ETV Bharat / bharat

ಬಡತನದ ಬೇಗೆಯಲ್ಲೇ ಬಿಹಾರದ ಜನ: ಮೂರನೇ ಒಂದರಷ್ಟು ಜನರ ಆದಾಯ ಕೇವಲ ₹ 6000 - ಮಾಜಿ ರಾಷ್ಟ್ರಪತಿ ಗಿಯಾನಿ ಝೈಲ್ ಸಿಂಗ್

ಮೀಸಲಾತಿ ಪ್ರಮಾಣ ಬಿಹಾರ ರಾಜ್ಯದಲ್ಲಿ ಶೇ. 75ಕ್ಕೆ ಏರಿಕೆ ಆಗುವ ಸಾಧ್ಯತೆಗಳಿವೆ. ಈ ಸಂಬಂಧ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಸ್ತಾಪ ಮಂಡಿಸಿದ್ದಾರೆ. ಸರ್ಕಾರಿ ಉದ್ಯೋಗ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣ ಶೇ. 65ಕ್ಕೆ ಏರಿಕೆ ಮಾಡಲು ಸರ್ಕಾರ ಪ್ರಸ್ತಾಪ ಮಂಡಿಸಿದೆ. ಜೊತೆಯಲ್ಲೇ ಕೇಂದ್ರ ಸರ್ಕಾರ ಕೂಡಾ ಆರ್ಥಿಕ ದುರ್ಬಲ ವರ್ಗಗಳಿಗೆ ನೀಡಿರುವ ಶೇ. 10ರಷ್ಟು ಮೀಸಲಾತಿ ಕೂಡಾ ಅನ್ವಯ ಆಗಲಿದ್ದು, ಈ ಮೂಲಕ ಬಿಹಾರ ರಾಜ್ಯದಲ್ಲಿ ಒಟ್ಟು ಮೀಸಲಾತಿ ಪ್ರಮಾಣ ಶೇ. 75ಕ್ಕೆ ಏರಿಕೆ ಆಗಲಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
author img

By ETV Bharat Karnataka Team

Published : Nov 7, 2023, 8:04 PM IST

ಪಾಟ್ನಾ (ಬಿಹಾರ) : ಬಿಹಾರ ವಿಧಾನಸಭೆಯ ಚಳಿಗಾಲದ ಅಧಿವೇಶನದ ಎರಡನೇ ದಿನದಂದು ಜಾತಿ ಗಣತಿ ಸಮೀಕ್ಷೆಯ ಆರ್ಥಿಕ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ. ಸಮೀಕ್ಷೆಯ ವರದಿಯ ಪ್ರಕಾರ, ಬಿಹಾರದಲ್ಲಿ ಕೇವಲ ಶೇ.7ರಷ್ಟು ಜನ ಮಾತ್ರ ಪದವೀಧರರಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಸಾಮಾನ್ಯ ಕುಟುಂಬಗಳಲ್ಲಿ 25.9 ಪ್ರತಿಶತದಷ್ಟು ಬಡವರಿದ್ದಾರೆ ಎಂದು ವಿವರಿಸಲಾಗಿದೆ. ಬಡವರಲ್ಲಿ ಭೂಮಿಹಾರ್ ಮತ್ತು ಬ್ರಾಹ್ಮಣ ಕುಟುಂಬಗಳ ಜನರು ಸೇರಿದ್ದಾರೆ ಎಂಬುದು ವರದಿಯ ವಿಶೇಷತಗಳಲ್ಲೊಂದು.

ಜಾತಿ ಸಮೀಕ್ಷೆಯ ಆರ್ಥಿಕ ಮತ್ತು ಶೈಕ್ಷಣಿಕ ವರದಿ : ಬಿಹಾರ ಜಾತಿ ಸಮೀಕ್ಷೆಯ ಆರ್ಥಿಕ ಮತ್ತು ಶೈಕ್ಷಣಿಕ ವರದಿಯನ್ನು ಮಂಗಳವಾರ ಸದನದಲ್ಲಿ ಮಂಡಿಸಲಾಗಿದೆ. ವರದಿಯಲ್ಲಿರುವ ಬಡ ಕುಟುಂಬಗಳ ಬಗ್ಗೆ ಮಾತನಾಡುವುದಾದರೆ, ಅದರಲ್ಲಿ ಶೇ 25.09ರಷ್ಟು ಸಾಮಾನ್ಯ ವರ್ಗ, ಶೇ 33.16 ಹಿಂದುಳಿದ ವರ್ಗ, ಶೇ 33.58ರಷ್ಟು ಅತ್ಯಂತ ಹಿಂದುಳಿದ ವರ್ಗ, ಶೇ 42.93ರಷ್ಟು ಪರಿಶಿಷ್ಟ ಜಾತಿ, ಶೇ 42.70 ಅನುಸೂಚಿತ ಬುಡಕಟ್ಟು ಮತ್ತು ಶೇ 23.72 ಇತರ ಜಾತಿ ಕುಟುಂಬಗಳು ಸೇರಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಸಿಎಂ ನಿತೀಶ್​ ಕುಮಾರ್​ ಹೇಳಿದ್ದಾರೆ.

ಅತ್ಯಂತ ಬಡವರ ಮಾಹಿತಿ : ಸಾಮಾನ್ಯ ವರ್ಗದಲ್ಲಿ ಗರಿಷ್ಠ ಅಂದರೆ 25.32 ಪ್ರತಿಶತ ಕುಟುಂಬಗಳು ಬಡತನ ರೇಖೆಗಿಂತ ಕೆಳಗಿದ್ದಾರೆ. ಬ್ರಾಹ್ಮಣರಲ್ಲಿ ಶೇ 25.3ರಷ್ಟು, ರಜಪೂತರಲ್ಲಿ ಶೇ 24.89ರಷ್ಟು ಮತ್ತು ಕಾಯಸ್ಥರಲ್ಲಿ ಶೇ 13.83ರಷ್ಟು ಜನ ಬಡತನ ರೇಖೆಗಿಂತ ಕೆಳಗಿನ ಮಟ್ಟದಲ್ಲಿ ತಮ್ಮ ಜೀವನ ಸಾಗಿಸುತ್ತಿದ್ದಾರೆ ಎಂದು ಜನಗಣತಿ ವರದಿಯಲ್ಲಿ ಹೇಳಲಾಗಿದೆ. ಇದಲ್ಲದೆ ಭಟ್ ಕುಟುಂಬದ ಶೇ. 23.68, ಮಲ್ಲಿಕ್ ಮತ್ತು ಮುಸ್ಲಿಂ ಶೇ.17.26, ಹರಿಜನ ಶೇ 29.12, ಕಿನ್ನರ ಶೇ 25.73, ಕುಶ್ವಾಹ ಶೇ 34.32, ಯಾದವ್ ಶೇ 35.87, ಕುರ್ಮಿ ​ಶೇ ​29.90, ಸೋನಾರ್ 26.58 ಮತ್ತು ಇತರ ಜಾತಿಗಳಲ್ಲಿ ಶೇ 32.99ರಷ್ಟು ಬಡವರಿದ್ದಾರೆ ಎಂದು ಜಾತಿ ಗಣತಿಯಲ್ಲಿ ವಿವರಿಸಲಾಗಿದೆ ಎಂದು ಸಿಎಂ ಸದನಕ್ಕೆ ಮಾಹಿತಿ ನೀಡಿದ್ದಾರೆ.

ಸಮೀಕ್ಷಾ ವರದಿಗೆ ಬಿಜೆಪಿ ಪ್ರತಿಕ್ರಿಯೆ : ಬಿಜೆಪಿ ಮುಖಂಡ ತಾರಕೇಶ್ವರ್ ಪ್ರಸಾದ್ ಮಾತನಾಡಿ, ಜಾತಿ ಗಣತಿ ನಿರ್ಧಾರ ಕೈಗೊಂಡಿದ್ದು ಎನ್​ಡಿಎ ಸರ್ಕಾರ. ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಸರ್ವಪಕ್ಷ ನಿಯೋಗವೊಂದು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿತ್ತು. ಆಗ ನಮ್ಮ ಸರ್ಕಾರ ಅದನ್ನು ಸಂಪುಟದಲ್ಲಿ ಸರ್ವಾನುಮತದಿಂದ ಅಂಗೀಕರಿಸಿತು. ಅದರ ವೆಚ್ಚಕ್ಕಾಗಿ 500 ಕೋಟಿ ರೂಪಾಯಿಗಳ ಬಜೆಟ್​ನಲ್ಲಿ ಇಡಲಾಗಿತ್ತು.

ಆ ಸರ್ಕಾರದಲ್ಲಿ ನಾನೇ ಹಣಕಾಸು ಸಚಿವ ಮತ್ತು ಉಪಮುಖ್ಯಮಂತ್ರಿಯಾಗಿದ್ದೆ. ನಾವೆಲ್ಲರೂ ಈ ವರದಿಯ ಮೂಲಕ ಸಮಾಜದ ಜನರ ಸ್ಥಿತಿಯನ್ನು ಸುಧಾರಿಸುವ ಉದ್ದೇಶವನ್ನು ಹೊಂದಿದ್ದೇವೆ. ಆದರೆ ಜನರು ಇದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂಬ ವಿಶ್ವಾಸವಿದೆ. ಜನಜೀವನದಲ್ಲಿ ಬದಲಾವಣೆ ತರಲು ಸಮೀಕ್ಷೆಗಳನ್ನು ಬಳಸಿಕೊಳ್ಳಬೇಕು ಎಂದಿದ್ದಾರೆ. ಇಂದು ಈ ಸಮೀಕ್ಷಾ ವರದಿ ಬರಲು ನಮ್ಮ ಪಾತ್ರವೇ ಕಾರಣ ಎಂದು ತಾರಕೇಶ್ವರ್ ಪ್ರಸಾದ್ ಅವರು ಹೇಳಿದ್ದಾರೆ.

ಬಿಹಾರದ ಜಾತಿಗಣತಿಯ ಸಮೀಕ್ಷಾ ವರದಿ ಬಿಡುಗಡೆ
ಬಿಹಾರದ ಜಾತಿಗಣತಿಯ ಸಮೀಕ್ಷಾ ವರದಿ ಬಿಡುಗಡೆ

ಬಿಹಾರ ವಿಧಾನಸಭೆಯ ಚಳಿಗಾಲದ ಅಧಿವೇಶನದ ಎರಡನೇ ದಿನದ ಕಲಾಪದಲ್ಲಿ ಮೀಸಲಾತಿ ವ್ಯಾಪ್ತಿಯನ್ನು ಹೆಚ್ಚಿಸಲು ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರಸ್ತಾಪಿಸಿದ್ದಾರೆ. ಈ ಪ್ರಸ್ತಾವನೆಯಲ್ಲಿ ಬಿಹಾರದಲ್ಲಿ ನೀಡಲಾಗಿದ್ದ ಶೇ.50ರಷ್ಟು ಮೀಸಲಾತಿಯನ್ನು ಶೇ.65ಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನು ಮಂಡಿಸಲಾಗಿದೆ. ಅದಕ್ಕೆ EWS ಅನ್ನು ಸೇರಿಸಿದರೆ, ಆಗ ಒಟ್ಟಾರೆ ಮೀಸಲಾತಿ ಪ್ರಮಾಣ 75 ಪ್ರತಿಶತಕ್ಕೆ ಏರಿಕೆ ಆಗುತ್ತದೆ. ಬಿಹಾರದಲ್ಲಿ ನಡೆಯುತ್ತಿರುವ ಜಾತಿ ಗಣತಿ ಸಂಪೂರ್ಣ ವೈಜ್ಞಾನಿಕವಾಗಿದೆ ಎಂದು ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ನಾಯಕರೊಂದಿಗೆ ನಿತೀಶ್​ ಸಂಪರ್ಕ? ಗಾಳಿಸುದ್ದಿಗೆ ತುಪ್ಪ ಸುರಿದ ಬಿಹಾರ ಸಿಎಂ - ಪಿಎಂ ಮೋದಿಗೆ ಧನ್ಯವಾದ ಅರ್ಪಣೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.