ETV Bharat / bharat

ಆಧಾರ್‌ನಲ್ಲಿ ಮಗುವಿನ ಹೆಸರು 'ಮಧುವಿನ ಐದನೇ ಮಗು'!: ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಏನನ್ನಬೇಕು? - ಮಧುವಿನ ಐದನೇ ಮಗು

ಉತ್ತರ ಪ್ರದೇಶದಲ್ಲಿ ಬಾಲಕಿಯೊಬ್ಬಳಿಗೆ ನೀಡಿದ ಆಧಾರ್​ ಕಾರ್ಡ್​ನಲ್ಲಿ ದೊಡ್ಡ ಎಡವಟ್ಟಾಗಿದ್ದು, ಬ್ಯಾಂಕ್ ಮತ್ತು ಅಂಚೆ ಕಚೇರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗುವುದು ಎಂದು ಬದೌನ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.

adhaar card mistake  in uttara pradesh
ಆಧಾರ್​ ಕಾರ್ಡ್​ನಲ್ಲಿ ಭಾರಿ ಯಡವಟ್ಟು, ಹೆಸರಿನ ಬದಲಿಗೆ ಬಂತು....
author img

By

Published : Apr 5, 2022, 8:16 AM IST

Updated : Apr 5, 2022, 9:57 AM IST

ಬದೌನ್(ಉತ್ತರ ಪ್ರದೇಶ): ಆಧಾರ್ ಕಾರ್ಡ್​ಗಳಲ್ಲಿ ದೋಷಗಳಿರುವುದು ವರದಿಯಾಗುತ್ತಲೇ ಇರುತ್ತವೆ. ಒಮ್ಮೊಮ್ಮೆ ಈ ತಪ್ಪುಗಳನ್ನು ಆಧಾರ್ ಸಿಬ್ಬಂದಿ ಬೇಕೆಂತಲೇ ಮಾಡುತ್ತಾರೇನೋ ಎಂಬ ಅನುಮಾನಗಳು ಕಾಡುತ್ತವೆ. ಅದಕ್ಕೊಂದು ಸ್ಪಷ್ಟ ಉದಾಹರಣೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಬಿಲ್ಸಿ ತಹಸಿಲ್‌ನ ರಾಯ್‌ಪುರ ಗ್ರಾಮದ ದಿನೇಶ್ ಮತ್ತು ಮಧು ದಂಪತಿ ತನ್ನ ಮಗಳು ಆರತಿಯನ್ನು ಶಾಲೆಗೆ ಸೇರಿಸಲು ಕರೆದೊಯ್ದಾಗ ವಿಷಯ ಬೆಳಕಿಗೆ ಬಂದಿದೆ.

ಶಾಲೆಯ ಶಿಕ್ಷಕಿಗೆ ಮಗಳ ಆಧಾರ್​ ಕಾರ್ಡ್​ ನೀಡಿದಾಗ ಅದರಲ್ಲಿ ಆರತಿ ಎಂಬ ಹೆಸರಿನ ಬದಲಿಗೆ 'ಮಧುವಿನ ಐದನೇ ಮಗು' ಎಂದು ನಮೂದಿಸಲಾಗಿದೆ. ಇದನ್ನು ನೋಡಿ ನಕ್ಕ ಶಿಕ್ಷಕಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಂಡು ಬರುವಂತೆ ಪೋಷಕರಿಗೆ ಸೂಚನೆ ನೀಡಿದ್ದಾರೆ. ಇದೇ ವೇಳೆ, ಮಗುವಿಗೆ ಶಾಲಾ ದಾಖಲಾತಿ ನಿರಾಕರಿಸಲಾಗಿದೆ ಎನ್ನಲಾಗಿದೆ. ಆರತಿಗೆ ನೀಡಿರುವ ಆಧಾರ್ ಕಾರ್ಡ್​ನಲ್ಲಿ 12 ಅಂಕೆಗಳ ಆಧಾರ್ ನಂಬರ್ ಕೂಡಾ ಇಲ್ಲ ಅನ್ನೋದು ಮತ್ತೊಂದು ಅಚ್ಚರಿಯ ವಿಚಾರ.

ಆಧಾರ್​ ಕಾರ್ಡ್​ನಲ್ಲಿ ದೋಷಕ್ಕೆ ಸಂಬಂಧಿಸಿದಂತೆ ಪೋಷಕರ ಮಾತು

ಈ ಕುರಿತು ಬಾಲಕಿಯ ತಂದೆ ದಿನೇಶ್ ಮಾತನಾಡಿ, 'ಶಾಲೆಯಲ್ಲಿ ಆಧಾರ್ ಕಾರ್ಡ್ ದೋಷದ ಕಾರಣದಿಂದ ನಗೆಪಾಟಲಿಗೆಗೀಡಾಗಬೇಕಾಯಿತು. ನಾನು ಬಡವ, ಐವರು ಮಕ್ಕಳೊಂದಿಗೆ ಗುಡಿಸಲಿನಲ್ಲಿ ವಾಸಿಸುತ್ತಿದ್ದೇನೆ. ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಅನ್ನೋದು ನನ್ನ ಮಹದಾಸೆ. ಆಧಾರ್ ಕಾರ್ಡ್‌ನಲ್ಲಿನ ವ್ಯತ್ಯಾಸದಿಂದ ಹೆಣ್ಣು ಮಗುವಿಗೆ ಪ್ರವೇಶ ಸಿಗುತ್ತಿಲ್ಲ' ಎಂದು ಅಲವತ್ತುಕೊಂಡರು. ದಂಪತಿ ಅನಕ್ಷರಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ.

ಬದೌನ್ ಜಿಲ್ಲಾ ಮ್ಯಾಜಿಸ್ಟ್ರೇಟ್ ದೀಪಾ ರಂಜನ್ ಈ ಕುರಿತು ಪ್ರತಿಕ್ರಿಯಿಸಿ, 'ಬ್ಯಾಂಕ್ ಮತ್ತು ಅಂಚೆ ಕಚೇರಿಗಳಲ್ಲಿ ಆಧಾರ್ ಕಾರ್ಡ್ ಮಾಡಲಾಗುತ್ತಿದೆ. ಸಿಬ್ಬಂದಿ ನಿರ್ಲಕ್ಷ್ಯದಿಂದ ಈ ತಪ್ಪು ನಡೆದಿದೆ. ಹೀಗಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗುವುದು. ಇಂತಹ ನಿರ್ಲಕ್ಷ್ಯ ತೋರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದರು.

ಇದನ್ನೂ ಓದಿ: ಕೊರಿಯರ್​ನಲ್ಲಿ ಶಸ್ತ್ರಾಸ್ತ್ರ ಸಾಗಣೆ.. ಆರೋಪಿಗಳ ಬಂಧನ

Last Updated : Apr 5, 2022, 9:57 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.