ETV Bharat / bharat

ನಟ ಸೋನು ಸೂದ್​ ಸಹೋದರಿ ಕಾಂಗ್ರೆಸ್​ ಸೇರ್ಪಡೆ.. ಪಂಜಾಬ್​ ಚುನಾವಣೆಗೆ ಸ್ಪರ್ಧೆ! - ಸೋನು ಸೂದ್​ ಸಹೋದರಿ ಮಾಳವಿಕಾ ಕಾಂಗ್ರೆಸ್

Actor Sonu Sood sister Malvika joins Congress: ಬಹುಭಾಷಾ ನಟ ಸೋನು ಸೂದ್​ ಅವರ ಸಹೋದರಿ ಇಂದು ಕಾಂಗ್ರೆಸ್​​ ಪಕ್ಷ ಸೇರ್ಪಡೆಯಾಗಿದ್ದು, ಪಂಜಾಬ್​ ವಿಧಾನಸಭೆ ಚುನಾವಣೆಯಲ್ಲಿ ಅವರು ಅಖಾಡಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

Malvika joins Congress
Malvika joins Congress
author img

By

Published : Jan 10, 2022, 5:17 PM IST

ಚಂಡೀಗಢ(ಪಂಜಾಬ್​): ಕೊರೊನಾ ಸಂದರ್ಭದಲ್ಲಿ ಅನೇಕ ರೀತಿಯಲ್ಲಿ ಜನ ಮೆಚ್ಚುವ ಕೆಲಸ ಮಾಡಿರುವ ಬಹುಭಾಷಾ​ ನಟ ಸೋನು ಸೂದ್ ಅವರ​ ಸಹೋದರಿ ಮಾಳವಿಕಾ ಇಂದು ಕಾಂಗ್ರೆಸ್​​ ಸೇರಿದ್ದು, ಈ ಮೂಲಕ ಜೀವನದ ಎರಡನೇ ಇನ್ನಿಂಗ್ಸ್​​ ಆರಂಭಿಸಿದ್ದಾರೆ.

ಪಂಜಾಬ್​​​ನ ಮೋಗಾದಲ್ಲಿ ಮುಖ್ಯಮಂತ್ರಿ ಚರಣ್​ಜಿತ್​ ಸಿಂಗ್​ ಚನ್ನಿ ಹಾಗೂ ಪಂಜಾಬ್​ ಕಾಂಗ್ರೆಸ್ ಅಧ್ಯಕ್ಷ ನವಜೋತ್​​ ಸಿಂಗ್​ ಸಿಧು ಸಮ್ಮುಖದಲ್ಲಿ ಮಾಳವಿಕಾ ಕೈ ಪಕ್ಷ ಸೇರಿದ್ದಾರೆ. ಇದರ ಬೆನ್ನಲ್ಲೇ ನಟ ಸೋನು ಸೂದ್ ಇಂದು ತಮ್ಮ ಸಹೋದರಿ ಜೊತೆ ನವಜೋತ್​ ಸಿಂಗ್​ ಸಿಧು ಅವರನ್ನ ಭೇಟಿ ಮಾಡಿ, ಕೆಲಹೊತ್ತು ಮಾತುಕತೆ ನಡೆಸಿದರು.

Sonu Sood meet  Navjot Singh Sidhu
ನವಜೋತ್​ ಸಿಂಗ್​ ಸಿಧು ಭೇಟಿಯಾದ ಸೋನು ಸೂದ್​​

ಈ ಹಿಂದೆ ತಮ್ಮ ಸಹೋದರಿ ರಾಜಕೀಯ ಸೇರಿಕೊಳ್ಳಲಿದ್ದಾರೆಂದು ಸೋನು ಸೂದ್ ಖುದ್ದಾಗಿ ಘೋಷಣೆ ಮಾಡಿದ್ದರು. ಇದೀಗ ಕಾಂಗ್ರೆಸ್​ ಪಕ್ಷ ಸೇರ್ಪಡೆಯಾಗಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಮಾಳವಿಕಾ ಪಂಜಾಬ್​ ವಿಧಾನಸಭೆ ಚುನಾವಣೆಯಲ್ಲಿ ಮೋಗಾ ಕ್ಷೇತ್ರದಿಂದ ಸ್ಪರ್ಧಿಸಬಹುದು ಎನ್ನಲಾಗ್ತಿದೆ.

Sonu Sood meet  Navjot Singh Sidhu
ಕಾಂಗ್ರೆಸ್​ ಸೇರಿದ ನಟ ಸೋನು ಸೂದ್​ ಸಹೋದರಿ

ಇದನ್ನೂ ಓದಿರಿ: ರಾಜನಾಥ್​ ಸಿಂಗ್​ಗೂ ಕೋವಿಡ್: ಕ್ವಾರಂಟೈನ್‌​ಗೊಳಗಾದ ದೇಶದ ರಕ್ಷಣಾ ಸಚಿವರು

ಪಂಜಾಬ್​ ಚುನಾವಣೆಯ ಭಾಗವಾಗಿ ಚುನಾವಣಾ ಆಯೋಗದಿಂದ ಕಳೆದ ವರ್ಷ ಪಂಜಾಬ್​​ ಸ್ಟೇಟ್​ ಐಕಾನ್​​​ ಆಗಿ ಸೋನು ಸೂದ್ ನೇಮಕಗೊಂಡಿದ್ದರು. ಆದರೆ, ತಮ್ಮ ಸಹೋದರಿ ಮಾಳವಿಕಾ ರಾಜಕೀಯ ಪ್ರವೇಶ ಮಾಡಿರುವ ಕಾರಣ ಕಳೆದ ಎರಡು ದಿನಗಳ ಹಿಂದೆ ತಮ್ಮ ಸ್ಥಾನಕ್ಕೆ ಖುದ್ದಾಗಿ ರಾಜೀನಾಮೆ ನೀಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.