ETV Bharat / bharat

ಲೈಂಗಿಕ ದೌರ್ಜನ್ಯ ಪ್ರಕರಣ: ವಕೀಲನಿಗೆ 25 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್​ - ಇಬ್ಬರು ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ

ಇಬ್ಬರು ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪ ಸಾಬೀತಾದ ಹಿನ್ನೆಲೆ ವಕೀಲ ಮಹಿರುದ್ದೀನ್​ಗೆ 25 ವರ್ಷಗಳ ಜೈಲು ಶಿಕ್ಷೆಯನ್ನು ಪೋಕ್ಸೋ ನ್ಯಾಯಾಲಯ ವಿಧಿಸಿದೆ. ನಾಲ್ಕು ವರ್ಷಗಳ ಕಾನೂನು ಹೋರಾಟದ ನಂತರ ಈ ತೀರ್ಪು ಬಂದಿದೆ.

ಲೈಂಗಿಕ ದೌರ್ಜನ್ಯ
ಲೈಂಗಿಕ ದೌರ್ಜನ್ಯ
author img

By

Published : Nov 30, 2022, 4:54 PM IST

ಗುವಾಹಟಿ (ಅಸ್ಸೋಂ): ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಸಾಬೀತಾದ ಹಿನ್ನೆಲೆ ವಕೀಲರೊಬ್ಬರಿಗೆ ಕಾಮ್ರೂಪ್​ ಮೆಟ್ರೋಪಾಲಿಟನ್​ ಜಿಲ್ಲೆಯ ಪೋಕ್ಸೋ ನ್ಯಾಯಾಲಯ 25 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. 2018ರಲ್ಲಿ ವಕೀಲರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಕೇಳಿಬಂದಿತ್ತು.

ಬಾಲಕಿಯರು ಟ್ಯೂಷನ್​ಗೆ ಬಂದಿದ್ದಾಗ, ವಕೀಲರಾದ ಮಹಿರುದ್ದೀನ್‌ ಲೈಂಗಿಕ ದೌರ್ಜನ್ಯ ನೀಡಿದ್ದರು. ಈ ಬಗ್ಗೆ ಬಾಲಕಿಯರು ಮನೆಯಲ್ಲಿ ಹೇಳಿದ್ದಾರೆ. ನಂತರ ಜಲುಕ್‌ಬರಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿದ್ದು, ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್​.. ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಎಸ್ಪಿ ಹರಿರಾಮ್ ಶಂಕರ್​ ಸ್ಪಷ್ಟನೆ

ನಾಲ್ಕು ವರ್ಷಗಳ ಕಾನೂನು ಹೋರಾಟದ ನಂತರ, ಮಹಿರುದ್ದೀನ್ ತಪ್ಪಿತಸ್ಥನೆಂದು ಸಾಬೀತಾಗಿದೆ. ಕಾಮ್ರೂಪ್ ಮೆಟ್ರೋಪಾಲಿಟನ್ ಜಿಲ್ಲೆಯ POCSO ನ್ಯಾಯಾಲಯವು ಮಹಿರುದ್ದೀನ್​ಗೆ 25 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ, ಮಂಗಳವಾರ ತೀರ್ಪು ಪ್ರಕಟಿಸಿದೆ. ಇಬ್ಬರು ಸಂತ್ರಸ್ತರಿಗೆ ತಲಾ 50 ಸಾವಿರ ರೂಪಾಯಿ ನೀಡುವಂತೆ POCSO ನ್ಯಾಯಾಲಯ ಸೂಚಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.