ETV Bharat / bharat

ಕೋವಿಡ್​ 19 ರ ಪ್ರಚಲಿತ ತಳಿಯು ಹೆಚ್ಚು ಅಪಾಯಕಾರಿಯಾಗಿಲ್ಲ: ಅದಾರ್‌ ಪೂನಾವಲಾ - etv bharat kannada

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಐದರಿಂದ ಆರು ಮಿಲಿಯನ್ ಕೋವೊವ್ಯಾಕ್ಸ್ ಲಸಿಕೆ ಡೋಸ್‌ಗಳನ್ನು ಉತ್ಪಾದಿಸಿದೆ ಎಂದು ಕಂಪನಿಯ ಸಿಇಒ ಅದಾರ್‌ ಪೂನಾವಲಾ ತಿಳಿಸಿದ್ದಾರೆ.

adar-poonawalla-reaction-on-current-corona-strain
ಕೋವಿಡ್​ 19 ರ ಪ್ರಚಲಿತ ತಳಿಯು ಹೆಚ್ಚು ಅಪಾಯಕಾರಿಯಾಗಿಲ್ಲ: ಅದಾರ್‌ ಪೂನಾವಲಾ
author img

By

Published : Apr 22, 2023, 6:54 PM IST

ಪುಣೆ(ಮಹಾರಾಷ್ಟ್ರ): ಕೋವಿಡ್​ -19 ರ ಪ್ರಚಲಿತ ತಳಿಯು ಹೆಚ್ಚು ಅಪಾಯಕಾರಿಯಾಗಿಲ್ಲ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಈಗಾಗಲೇ ಐದರಿಂದ ಆರು ಮಿಲಿಯನ್ ಕೋವೊವ್ಯಾಕ್ಸ್ ಲಸಿಕೆ ಡೋಸ್‌ಗಳನ್ನು ಉತ್ಪಾದಿಸಿದೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದಾರ್‌ ಪೂನಾವಲಾ ಶನಿವಾರ ಹೇಳಿದರು. ಕಾರ್ಯಕ್ರಮವೊಂದಕ್ಕೆ ಪುಣೆಗೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

“ಪ್ರಸ್ತುತ, COVID ಸ್ಟ್ರೈನ್ ತೀವ್ರವಾಗಿಲ್ಲ, ಇದು ಕೇವಲ ಸೌಮ್ಯವಾಗಿದೆ. ಕೇವಲ ಮುನ್ನೆಚ್ಚರಿಕೆ ಕ್ರಮಗಳಿಗಾಗಿ ವಯಸ್ಸಾದ ಜನರು ಬೂಸ್ಟರ್ ಡೋಸ್ ಅನ್ನು ಪಡೆಯಬಹುದು. ಆದರೆ ಅದನ್ನು ತೆಗೆದುಕೊಳ್ಳಬೇಕೆ ಅಥವಾ ಬೇಡವೇ ಎಂಬುದು ಅವರ ಆಯ್ಕೆಯಾಗಿದೆ. ಐದರಿಂದ ಆರು ಮಿಲಿಯನ್ ಡೋಸ್ ಕೋವೊವಾಕ್ಸ್ ಲಭ್ಯವಿದೆ. ಮುಂದಿನ ಎರಡು ಮೂರು ತಿಂಗಳಲ್ಲಿ ನಾವು ಅದೇ ಪ್ರಮಾಣದ ಕೋವಿಶೀಲ್ಡ್ ಡೋಸ್‌ಗಳನ್ನು ಉತ್ಪಾದಿಸುತ್ತೇವೆ ”ಎಂದು ಪೂನಾವಾಲಾ ಹೇಳಿದರು.

“ನಾವು ಯುಎಸ್​ ಮತ್ತು ಯುರೋಪ್​ಗೆ ಕೋವೊವ್ಯಾಕ್ಸ್ ಅನ್ನು ಒದಗಿಸುತ್ತಿದ್ದೇವೆ. ಯುಎಸ್ ಮತ್ತು ಯುರೋಪ್​ನಲ್ಲಿ ಅನುಮೋದಿಸಲ್ಪಟ್ಟ ಭಾರತದಲ್ಲಿ ತಯಾರಿಸಲಾದ ಏಕೈಕ ಕೋವಿಡ್ ಲಸಿಕೆ ಇದಾಗಿದೆ. ಪ್ರಸ್ತುತ, ಇದರ ಬೇಡಿಕೆ ತುಂಬಾ ಕಡಿಮೆ ಇದೆ ಎಂದು ಪೂನಾವಾಲಾ ತಿಳಿಸಿದರು.

ಕೆಲವು ದಿನಗಳ ಹಿಂದೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ದೆಹಲಿಯಲ್ಲಿ ಎಲ್ಲ ರಾಜ್ಯಗಳ ಆರೋಗ್ಯ ಸಚಿವರ ಜೊತೆ ಸಭೆ ನಡೆಸಿದ್ದರು ಮತ್ತು ಈ ಸಭೆಯಲ್ಲಿ ಕರೊನಾ ಏಕಾಏಕಿ ಹೆಚ್ಚಾದರೆ ಯಾವ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಚರ್ಚಿಸಿದ್ದರು. ಈ ನಿಟ್ಟಿನಲ್ಲಿ ಹಲವು ನಗರಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಆದೇಶ ನೀಡಲಾಗಿತ್ತು. ಹಳೆಯ ಆಸ್ಪತ್ರೆಯನ್ನು ತೆರೆಯಲು ಸಿದ್ಧತೆ ನಡೆಸಲಾಗಿತ್ತು. ಭಾರತದಲ್ಲಿ 24 ಗಂಟೆಗಳ ಅವಧಿಯಲ್ಲಿ 12,193 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದು, ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 67,556 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.

ಇದನ್ನೂ ಓದಿ:ಅಸ್ಥಿ ಸಂಧಿವಾತಕ್ಕೆ ಚುಚ್ಚುಮದ್ದಿನ ಕೋಶ ಚಿಕಿತ್ಸೆ: ಸಂಶೋಧಕರ ಹೊಸ ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.