ನವದೆಹಲಿ: ದೇಶದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಜೋರಾಗಿದೆ. ಕಳೆದ ಕೆಲ ತಿಂಗಳಿಂದ ನಿಯಂತ್ರಣಕ್ಕೆ ಸಿಗದ ರೀತಿಯಲ್ಲಿ ಹರಡುತ್ತಿದ್ದು, ಅನೇಕ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೂ ಹತೋಟಿಗೆ ಬರುತ್ತಿಲ್ಲ. ಡೆಡ್ಲಿ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹೇಗೆ ಹರಡುತ್ತದೆ ಎಂಬುದಕ್ಕೆ ಸಂಬಂಧಿಸಿದಂತೆ ಇದೀಗ ಕೇಂದ್ರ ಸರ್ಕಾರ ಮಹತ್ವದ ಮಾಹಿತಿ ಹಂಚಿಕೊಂಡಿದೆ.
ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ. ವಿಜಯರಾಘವನ್ ಈ ಮಾಹಿತಿ ಹೊರಹಾಕಿದ್ದಾರೆ. ಕೋವಿಡ್ ಲಕ್ಷಣ ರಹಿತ(ಪಾಸಿಟಿವ್ ರೋಗಿ) ವ್ಯಕ್ತಿಯಿಂದ ವೈರಾಣು ಸುತ್ತಮುತ್ತಲಿನ ಅನೇಕರಿಗೆ ಹರಡುವ ಸಾಧ್ಯತೆ ದಟ್ಟವಾಗಿರುತ್ತದೆ ಎಂದು ಅವರು ತಿಳಿಸಿದ್ದು, ಬಾಯಿ ಹಾಗೂ ಮೂಗಿನಿಂದ ಹೊರಬರುವ ಹನಿಗಳಿಂದ(ಲಾಲಾರಸ) ಈ ಸೋಂಕು ತಗುಲುವ ಸಾಧ್ಯತೆ ಇದೆ ಎಂದಿದ್ದಾರೆ. ಪ್ರಮುಖವಾಗಿ ಮನೆಯೊಳಗೆ ಅಥವಾ ನಿರ್ದಿಷ್ಟ ಪ್ರದೇಶದಲ್ಲಿ ಇದು ಹೆಚ್ಚಾಗಿ ಹರಡುವ ಸಾಧ್ಯತೆ ಇರುತ್ತದೆ ಎಂದಿದ್ದಾರೆ.
-
Aerosols and droplets are the key transmission mode of the virus. Aerosols can be carried in the air up to 10 meters: Office of Principal Scientific Adviser to GoI
— ANI (@ANI) May 20, 2021 " class="align-text-top noRightClick twitterSection" data="
">Aerosols and droplets are the key transmission mode of the virus. Aerosols can be carried in the air up to 10 meters: Office of Principal Scientific Adviser to GoI
— ANI (@ANI) May 20, 2021Aerosols and droplets are the key transmission mode of the virus. Aerosols can be carried in the air up to 10 meters: Office of Principal Scientific Adviser to GoI
— ANI (@ANI) May 20, 2021
ಕೋವಿಡ್ ಸೋಂಕಿತ ವ್ಯಕ್ತಿಯ ಬಾಯಿ ಅಥವಾ ಮೂಗಿನಿಂದ ಹೊರಬೀಳುವ ವೈರಾಣುಗಳು 10 ಮೀಟರ್ವರೆಗೆ ಸೋಂಕು ತಗುಲಿಸಬಹುದು. ಆದರೆ, ಈ ವೈರಸ್ ವ್ಯಕ್ತಿಯ ದೇಹದೊಳಗೆ ಹೋದ ಬಳಿಕ ಲಕ್ಷಣಗಳು ಕಾಣಿಸಿಕೊಳ್ಳಲು ಸುಮಾರು ಎರಡು ವಾರಗಳ ಸಮಯವಿರುತ್ತದೆ ಎಂದಿದ್ದಾರೆ. ಇದರ ನಡುವೆ ಆ ವ್ಯಕ್ತಿಯಿಂದ ಮತ್ತಷ್ಟು ಜನರಿಗೆ ಸೋಂಕು ತಗುಲುವ ಸಾಧ್ಯತೆ ದಟ್ಟವಾಗಿರುತ್ತದೆ ಎಂದು ತಿಳಿಸಿದೆ.
ಕೋವಿಡ್ ಲಕ್ಷಣ ರಹಿತ ವ್ಯಕ್ತಿ ಟೆಸ್ಟ್ ಮಾಡಿಸಲು ಮುಂದಾಗುತ್ತಿದ್ದಂತೆ ಆತ ಪ್ರತ್ಯೇಕವಾಗಿ ವಾಸ ಮಾಡುವುದು ಅನಿವಾರ್ಯವಾಗಿದೆ. ವರದಿ ಬರುವವರೆಗೂ ಆತ ಕುಟುಂಬದ ಸದಸ್ಯರೊಂದಿಗೆ ಇದ್ದರೆ ಈ ವೇಳೆ ಸೋಂಕು ಇತರರಿಗೂ ಹಬ್ಬುವ ಸಾಧ್ಯತೆ ಇದೆ ಎಂದಿದೆ.
ಕೋವಿಡ್ ಸೋಂಕು ಕಂಡು ಬಂದಿರುವ ವ್ಯಕ್ತಿ ಮನೆಯಲ್ಲಿ ಐಸೋಲೇಷನ್ ಆಗಿದ್ದರೆ ಎರಡು ಲೇಯರ್ ಮಾಸ್ಕ್ ಅಥವಾ ಎನ್ 95 ಮಾಸ್ಕ್ ಧರಿಸಬೇಕು ಎಂದು ಕೇಂದ್ರ ತಿಳಿಸಿದೆ. ಇತರರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಸಾಮಾಜಿಕ ಅಂತರ ಅಗತ್ಯವಾಗಿದ್ದು, ಈ ವೇಳೆ ಎಲ್ಲ ರೀತಿಯ ಕೋವಿಡ್ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ. ದೇಹಕ್ಕೆ ಉತ್ತಮ ಗಾಳಿ ಸಿಗುವಂತೆ ನೋಡಿಕೊಳ್ಳಿ ಎಂದು ಅವರು ಮಾಹಿತಿ ನೀಡಿದ್ದಾರೆ.
ಕೈಗೊಳ್ಳಬೇಕಾದ ಕ್ರಮಗಳು ಇಂತಿವೆ
- ಕೋವಿಡ್ ಲಕ್ಷಣ ಕಂಡು ಬಂದ ತಕ್ಷಣವೇ ಪರೀಕ್ಷೆ ಮಾಡಿಸುವುದು
- ಪರೀಕ್ಷೆಗೊಳಗಾಗಿ ರಿಪೋರ್ಟ್ ಬರುವವರೆಗೂ ಬೇರೆ ಕಡೆ ವಾಸ
- ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯ
- ಹೋಂ ಐಸೋಲೇಷನ್ ಅಥವಾ ಸೋಂಕಿತ ವ್ಯಕ್ತಿಯನ್ನ ಬೇರ್ಪಡಿಸುವುದು
- ಶಾರೀರಿಕ ಅಂತರ ಕಾಯ್ದುಕೊಳ್ಳುವುದು, ಉತ್ತಮ ಗಾಳಿ, ಬೆಳಕು ಬರುವಂತೆ ನೋಡಿಕೊಳ್ಳಬೇಕು