ETV Bharat / bharat

ಹರಿದ್ವಾರಕ್ಕೆ ಬಂದ ನಟಿ ಊರ್ವಶಿ ರೌಟೆಲಾ.. ತಾಯಿ ಜೊತೆ ರಿಕ್ಷಾ ಪ್ರಯಾಣ ಮಾಡಿ ಮನಗೆದ್ದ ರೂಪದರ್ಶಿ.. - ಬಾಲಿವುಡ್ ನಟಿ ಊರ್ವಶಿ ರೌಟೆಲಾ

ಬಾಲಿವುಡ್ ನಟಿ ಊರ್ವಶಿ ರೌಟೆಲಾ ಅವರು ಮಂಗಳವಾರ ಸಂಜೆ ಹರಿದ್ವಾರದ ಗಂಗಾ ಆರತಿಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಇಂದು ತನ್ನ ತಾಯಿಯೊಂದಿಗೆ ಅವರು ಮುಂಬೈಗೆ ತೆರಳಿದ್ದಾರೆ.

actress-urvashi-rautela-visit-haridwar-with-her-mother
ತಾಯಿ ಜೊತೆ ರಿಕ್ಷಾ ಪ್ರಯಾಣ ಮಾಡಿದ ನಟಿ
author img

By

Published : Oct 6, 2021, 6:28 PM IST

ಹರಿದ್ವಾರ: ಬಾಲಿವುಡ್ ನಟಿ ಹಾಗೂ ರೂಪದರ್ಶಿ ಊರ್ವಶಿ ರೌಟೆಲಾ ನಿನ್ನೆ (ಮಂಗಳವಾರ) ಹರಿದ್ವಾರಕ್ಕೆ ಬಂದಿದ್ದರು. ಅಲ್ಲಿ ತನ್ನ ತಾಯಿಯೊಂದಿಗೆ ಆಟೋ ರಿಕ್ಷಾದಲ್ಲಿ ಸವಾರಿ ಮಾಡಿ ಅಭಿಮಾನಿಗಳ ಮನ ಸೆಳೆದಿದ್ದಾರೆ.

ನಟಿ ತನ್ನ ಸಂಬಂಧಿಕರೊಬ್ಬರ ಶ್ರದ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಲು ಬಂದಿರುವುದಾಗಿ ಹೇಳಿದ್ದಾರೆ. ಮಂಗಳವಾರ ಸಂಜೆ ಹರಿದ್ವಾರದ ಗಂಗಾ ಆರತಿಯಲ್ಲಿ ಅವರು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಇಂದು ತನ್ನ ತಾಯಿಯೊಂದಿಗೆ ಅವರು ಮುಂಬೈಗೆ ತೆರಳಿದರು.

ತಾಯಿ ಜೊತೆ ರಿಕ್ಷಾ ಪ್ರಯಾಣ ಮಾಡಿದ ನಟಿ ಊರ್ವಶಿ ರೌಟೆಲಾ

ಕೊರೊನಾ ಅವಧಿಯಲ್ಲಿ ಆಮ್ಲಜನಕ ವಿತರಣೆ: ನಟಿ ಊರ್ವಶಿ ರೌಟೆಲಾ ಉತ್ತರಾಖಂಡದ ಕೊರೊನಾ ರೋಗಿಗಳಿಗೆ ಅನೇಕ ಆಮ್ಲಜನಕದ ಸಾಂದ್ರಕಗಳನ್ನು ದಾನ ಮಾಡಿದ್ದರು. ಈ ಮಾಹಿತಿಯನ್ನು ನಟಿ ಸ್ವತಃ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಕೊರೊನಾ ಸಮಯದಲ್ಲೂ ನಿರ್ಗತಿಕರಿಗೆ ಸಹಾಯ ಮಾಡಲು ಮುಂದಾದ ಅವರ ನಡೆಯನ್ನು ಅಭಿಮಾನಿಗಳು ಶ್ಲಾಘಿಸಿದ್ದಾರೆ.

ನಟಿ ಜನಿಸಿರುವುದು ಹರಿದ್ವಾರದ ಖನ್ನಾ ನಗರದಲ್ಲಿ. ಅವರು ತಮ್ಮ ಆರಂಭಿಕ ಅಧ್ಯಯನವನ್ನು ಉತ್ತರಾಖಂಡದಲ್ಲಿಯೇ ಮಾಡಿದ್ದಾರೆ. ಇತ್ತೀಚೆಗೆ ಅವರಿಗೆ ದುಬೈನ ಪೌರತ್ವ ನೀಡಲಾಗಿದೆ. ಅಲ್ಲದೇ, ಅವರಿಗೆ 10 ವರ್ಷಗಳ ಸುವರ್ಣ ವೀಸಾ ಸಹ ನೀಡಲಾಗಿದೆ.

ಓದಿ: 'India's Space Odyssey'ಗೆ ಧ್ವನಿ ನೀಡಿದ ಮಾಧವನ್​.. ಡಿಸ್ಕವರಿ ಇಂಡಿಯಾಕ್ಕೆ ಧನ್ಯವಾದ ತಿಳಿಸಿದ ನಟ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.