ETV Bharat / bharat

ಲೈಂಗಿಕ ದೌರ್ಜನ್ಯ ಪ್ರಕರಣ: ನಟ ವಿಜಯ್ ಕಚೇರಿಯ ಅಕೌಂಟೆಂಟ್​ ಅರೆಸ್ಟ್​ - ನಟ ವಿಜಯ್

ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ವಿಜಯ್ ಕಚೇರಿಯ ಅಕೌಂಟೆಂಟ್​ನನ್ನು ಬಂಧಿಸಲಾಗಿದೆ.

sexual complaint
ಲೈಂಗಿಕ ದೌರ್ಜನ್ಯ ಪ್ರಕರಣ: ನಟ ವಿಜಯ್ ಕಚೇರಿಯ ಅಕೌಂಟೆಂಟ್​ ಅರೆಸ್ಟ್​!
author img

By ETV Bharat Karnataka Team

Published : Jan 1, 2024, 8:03 PM IST

ಚೆನ್ನೈ (ತಮಿಳುನಾಡು): ಮದುವೆಯಾಗುವುದಾಗಿ ಹೇಳಿ ಭರವಸೆ ನೀಡಿ ವಂಚಿಸಿದ್ದಾರೆ ಎಂದು ಸಂತ್ರಸ್ತ ಯುವತಿ ನೀಡಿದ ದೂರಿನ ಆಧಾರದ ಮೇಲೆ ನಟ ವಿಜಯ್ ಅವರ ಕಚೇರಿಯ ಅಕೌಂಟೆಂಟ್, ಆರೋಪಿ ರಾಜೇಶ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಮಹಿಳೆ ನೀಡಿದ ದೂರಿನಲ್ಲೇನಿದೆ?: ಚೆನ್ನೈನ ಅಣ್ಣಾ ನಗರ ಪ್ರದೇಶದ ಸಂತ್ರಸ್ತ ಮಹಿಳೆಯೊಬ್ಬರು ಕಳೆದ ನವೆಂಬರ್‌ನಲ್ಲಿ ಅಣ್ಣಾನಗರ ಎಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಖಾಸಗಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ತನ್ನ ಸ್ನೇಹಿತೆಯ ಮೂಲಕ ಗಿಂಡಿ ಪ್ರದೇಶದ ರಾಜೇಶ್ (32 ವರ್ಷ) ಎಂಬ ವ್ಯಕ್ತಿ ಪರಿಚಯವಾಗಿದ್ದನು. ರಾಜೇಶ್ ತಾನು ಮದುವೆಯಾಗಿಲ್ಲ. ಆ ಹುಡುಗಿಯನ್ನು ಗಂಭೀರವಾಗಿ ಪ್ರೀತಿಸುತ್ತಿದ್ದು, ಅವಳನ್ನು ಮದುವೆಯಾಗುವುದಾಗಿ ಹೇಳಿದ್ದನು. ರಾಜೇಶ್ ಕಳೆದ ಒಂದು ವರ್ಷದಿಂದ ಡೇಟಿಂಗ್ ನಲ್ಲಿದ್ದಾಗ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ್ದನು. ಆ ಬಳಿಕ ಅವನಿಗೆ ಮದುವೆಯಾಗಿ ಇಬ್ಬರು ಮಕ್ಕಳಿರುವುದು ಬೆಳಕಿಗೆ ಬಂದಿದ್ದು, ತನಗೆ ವಂಚಿಸಿದ ರಾಜೇಶ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಅಣ್ಣಾನಗರ ಎಲ್ಲಾ ಮಹಿಳಾ ಪೊಲೀಸ್ ಠಾಣಾ ಇನಸ್ಪೆಕ್ಟರ್, ಕೂಲಂಕೂಷವಾಗಿ ತನಿಖೆ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು (ಜನವರಿ 1 ರಂದು) ಬೆಳಗ್ಗೆ ಆರೋಪಿ ರಾಜೇಶ್​ನನ್ನು ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ. ಆ ತನಿಖೆಯಲ್ಲಿ ಆರೋಪಿಯು ನಟ ವಿಜಯ್ ಅವರ ಕಚೇರಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ದೂರಿನ ಅನ್ವಯ ಪೊಲೀಸರು ರಾಜೇಶ್‌ನ ವಿಚಾರಣೆ ನಡೆಸುತ್ತಿದ್ದಾರೆ. ಮತ್ತು ಆತನ ವಿರುದ್ಧ ಬೇರೆ ಯಾವುದಾದರೂ ಪ್ರಕರಣಗಳು ದಾಖಲಾಗಿವೆಯೇ? ಈ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಪ್ರತ್ಯೇಕ ಪ್ರಕರಣ, ವಿಶಾಖಪಟ್ಟಣಂದಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಪ್ರೀತಿಯ ಹೆಸರಿನಲ್ಲಿ ನಂಬಿಸಿ ಬಾಲಕಿ ಮೇಲೆ 10 ಜನ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ. 16 ವರ್ಷದ ಬಾಲಕಿ ಒಡಿಶಾದಿಂದ ಮನೆ ಕೆಲಸಕ್ಕಾಗಿ ವಿಶಾಖಪಟ್ಟಣಂಗೆ ಬಂದಿದ್ದಳು. ಆಕೆಗೆ ಪ್ರೀತಿಯ ಹೆಸರಲ್ಲಿ ಪ್ರಿಯಕರನಿಂದಲೇ ಮೋಸಕ್ಕೆ ಒಳಗಾಗಿದ್ದಾಳೆ. ಪ್ರಮುಖ ಆರೋಪಿ ಸೇರಿದಂತೆ ಇತರ ಎಂಟು ಜನ ದುರುಳರು ಬಾಲಕಿಯನ್ನು ಎರಡು ದಿನಗಳ ಕಾಲ ಲಾಡ್ಜ್‌ವೊಂದರಲ್ಲಿ ಬಂಧಿಸಿ ಚಿತ್ರಹಿಂಸೆ ನೀಡಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬುದು ಬಯಲಾಗಿದೆ. ಪೋಕ್ಸೊ ಕಾಯ್ದೆಯಡಿ ಪ್ರಕರಣದಡಿ ನಾಲ್ಕನೇ ಪಟ್ಟಣ ಠಾಣೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ವಿಶಾಖಪಟ್ಟಣಂ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; 8 ಮಂದಿ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.