ETV Bharat / bharat

ನಟಿ ಜಯಪ್ರದಾ ESI ಪ್ರಕರಣ: ಮದ್ರಾಸ್​ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ ನಟಿ.. ಇಎಸ್​​ಐಗೆ ಉತ್ತರಿಸುವಂತೆ ಆದೇಶ​

Actress Jayaprada ESI case: 6 ತಿಂಗಳ ಜೈಲು ಶಿಕ್ಷೆ ರದ್ದು ಕೋರಿ ನಟಿ ಜಯಪ್ರದಾ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ಇಎಎಸ್​ಐ(ESI) ಕಂಪನಿಗೆ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ.

ನಟಿ
ನಟಿ
author img

By ETV Bharat Karnataka Team

Published : Oct 7, 2023, 9:03 AM IST

Updated : Oct 7, 2023, 10:48 AM IST

ಚೆನ್ನೈ (ತಮಿಳುನಾಡು): ಶುಕ್ರವಾರ(ಇಂದು) ಮದ್ರಾಸ್ ಹೈಕೋರ್ಟ್​ನ ನ್ಯಾಯಮೂರ್ತಿ ಜಯಚಂದ್ರ ಅವರು ನಟಿ ಜಯಪ್ರದಾ ಅವರ ಪ್ರಕರಣಕ್ಕೆ ಸಂಬಂಧಿಸಿ ಇಎಸ್​ಐ(ESI) ಕಂಪನಿಗೆ ಪ್ರತಿಕ್ರಿಯೆ ನೀಡುವಂತೆ ಆದೇಶಿಸಿದೆ. ಜೊತೆಗೆ ನಟಿ ಜಯಪ್ರದಾ ಅವರ ಮೇಲ್ಮನವಿ ವಿಚಾರಣೆಯನ್ನು 18ಕ್ಕೆ ಮುಂದೂಡಲಾಗಿದೆ.

ಏನಿದು ಪ್ರಕರಣ?: ಜಯಪ್ರದಾ ಅವರು ಚೆನ್ನೈನ ರಾಯಪೇಟಾದಲ್ಲಿ ಚಿತ್ರಮಂದಿರ ಹೊಂದಿದ್ದಾರೆ. ಚೆನ್ನೈನ ರಾಮ್ ಕುಮಾರ್ ಅಣ್ಣಾ ರಸ್ತೆಯಲ್ಲಿ ರಾಜಬಾಬು ಜತೆ ಸೇರಿ ಚಿತ್ರಮಂದಿರ ನಡೆಸುತ್ತಿದ್ದರು. ಆಗ 1991ರ ನವೆಂಬರ್‌ನಿಂದ 2002 ರವರೆಗೆ 8 ಲಕ್ಷದ 17 ಸಾವಿರ ರೂ., 2002ರಿಂದ 2005 ರವರೆಗೆ 1 ಲಕ್ಷದ 58 ಸಾವಿರ ರೂ., 2003ರಿಂದ 1 ಲಕ್ಷದ 58 ಸಾವಿರ ರೂ.ಗಳನ್ನು ಅಲ್ಲಿ ಕೆಲಸ ಮಾಡಿದ ಕಾರ್ಮಿಕರಿಂದ ವಸೂಲಿ ಮಾಡಿದ ಇಎಸ್‌ಐ ಹಣ ಪಾವತಿಸಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.

ಈ ಸಂಬಂಧ ಇಎಸ್​ಐ ಕಂಪನಿ ಪರವಾಗಿ ಚೆನ್ನೈ ಎಗ್ಮೋರ್ ನ್ಯಾಯಾಲಯದಲ್ಲಿ 5 ಪ್ರಕರಣಗಳು ನಟಿ ವಿರುದ್ಧ ದಾಖಲಾಗಿದ್ದವು. ಈ ಪ್ರಕರಣದ ವಿಚಾರಣೆ ವೇಳೆ ಜಯಪ್ರದಾ ಕಾರ್ಮಿಕರು ವಿಮೆ ಹಣವನ್ನು ಹಿಂದಿರುಗಿಸುತ್ತಿದ್ದಾರೆ ಎಂದಿದ್ದರು. ಆದರೆ, ಇಎಸ್‌ಐ ಹಣ ಪಾವತಿಯಾಗದ ಕಾರಣ ಕಾರ್ಮಿಕರಿಗೆ ತೊಂದರೆಯಾಗಿದೆ ಎಂದು ಇಎಸ್‌ಐ ಕಂಪನಿ ತಿಳಿಸಿತ್ತು.

ವಿಚಾರಣೆಯ ನಂತರ ನ್ಯಾಯಾಲಯವು 2023 ಆಗಸ್ಟ್ 10 ರಂದು ಜಯಪ್ರದಾ ಮತ್ತು ಇತರ ಮೂವರಿಗೆ ಜಾಮೀನು ರಹಿತ 6 ತಿಂಗಳ ಜೈಲು ಶಿಕ್ಷೆ ಮತ್ತು 5,000 ರೂಪಾಯಿ ದಂಡ ವಿಧಿಸಿತ್ತು. ಈ ಪ್ರಕರಣದಲ್ಲಿ ಜಯಪ್ರದಾ ಅವರು ಎಗ್ಮೋರ್ ನ್ಯಾಯಾಲಯದ ಆದೇಶದ ವಿರುದ್ಧ ಮದ್ರಾಸ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಇಎಸ್​ಐ ಬಾಕಿ ಇರುವ 37 ಲಕ್ಷದ 68 ಸಾವಿರ ರೂ.ಗಳನ್ನು ಪಾವತಿಸುವುದಾಗಿ ವರದಿಯಾಗಿದೆ. ಹೀಗಾಗಿ ನ್ಯಾಯಾಧೀಶ ಜಯಚಂದ್ರ ಅವರು ಇಎಸ್‌ಐ ಕಂಪನಿಗೆ ಪ್ರತಿಕ್ರಿಯೆ ನೀಡುವಂತೆ ಆದೇಶಿಸಿ ವಿಚಾರಣೆಯನ್ನು ಅಕ್ಟೋಬರ್ 18ಕ್ಕೆ ಮುಂದೂಡಿದ್ದಾರೆ.

ಇನ್ನು ನಟಿ ಕುರಿತು ನೋಡುವುದಾದರೆ ಜಯಪ್ರದಾ ಮೂಲತಃ ಆಂಧ್ರದವರು. ಭಾರತೀಯ ಸಿನಿಮಾ ರಂಗದಲ್ಲಿ ಖ್ಯಾತ ನಟಿಯಾಗಿ ಗುರುತಿಸಿಕೊಂಡಿರುವ ನಟಿ ಕಮ್​ ರಾಜಕಾರಣಿ ಜಯಪ್ರದಾ, ಸಿನಿಮಾ ಪ್ರದರ್ಶಕಿಯೂ ಹೌದು. ಹಿಂದಿ ಅಲ್ಲದೇ ಸೌತ್​ ಇಂಡಿಯಾದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ತಮ್ಮ ನಟನೆಯಿಂದಲೇ ಗುರುತಿಸಿಕೊಂಡ 90's ಸಮಯದ ಅತ್ಯಂತ ಕ್ಯೂಟ್​ ನಟಿ.

ಇದನ್ನೂ ಓದಿ: ಖ್ಯಾತ ನಟಿ ಜಯಪ್ರದಾಗೆ 6 ತಿಂಗಳ ಶಿಕ್ಷೆ ವಿಧಿಸಿದ ನ್ಯಾಯಾಲಯ

Last Updated : Oct 7, 2023, 10:48 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.