ಹೈದರಾಬಾದ್: ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ಎಲ್. ರಾಮದಾಸ್ ತೆಲಂಗಾಣದಲ್ಲಿ ಮುನ್ನಡೆಯುತ್ತಿರುವ 'ಭಾರತ್ ಜೋಡೋ ಯಾತ್ರೆ'ಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಗುರುವಾರ ಹೆಜ್ಜೆ ಹಾಕಿದ್ದಾರೆ. ಗುರುವಾರ ಬೆಳಗ್ಗೆ ನಗರದ ಹೊರವಲಯದಲ್ಲಿರುವ ಪತಂಚೆರುವಿನಿಂದ ಯಾತ್ರೆ ಪುನರಾರಂಭಗೊಂಡಿದ್ದು, ರಾತ್ರಿ ಸಂಗಾರೆಡ್ಡಿ ಜಿಲ್ಲೆಯ ಶಿವಂಪೇಟೆಯಲ್ಲಿ ಯಾತ್ರೆ ವಿರಾಮ ಪಡೆಯಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
-
When veterans hold our hand, a part of their indomitable spirit stays with us.#BharatJodoYatra heartily welcomes former Chief of Naval Staff, Admiral Ramdas & his wife, Lalita Ramdas. pic.twitter.com/6xJq3dgRq0
— Bharat Jodo (@bharatjodo) November 3, 2022 " class="align-text-top noRightClick twitterSection" data="
">When veterans hold our hand, a part of their indomitable spirit stays with us.#BharatJodoYatra heartily welcomes former Chief of Naval Staff, Admiral Ramdas & his wife, Lalita Ramdas. pic.twitter.com/6xJq3dgRq0
— Bharat Jodo (@bharatjodo) November 3, 2022When veterans hold our hand, a part of their indomitable spirit stays with us.#BharatJodoYatra heartily welcomes former Chief of Naval Staff, Admiral Ramdas & his wife, Lalita Ramdas. pic.twitter.com/6xJq3dgRq0
— Bharat Jodo (@bharatjodo) November 3, 2022
ಅಡ್ಮಿರಲ್ ರಾಮದಾಸ್, ನೌಕಾಪಡೆಯ ಮಾಜಿ ಮುಖ್ಯಸ್ಥರು, 89 ನೇ ವಯಸ್ಸಿನಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಅವಿಶ್ರಾಂತ ಪ್ರಚಾರಕರಾಗಿ ಮುಂದುವರೆದಿದ್ದಾರೆ. ಅವರ ಪತ್ನಿ ಲಲಿತಾ ರಾಮದಾಸ್. ಇವರು ಭಾರತೀಯ ನೌಕಾಪಡೆಯ 1ನೇ ಮುಖ್ಯಸ್ಥ ಅಡ್ಮಿರಲ್ ಕಟಾರಿ ಅವರ ಪುತ್ರಿ. ಈ ದಿನದಂದು ರಾಹುಲ್ ಗಾಂಧಿ ಅವರೊಂದಿಗೆ ನಡೆದರು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಸಂಪರ್ಕ ಉಸ್ತುವಾರಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮತ್ತು ಸಂಸದ ಎ. ರೇವಂತ್ ರೆಡ್ಡಿ, ಲೋಕಸಭಾ ಸದಸ್ಯ ಎನ್. ಉತ್ತಮ್ ಕುಮಾರ್ ರೆಡ್ಡಿ ಮತ್ತು ಪಕ್ಷದ ಇತರ ಮುಖಂಡರು ಬೆಳಗ್ಗೆ ಯಾತ್ರೆಯಲ್ಲಿ ಗಾಂಧಿ ಅವರೊಂದಿಗೆ ನಡೆದರು ಎಂದು ಮೂಲಗಳು ತಿಳಿಸಿವೆ.
ರಾಹುಲ್ ನೇತೃತ್ವದ ಮೆಗಾ ಭಾರತ್ ಜೋಡೊ ಯಾತ್ರೆ ಅಕ್ಟೋಬರ್ 23 ರಂದು ತೆಲಂಗಾಣ ಪ್ರವೇಶಿಸಿತ್ತು. ಯಾತ್ರೆಯ ತೆಲಂಗಾಣ ಘಟ್ಟವು ನವೆಂಬರ್ 7 ರಂದು ಮುಕ್ತಾಯಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಯಾತ್ರೆ ಆರಂಭವಾಗಿತ್ತು.
ಇದನ್ನೂ ಓದಿ: ಭಾರತ್ ಜೋಡೊ ಯಾತ್ರೆ ಸಂಯೋಜಕರಾಗಿ ಉಡುಪಿಯ ಆಚಾರ್ಯ ನೇಮಕ