್ನು ನೋಡಿ ಹೆದರಿದ ಇಬ್ಬರು ಯುವಕರು, 16 ವರ್ಷದ ಬಾಲಕಿಯನ್ನು ಟೆರೇಸ್‌ನಿಂದ ಕೆಳಗೆ ತಳ್ಳಿದ್ದಾರೆ.
ಘಟನೆ ಸಂಬಂಧ ಬಾಲಕಿಯ ತಂದೆ ಈ ಇಬ್ಬರ ವಿರುದ್ಧ ದೂರು ನೀಡಿದ್ದಾರೆ. ಅರವಿಂದ್ ಮತ್ತು ಮಹೇಂದ್ರ ಕೃತ್ಯ ಎಸಗಿದವರು. ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 354, 504, 323 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಂತರ ಪರಾರಿಯಾಗಿರುವ ಆರೋಪಿಗಳನ್ನು ಬಂಧಿಸಲು ಪೊಲೀಸರು ತಂಡ ರಚಿಸಿದ್ದಾರೆ.