ETV Bharat / bharat

ಯೋಗಿ ಭೇಟಿ ಮಾಡಿದ ಕಂಗನಾ: ವಿಧಾನಸಭೆ ಚುನಾವಣೆಗೆ ವಿಶ್​​ ಮಾಡಿದ ಬಾಲಿವುಡ್ ನಟಿ

author img

By

Published : Oct 1, 2021, 8:56 PM IST

Updated : Oct 1, 2021, 9:45 PM IST

ಮುಂದಿನ ವರ್ಷ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದರ ಬೆನ್ನಲ್ಲೇ ಬಾಲಿವುಡ್ ನಟಿ ಕಂಗನಾ ಇಂದು ಯೋಗಿ ಆದಿತ್ಯನಾಥ್​ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

Kangana Ranaut meets CM Yogi
Kangana Ranaut meets CM Yogi

ಲಕ್ನೋ(ಉತ್ತರ ಪ್ರದೇಶ): ಬಾಲಿವುಡ್​ ಕ್ವೀನ್​​ ಕಂಗನಾ ರಣಾವತ್​ ಇಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರನ್ನು ಭೇಟಿ ಮಾಡಿದ್ದು, ಅವರ ನಿವಾಸದಲ್ಲಿ ಕೆಲ ಗಂಟೆಗಳ ಕಾಲ ಮಹತ್ವದ ಚರ್ಚೆ ನಡೆಸಿದರು.

ವರದಿಗಳ ಪ್ರಕಾರ, ಇದು ಕಂಗನಾ ರಣಾವತ್​ ಮತ್ತು ಸಿಎಂ ಯೋಗಿ ಆದಿತ್ಯನಾಥ್​ ಅವರ ನಡುವಿನ ಸೌಜನ್ಯದ ಭೇಟಿ ಎನ್ನಲಾಗಿದೆ. ಆದರೆ ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಕಾರಣ, ಈ ಭೇಟಿ ಮಹತ್ವ ಪಡೆದುಕೊಂಡಿದೆ.

ಭೇಟಿ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು, ನಟಿಗೆ ಅಯೋಧ್ಯೆ ರಾಮಜನ್ಮಭೂಮಿ ಪೂಜೆ ಸಂದರ್ಭದಲ್ಲಿ ಬಳಕೆ ಮಾಡಿದ್ದ ನಾಣ್ಯ ಉಡುಗೊರೆಯಾಗಿ ನೀಡಿದ್ದಾಗಿ ತಿಳಿದು ಬಂದಿದೆ. ಇನ್ನು ಯೋಗಿ ಆದಿತ್ಯನಾಥ್​ ಅವರನ್ನ ಭೇಟಿಯಾಗಿರುವುದಕ್ಕೆ ಸಂಬಂಧಿಸಿದಂತೆ ಕಂಗನಾ ತಮ್ಮ ಇನ್​​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಈ ವೇಳೆ ಯೋಗಿ ಆದಿತ್ಯನಾಥ್​ ಅವರ ಕಾರ್ಯದ ಬಗ್ಗೆ ನಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಕಂಗನಾ ರಣಾವತ್​ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ದಿವಂಗತ ಜೆ. ಜಯಲಲಿತಾ ಅವರ ಬಯೋಗ್ರಫಿಯಲ್ಲಿ ನಟಿಸಿದ್ದು, ಚಿತ್ರ ಈಗಾಗಲೇ ತೆರೆ ಕಂಡಿದೆ.

Last Updated : Oct 1, 2021, 9:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.