ETV Bharat / bharat

ಕುಟುಂಬವನ್ನೇ ಒತ್ತೆಯಾಳಾಗಿ ಇಟ್ಟುಕೊಂಡ ಯೋಧ: ಕೊನೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಜೋಧ್‌ಪುರದ ಸಿಆರ್‌ಪಿಎಫ್ ತರಬೇತಿ ಕೇಂದ್ರದಲ್ಲಿ ಗುಂಡು ಹಾರಿಸಿಕೊಂಡು ಜವಾನ್ ನರೇಶ್ ಜಟ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನರೇಶ್ ಜಾಟ್ ಕಳೆದ 18 ಗಂಟೆಗಳಿಂದ ತನ್ನ ಪತ್ನಿ ಮತ್ತು ಮಗಳನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದರು.

ರಾಜಸ್ಥಾನದ ಜೋಧ್‌ಪುರದ ಕಾರವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಸಿಆರ್‌ಪಿಎಫ್ ತರಬೇತಿ ಕೇಂದ್ರದಲ್ಲಿ  ರಾಜಸ್ಥಾನದ ಜೋಧ್‌ಪುರದ ಕಾರವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಸಿಆರ್‌ಪಿಎಫ್ ತರಬೇತಿ ಕೇಂದ್ರದಲ್ಲಿ ದುರ್ಘಟನೆ ದುರ್ಘಟನೆ
ರಾಜಸ್ಥಾನದ ಜೋಧ್‌ಪುರದ ಕಾರವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಸಿಆರ್‌ಪಿಎಫ್ ತರಬೇತಿ ಕೇಂದ್ರದಲ್ಲಿ ದುರ್ಘಟನೆ
author img

By

Published : Jul 11, 2022, 6:09 PM IST

ಜೋಧ್‌ಪುರ (ರಾಜಸ್ಥಾನ) : ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಸಿಆರ್‌ಪಿಎಫ್ ತರಬೇತಿ ಕೇಂದ್ರದಲ್ಲಿ ಸಿಬ್ಬಂದಿ ತನ್ನ ಕುಟುಂಬವನ್ನೇ ಕ್ವಾರ್ಟರ್ಸ್‌ನಲ್ಲಿ ಒತ್ತೆಯಾಳಾಗಿ ಮಾಡಿಕೊಂಡಿದ್ದ. ಬಳಿಕ ತನ್ನ ಕ್ವಾರ್ಟರ್ಸ್‌ನ ಬಾಲ್ಕನಿಗೆ ಬಂದು ಒಂದರ ಹಿಂದೆ ಒಂದರಂತೆ ಹಲವು ಬಾರಿ ಗುಂಡು ಹಾರಿಸಿದ್ದ. ಇಷ್ಟೆಲ್ಲಾ ಆದ ಮೇಲೆ ತನ್ನನ್ನೇ ತಾನು ಶೂಟ್​​​ ಮಾಡಿಕೊಂಡಿದ್ದಾನೆ.

ಮಾಹಿತಿ ಪಡೆದ ಜೋಧಪುರ ಪೊಲೀಸ್ ಕಮಿಷನರ್ ರವಿದತ್ ಗೌರ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಅಲ್ಲಿಗೆ ಧಾವಿಸಿದ್ದರು. ಸಿಆರ್‌ಪಿಎಫ್ ಜವಾನ್ ನರೇಶ್ ಜಟ್ ಪಾಲಿ ಜಿಲ್ಲೆಯ ರಾಜೋಲಾ ಗ್ರಾಮದ ನಿವಾಸಿ. ನರೇಶ್ ಜಾಟ್ ಕಳೆದ ಮೂರು ವರ್ಷಗಳಿಂದ ಸಿಆರ್‌ಪಿಎಫ್ ತರಬೇತಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಕುಟುಂಬವನ್ನೇ ಒತ್ತೆಯಾಳಾಗಿ ಇಟ್ಟುಕೊಂಡಿದ್ದ ಯೋಧ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಭಾನುವಾರ ಸಂಜೆ 6 ಗಂಟೆ ಸುಮಾರಿಗೆ ಬಾಲ್ಕನಿಯಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದು ಸಿಆರ್‌ಪಿಎಫ್ ಕೇಂದ್ರದಲ್ಲಿ ಸಂಚಲನ ಮೂಡಿಸಿತ್ತು. ಘಟನೆ ತಿಳಿಯುತ್ತಿದ್ದಂತೆ ಸಿಬ್ಬಂದಿ ಅಲ್ಲಿಗೆ ಧಾವಿಸಿ ಮನವೊಲಿಸಲು ಯತ್ನಿಸಿದರು. ಆದರೆ, ಅವರು ಅದೆಲ್ಲವನ್ನೂ ನಿರಾಕರಿಸಿದರು ಮತ್ತು ಅವರ ಕ್ವಾರ್ಟರ್ಸ್‌ ಬಾಗಿಲನ್ನು ತೆರೆಯಲೇ ಇಲ್ಲ.

ಪ್ರಮುಖ ವಿಷಯ ಎಂದರೆ ನರೇಶ್ ತನ್ನೊಂದಿಗೆ 40 ಸುತ್ತು ಗುಂಡುಗಳನ್ನು ಕ್ವಾರ್ಟರ್ಸ್‌ಗೆ ತೆಗೆದುಕೊಂಡು ಹೋಗಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಕ್ವಾರ್ಟರ್ಸ್‌ನಲ್ಲಿ ಅವರ ಪತ್ನಿ ಮತ್ತು ಮಕ್ಕಳೂ ಇದ್ದರು. ಆದರೆ, ಸ್ವಲ್ಪ ಹೊತ್ತಿನ ನಂತರ ಬಾಲ್ಕನಿಗೆ ಬಂದು ಶೂಟ್ ಮಾಡಿ ನಂತರ ವಾಪಸ್ ಹೋಗುತ್ತಿದ್ದರು. ಇದು ತಡರಾತ್ರಿಯವರೆಗೂ ಜರುಗಿತ್ತು.

ಗಲ್ಲದ ಕೆಳಗೆ ಬಂದೂಕು ಇಟ್ಟುಕೊಂಡು ಆತ್ಮಹತ್ಯೆ: ಇಂದು ಬೆಳಗಿನ ಜಾವದವರೆಗೂ ಮನವೊಲಿಸಲು ಯತ್ನಿಸಿದರೂ ಜವಾನ ಒಪ್ಪಲಿಲ್ಲ. ಬೆಳಗ್ಗೆ ಸಿಆರ್‌ಪಿಎಫ್ ಐಜಿ ಎದುರು ಶರಣಾಗುವಂತೆ ಷರತ್ತು ವಿಧಿಸಿದ್ದರು ಎಂದು ಹೇಳಲಾಗುತ್ತಿದೆ. ಹೇಗಿದ್ದರೂ ಕೆಲಸ ಹೋಗುತ್ತದೆ ಎಂದು ಅರಿತಿದ್ದ ಜವಾನ ಈ ಬಗ್ಗೆ ಹೆಂಡತಿಯ ಬಳಿಯೂ ಚರ್ಚಿಸಿದ್ದರಂತೆ.

ಜೈಪುರದಿಂದ ಜೋಧಪುರಕ್ಕೆ ಬಂದಿದ್ದ ಐಜಿ: ಇದರ ನಡುವೆಯೂ ಸಿಆರ್‌ಪಿಎಫ್‌ನ ಐಜಿ ವಿಕ್ರಮ್ ಸೆಹಗಲ್ ಜೈಪುರದಿಂದ ಜೋಧ್‌ಪುರ ತಲುಪಿದ್ದರು. ಬಳಿಕ ಐಜಿ ಜತೆ ಮಾತನಾಡಿದ ಅವರು ಬೆಳಗ್ಗೆ 11.30ರ ಸುಮಾರಿಗೆ ಗಲ್ಲದ ಕೆಳಗೆ ಬಂದೂಕು ಇಟ್ಟುಕೊಂಡು ನಂತರ ಶೂಟ್​ ಮಾಡಿಕೊಂಡಿದ್ದಾರೆ. ಇವರ ಪತ್ನಿ ಮತ್ತು ಮಗು ಸುರಕ್ಷಿತವಾಗಿದ್ದಾರೆ. ಘಟನೆಗೆ ಕಾರಣಗಳು ಇನ್ನೂ ಬಹಿರಂಗವಾಗಿಲ್ಲ. ಜೋಧ್‌ಪುರ ಡಿಸಿಪಿ ಡಾ. ಅಮೃತಾ ದೋಹನ್ ಪ್ರಕಾರ, ಸಿಆರ್‌ಪಿಎಫ್ ಆಡಳಿತದಿಂದ ಅವರು ಕೆಲವು ಕಾರಣಗಳಿಂದ ತೊಂದರೆಗೀಡಾಗಿದ್ದರು ಎಂದು ಹೇಳಲಾಗಿದೆ.

ಈ ತರಬೇತಿ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇವರಿಗೆ ಇಬ್ಬರು ಸಹೋದರರಿದ್ದು, ಓರ್ವ ಟ್ರಾಫಿಕ್ ಪೊಲೀಸ್‌ ಆಗಿ ಕೆಲಸ ಮಾಡುತ್ತಿದ್ದರೆ, ಒಬ್ಬರು ಏಮ್ಸ್‌ನಲ್ಲಿ ವೈದ್ಯರಾಗಿದ್ದಾರೆ.

ಇದನ್ನೂ ಓದಿ : ಮನೆಗೆಲಸ‌ ಮಾಡುವ ಸೋಗಿನಲ್ಲಿ ಮನೆಗಳ್ಳತನ: ಲೇಡಿ ಬಾಂಬೆ ಗ್ಯಾಂಗ್ ಅರೆಸ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.