ಮೊಗಾ(ಪಂಜಾಬ್) :ಒಂದೆಡೆ ಪಂಜಾಬ್ ಸರ್ಕಾರ ಡ್ರಗ್ಸ್ ಸ್ಮಗ್ಲರ್‌ಗಳ ವಿರುದ್ಧ ಮಹತ್ವದ ಕ್ರಮ ಕೈಗೊಳ್ಳುವ ಮಾತನಾಡುತ್ತಿದೆ. ಇದರ ನಡುವೆಯೇ ಪಂಜಾಬ್ ನ ಯುವಕ - ಯುವತಿಯರು ಸಿಂಥೆಟಿಕ್ ಡ್ರಗ್ ಚಟಕ್ಕೆ ದಾಸರಾಗುತ್ತಿದ್ದಾರೆ.
ಮಾಲ್ವಾ ಪ್ರದೇಶದಲ್ಲಿ ಈಗ ಯುವಕರ ನಂತರ ಯವತಿಯರೂ ಸಹ ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದಾರೆ ಎಂಬ ಅಂಶ ಬಹಿರಂಗವಾಗಿದೆ. ಈ ಹುಡುಗಿಯರಲ್ಲಿ ಹೆಚ್ಚಿನವರು ತಮ್ಮ ಪೋಷಕರಿಂದ ಬೇರ್ಪಟ್ಟಿದ್ದಾರೆ ಎನ್ನಲಾಗಿದೆ. ಈ ಮಾಹಿತಿ ಬಹಿರಂಗವಾದ ನಂತರ ಪಂಜಾಬ್ ಸರ್ಕಾರ ಮತ್ತು ಆಡಳಿತ ಮತ್ತೊಮ್ಮೆ ಪ್ರಶ್ನಾರ್ಹವಾಗಿದೆ.
ಮೊಗದಲ್ಲಿ ರಾತ್ರಿಯಲ್ಲಿ ಮಾದಕ ದ್ರವ್ಯ ಸೇವಿಸಲು ಹೋಗುವ ಅನೇಕ ಹುಡುಗಿಯರೊಂದಿಗೆ ನಮ್ಮ ವದಿಗಾರರು ಸಂವಹನ ನಡೆಸಿದ್ದಾರೆ. ಈ ಹುಡುಗಿಯರು ಮೋಗಾ - ಫಿರೋಜ್‌ಪುರ ರಸ್ತೆ, ಮೊಗಾ-ಕೋಟ್ಕಾಪುರ ರಸ್ತೆ ಮತ್ತು ಫೋಕಲ್ ಪಾಯಿಂಟ್ ಚೌಕಿ ಪ್ರದೇಶದಲ್ಲಿ ಅಲೆದಾಡುತ್ತಿರುವುದು ಕಂಡುಬಂದಿದೆ.
‘ಡ್ರಗ್ಸ್ ಗಾಗಿ ರಾತ್ರಿ ಅಲೆದಾಡುವ ಯುವತಿಯರು ಈ ಚಟಕ್ಕೆ ಬಿದ್ದು, ರಾತ್ರಿ ಪೂರ ಇದಕ್ಕಾಗಿ ಹಾತೊರೆದು ಸುತ್ತುತ್ತಿರುತ್ತಾರೆ. ಇವರ ಸಂಪರ್ಕಕ್ಕೆ ಬಂದ ಯುವತಿಯರೂ ಸಹ ಮಾದಕ ವ್ಯಸನಿಗಳಾಗುತ್ತಿದ್ದಾರಂತೆ.
‘ಡ್ರಗ್ಸ್ ಬಿಡಲು ತಯಾರಾದ ಹುಡುಗಿಯರು’: ಕೆಲವು ಯುವತಿಯರೂ ತಮ್ಮನ್ನು ತಾವು ಅರಿತುಕೊಂಡಿದ್ದು, ಈ ವ್ಯವಸ್ಥೆಯಿಂದ ದೂರ ಸರಿಯಲು ಮುಂದಾಗಿದ್ದಾರೆ. ಆದರೂ ಈ ಬಲೆಯೊಳಗೆ ಯುವತಿಯರು ಸಿಲುಕಿದರೆ ಅದರಿಂದ ಹೊರಬರುವುದು ಕಷ್ಟವಂತೆ. ಪ್ರತಿದಿನ ಸುಮಾರು 1 ರಿಂದ 2 ಸಾವಿರ ರೂಪಾಯಿ ಮೌಲ್ಯದ ಡ್ರಗ್ಸ್ ಬಳಸಲಾಗುತ್ತದೆ ಎಂದು ಇಲ್ಲಿನ ಹುಡುಗಿಯರೇ ಹೇಳುತ್ತಾರೆ. ಅವರು ಇದನ್ನು ನಿರಂತರವಾಗಿ ಪಡೆಯದಿದ್ದರೆ ದೇಹದಲ್ಲಿ ನೋವು ಪ್ರಾರಂಭವಾಗುತ್ತದಂತೆ.
ಆಮ್ ಆದ್ಮಿ ಪ್ರತಿ 2022 ರ ವಿಧಾನಸಭಾ ಚುನಾವಣೆಯ ಮೊದಲು ಪಂಜಾಬ್‌ನಲ್ಲಿ ಡ್ರಗ್ಸ್ ಅನ್ನು ಕೊನೆಗೊಳಿಸುವುದಾಗಿ ಹೇಳಿದ್ದರು ಮತ್ತು ಭರವಸೆ ಕೂಡ ನೀಡಿದ್ದರು. ಆದರೆ, ಅದರ ಗ್ರೌಂಡ್ ರಿಯಾಲಿಟಿ ವಿಭಿನ್ನವಾಗಿ ಕಾಣುತ್ತಿದೆ. ಡ್ರಗ್ಸ್ ನಿಂದಾಗಿ ಯುವಕರು ಸಾಯುತ್ತಿದ್ದಾರೆ. ಮಾದಕ ದ್ರವ್ಯ ಮತ್ತು ಮಾದಕ ದ್ರವ್ಯ ಸಾಗಣೆದಾರರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಮನವಿಯಾಗಿದೆ.
ಇದನ್ನೂ ಓದಿ: MP - MLA ಟಿಕೆಟ್ ಕೊಡಿಸುವುದಾಗಿ ಹಣ ಪಡೆದು ವಂಚನೆ ಆರೋಪ: ಸ್ಯಾಂಡಲ್ವುಡ್ ನಟ ಬಂಧನ