ಕೊಯಮತ್ತೂರು: ತಮಿಳುನಾಡು-ಕೇರಳ ಗಡಿಯಲ್ಲಿರುವ ನವಕ್ಕರೈ ರೈಲು ಹಳಿ ಬಳಿ ಭೀಕರ ಘಟನೆ ಜರುಗಿದೆ.
ಆನೆಗಳು ರೈಲು ಹಳಿ ದಾಟುವಾಗ ರಾತ್ರಿ ಸುಮಾರು 9 ಗಂಟೆ ವೇಳೆಗೆ ಮಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ವಯಸ್ಕ ಹೆಣ್ಣು ಆನೆ ಮತ್ತು ಎರಡು ಆನೆ ಮರಿಗಳು ದಾರುಣವಾಗಿ ಸಾವಿಗೀಡಾಗಿವೆ. ಅಪಘಾತದ ನಂತರ ರೈಲು ಚಾಲಕ ರೈಲ್ವೇ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.