ETV Bharat / bharat

ಕುಟುಂಬ ಸಮೇತ ಶಿರಡಿ ಸಾಯಿ ಬಾಬಾ ದರ್ಶನ ಪಡೆದ ಸೋನು ಸೂದ್​ - Sai Baba's Samadhi

ಸದ್ಯ ಆರ್ಯನ್ ಖಾನ್ ಕೂಡ ಸಂಕಷ್ಟದಲ್ಲಿದ್ದಾರೆ. ಆದರೆ, ಸಾಯಿಬಾಬಾ ಅವರ ಆಶೀರ್ವಾದ ಇದ್ದಿದ್ದೇ ಆದಲ್ಲಿ ಸತ್ಯ ಹೊರಬರಲಿದೆ ಎಂದು ನಟ ಸೋನು ಸೂದ್​ ವಿಶ್ವಾಸ ವ್ಯಕ್ತಪಡಿಸಿದರು.

Actor Sonu Sood came to Shirdi and visited Sai Baba's Samadhi
ಕುಟುಂಬ ಸಮೇತ ಶಿರಡಿ ಸಾಯಿ ಬಾಬಾ ದರ್ಶನ ಪಡೆದ ಸೋನು ಸೂದ್​
author img

By

Published : Oct 26, 2021, 7:03 PM IST

ನಟ ಸೋನು ಸೂದ್ ಅವರು ಇಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾ ಸಮಾಧಿ ದರ್ಶನ ಪಡೆದಿದ್ದಾರೆ. ಕೊರೊನಾ ಬಿಕ್ಕಟ್ಟು ಮತ್ತು ಲಾಕ್‌ಡೌನ್ ನಂತರ ಸಾಯಿಬಾಬಾ ದೇವಾಲಯವು ಈಗ ಭಕ್ತರಿಗೆ ಮುಕ್ತವಾಗಿದೆ. ಸಾಯಿಬಾಬಾರ ದರ್ಶನಕ್ಕೆ ಕುಟುಂಬ ಸಮೇತ ಆಗಮಿಸಿದ್ದೇನೆ. ಶಿರಡಿಗೆ ಬಂದಾಗಲೆಲ್ಲ ಸಾಯಿ ದರ್ಶನದ ನಂತರ ಕೆಲಸ ಆರಂಭಿಸುತ್ತೇನೆ ಎಂದು ನಟ ಸೋನು ಸೂದ್​ ಹೇಳಿದ್ದಾರೆ.

ಈ ನಡುವೆ ನಾನೂ ಒಳಗೊಂಡಂತೆ ಅನೇಕರು ಸಂಕಷ್ಟ ಎದುರಿಸಿದ್ದೇವೆ. ನನ್ನ ಕೆಲಸವನ್ನು ಪ್ರಶಂಸಿಸಲಾಗಿದೆ. ಆದರೆ, ಅದು ವಿಷಯವಲ್ಲ. ಲಕ್ಷಾಂತರ ಜನರ ಆಶೀರ್ವಾದ ಮತ್ತು ಸಾಯಿಬಾಬಾ ಅವರ ಆಶೀರ್ವಾದ ಯಾರಿಗಿದೆ ಎಂಬುದು ಮುಖ್ಯ ಎಂದರು.

ಸದ್ಯ ಆರ್ಯನ್ ಖಾನ್ ಕೂಡ ಸಂಕಷ್ಟದಲ್ಲಿದ್ದಾರೆ. ಆದರೆ, ಸಾಯಿಬಾಬಾ ಅವರ ಆಶೀರ್ವಾದ ಇದ್ದಿದ್ದೇ ಆದಲ್ಲಿ ಸತ್ಯ ಹೊರಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಭಾರತ-ಪಾಕ್ ಟಿ20 ಪಂದ್ಯದಲ್ಲಿ ಭಾರತ ಸೋತ ವಿಷಯಕ್ಕೆ ಪ್ರತಿಕ್ರಿಯಿಸಿ, "ಹರ್ ಕರ್ ಜೀತ್ನೆ ವಾಲೋ ಕೋ ಬಾಜಿಗರ್ ಕಹೇತೆ ಹೈ" ಎಂದು ಪ್ರತಿಕ್ರಿಯಿಸಿದರು.

ಇನ್ನು ಸಾಯಿಬಾಬಾಗೆ ನಮನ ಸಲ್ಲಿಸಲು ಬಂದಿದ್ದ ಸೋನು ಸೂದ್ ಅವರನ್ನು ನೋಡಲು ಅವರ ಅಭಿಮಾನಿಗಳ ದೊಡ್ಡ ಗುಂಪೇ ಶಿರಡಿಯಲ್ಲಿ ಜಮಾಯಿಸಿತ್ತು. ಸಾಯಿ ದೇವಸ್ಥಾನದಿಂದ ಹೊರಬಂದ ನಂತರ, ಸೋನು ಕಾರ್ ಡೋರ್‌ನಲ್ಲಿ ನಿಂತು ತನ್ನ ಅಭಿಮಾನಿಗಳ ಕಡೆ ಕೈ ಬೀಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.