ETV Bharat / bharat

ಹಿಂಡೆನ್​ಬರ್ಗ್​ ವಿರುದ್ಧ ಕಾನೂನು ಹೋರಾಟಕ್ಕೆ ಯುಎಸ್​ ಲಾ ಫರ್ಮ್ ನೇಮಿಸಿಕೊಂಡ ಅದಾನಿ

ಶಾರ್ಟ್ ಸೆಲ್ಲರ್ ಕಂಪನಿ ಹಿಂಡೆನ್​ಬರ್ಗ್​ ಕಂಪನಿ ತನ್ನ ವಿರುದ್ಧ ಮಾಡಲಾದ ಆರೋಪಗಳ ಬಗ್ಗೆ ಕಾನೂನಾತ್ಮಕವಾಗಿ ಹೋರಾಡಲು ನ್ಯೂಯಾರ್ಕ್ ಮೂಲದ ಕಾನೂನು ಸಂಸ್ಥೆ ವಾಚ್ ಟೆಲ್ ಎಂಬ ಸಂಸ್ಥೆಯನ್ನು ನೇಮಿಸಿಕೊಂಡಿದೆ.

author img

By

Published : Feb 10, 2023, 5:52 PM IST

Adani Group hires US law firm in fight against Hindenburg Report

ನವದೆಹಲಿ: ಹಿಂಡೆನ್‌ಬರ್ಗ್ ರಿಸರ್ಚ್ ಹೆಸರಿನ ಸಂಸ್ಥೆಯು ತನ್ನ ವಿರುದ್ಧ ಮಾಡಲಾದ ಆರೋಪಗಳ ವಿರುದ್ಧ ಕಾನೂನಾತ್ಮಕವಾಗಿ ಹೋರಾಡಲು ಅದಾನಿ ಗ್ರೂಪ್, ಅಮೆರಿಕ ಮೂಲದ ಕಾನೂನು ಸಲಹಾ ಸಂಸ್ಥೆ ವಾಚ್​ಟೆಲ್​ ಅನ್ನು ನೇಮಿಸಿಕೊಂಡಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಬ್ರಿಟಿಷ್ ಮಾಧ್ಯಮಗಳ ಪ್ರಕಾರ ಅದಾನಿ ಗ್ರೂಪ್ ವಾಚ್‌ಟೆಲ್, ಲಿಪ್ಟನ್, ರೋಸೆನ್ ಮತ್ತು ಕಾಟ್ಜ್‌ನ ಹಿರಿಯ ವಕೀಲರನ್ನು ಸಂಪರ್ಕಿಸಿದ್ದು, ತನ್ನ ಸಮೂಹ ಎದುರಿಸುತ್ತಿರುವ ಬಿಕ್ಕಟ್ಟನ್ನು ಹೇಗೆ ಎದುರಿಸಬಹುದು ಎಂಬ ಬಗ್ಗೆ ಸಲಹೆ ಕೇಳಿದೆ. ನ್ಯೂಯಾರ್ಕ್ ಮೂಲದ ಕಾನೂನು ಸಂಸ್ಥೆ ವಾಚ್ ಟೆಲ್ ಕಾರ್ಪೊರೇಟ್ ಕಾನೂನಿನಲ್ಲಿ ಪರಿಣತಿಯನ್ನು ಹೊಂದಿದೆ. ಇದು ನಿಯಮಿತವಾಗಿ ದೊಡ್ಡ ಮತ್ತು ಸಂಕೀರ್ಣ ವಹಿವಾಟುಗಳನ್ನು ನಿರ್ವಹಿಸುತ್ತದೆ.

ಅದಾನಿ ಗ್ರೂಪ್ ಸಮೂಹವು ತನ್ನ ಷೇರು ಬೆಲೆಗಳಲ್ಲಿ ಹಸ್ತಕ್ಷೇಪ ಮಾಡಿ, ವಂಚನೆಗಳನ್ನು ಎಸಗಿದೆ ಎಂದು ಆರೋಪಿಸಿದ ವರದಿಯ ನಂತರ ಕಳೆದ ವಾರದಲ್ಲಿ, ಅದಾನಿ ಗ್ರೂಪ್‌ನ ಷೇರುಗಳ ಬೆಲೆಗಳು ಗಣನೀಯವಾಗಿ ಕುಸಿದಿವೆ. ಹಿಂಡೆನ್‌ಬರ್ಗ್ ಒಂದು ಅನೈತಿಕ ಶಾರ್ಟ್ ಸೆಲ್ಲರ್ ಕಂಪನಿ ಎಂದು ಅದಾನಿ ಗ್ರೂಪ್ ವಾಗ್ದಾಳಿ ನಡೆಸಿದೆ. ನ್ಯೂಯಾರ್ಕ್ ಮೂಲದ ಹಿಂಡೆನ್​ಬರ್ಗ್ ವರದಿಯು ಸುಳ್ಳೇ ಹೊರತು ಬೇರೇನೂ ಅಲ್ಲ ಎಂದು ಹೇಳಿದೆ. ಅದಾನಿ ಸಮೂಹದ ಷೇರು ಬೆಲೆಗಳ ಕುಸಿತ ಸತತವಾಗಿ ಮುಂದುವರಿದ ಕಾರಣದಿಂದ ಸಮೂಹದ ಪ್ರಮುಖ ಸಂಸ್ಥೆಯಾದ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್, ಸಂಪೂರ್ಣವಾಗಿ ಸಬ್​ಸ್ಕ್ರೈಬ್ ಆಗಿದ್ದ 20,000 ಕೋಟಿ ರೂ. ಫಾಲೋ ಆನ್ ಸಾರ್ವಜನಿಕ ಆಫರ್ ರದ್ದುಗೊಳಿಸುವಂತೆ ಮಾಡಿದೆ.

ಹಿಂಡೆನ್‌ಬರ್ಗ್ ರಿಸರ್ಚ್‌ನ ಇತ್ತೀಚಿನ ವರದಿಯು ಕೇವಲ ಒಂದು ನಿರ್ದಿಷ್ಟ ಕಂಪನಿಯ ಮೇಲಿನ ದಾಳಿಯಲ್ಲ. ಇದು ಭಾರತ, ಅದರ ಬೆಳವಣಿಗೆಯ ಕಥೆ ಮತ್ತು ಮಹತ್ವಾಕಾಂಕ್ಷೆಗಳ ಮೇಲೆ ನಡೆಸಲಾದ ವ್ಯವಸ್ಥಿತ ದಾಳಿ ಎಂದು ಜನವರಿ 29 ರಂದು ಅದಾನಿ ಗ್ರೂಪ್ 413 ಪುಟಗಳ ಸುದೀರ್ಘ ವರದಿಯಲ್ಲಿ ಹೇಳಿದೆ.

ಯುಎಸ್ ಮೂಲದ ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ ರಿಸರ್ಚ್‌ನ ವರದಿಯ ನಂತರ ಮಾರುಕಟ್ಟೆ ಮೌಲ್ಯದಲ್ಲಿ ಗಮನಾರ್ಹ ಮತ್ತು ತ್ವರಿತ ಕುಸಿತದ ನಂತರ ಮೂಡೀಸ್ ಇನ್ವೆಸ್ಟರ್ ಸರ್ವೀಸ್ ಶುಕ್ರವಾರ ನಾಲ್ಕು ಅದಾನಿ ಗ್ರೂಪ್ ಕಂಪನಿಗಳ ರೇಟಿಂಗ್ ದೃಷ್ಟಿಕೋನವನ್ನು ಸ್ಥಿರದಿಂದ ಋಣಾತ್ಮಕವಾಗಿ (ಪಾಸಿಟಿವ್​ನಿಂದ ನೆಗೆಟಿವ್) ಪರಿಷ್ಕರಿಸಿದೆ. ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್, ಅದಾನಿ ಗ್ರೀನ್ ಎನರ್ಜಿ ರಿಸ್ಟ್ರಿಕ್ಟೆಡ್ ಗ್ರೂಪ್, ಅದಾನಿ ಟ್ರಾನ್ಸ್‌ಮಿಷನ್ ಸ್ಟೆಪ್-ಒನ್ ಲಿಮಿಟೆಡ್ ಮತ್ತು ಅದಾನಿ ಇಲೆಕ್ಟ್ರಿಸಿಟಿ ಮುಂಬೈ ಲಿಮಿಟೆಡ್‌ನ ರೇಟಿಂಗ್ ಔಟ್‌ಲುಕ್ ಅನ್ನು ಸ್ಥಿರದಿಂದ ಋಣಾತ್ಮಕವಾಗಿ ಬದಲಾಯಿಸಲಾಗಿದೆ ಎಂದು ಮೂಡೀಸ್ ಹೇಳಿಕೆಯಲ್ಲಿ ತಿಳಿಸಿದೆ.

ಭಾರತದ ಮಾರುಕಟ್ಟೆ ನಿಯಂತ್ರಕ ಸೆಬಿ, ಅದಾನಿ ಗ್ರೂಪ್‌ನ ಕೆಲವು ಹೂಡಿಕೆದಾರರ 2.5 ಶತಕೋಟಿ ಡಾಲರ್ ಷೇರುಗಳ ಮಾರಾಟವನ್ನು ಸ್ಥಗಿತಗೊಳಿಸಿರುವ ಕುರಿತು ತನಿಖೆ ನಡೆಸುತ್ತಿದೆ ಎಂದು ಎರಡು ಮೂಲಗಳು ತಿಳಿಸಿವೆ. ಭಾರತೀಯ ಸೆಕ್ಯುರಿಟೀಸ್ ಕಾನೂನುಗಳ ಯಾವುದೇ ಸಂಭಾವ್ಯ ಉಲ್ಲಂಘನೆ ಅಥವಾ ಷೇರು ಮಾರಾಟ ಪ್ರಕ್ರಿಯೆಯಲ್ಲಿ ಯಾವುದೇ ಹಿತಾಸಕ್ತಿ ಸಂಘರ್ಷ ಎದುರಾಗಿರುವ ಬಗ್ಗೆ ಸೆಬಿ ಪರಿಶೀಲಿಸುತ್ತಿದೆ ಎಂದು ಈ ವಿಷಯದ ನೇರ ಜ್ಞಾನವನ್ನು ಹೊಂದಿರುವ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಪೋರ್ಬ್ಸ್​ ಬಿಲಿಯನೇರ್​​ಗಳ ಪಟ್ಟಿಯಲ್ಲಿ ಮತ್ತೆ ಸ್ಥಾನ ಪಡೆದ ಅದಾನಿ.. ಅಂಬಾನಿ ಸಂಪತ್ತೂ ಹೆಚ್ಚಳ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.