ಪುರಿ (ಒಡಿಶಾ): ಹಿರಿಯ ನಟ ಹಾಗೂ ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ಅವರು ಭಾನುವಾರ ಪುರಿಯ ಸತ್ಯಬದಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹುತಾತ್ಮರಾದ ಒಡಿಶಾದ ಸೈನಿಕ ದೇವಾಶಿಶ್ ಬಿಸ್ವಾಲ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಪೂಚ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಒಡಿಶಾದ ಯೋಧ ದೇಬಾಶಿಶ್ ಬಿಸ್ವಾಲ್ ಪ್ರಾಣ ಕಳೆದುಕೊಂಡಿದ್ದರು. ಹುತಾತ್ಮ ಯೋಧನಿಗೆ ಶ್ರದ್ಧಾಂಜಲಿ ಅರ್ಪಿಸಲು ಸತ್ಯಬಾದಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಕೂಡ ಹಾಜರಿದ್ದು, ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿರುವ ಯೋಧ ದೇಬಾಶಿಶ್ಗೆ ಯಾವತ್ತೂ ಮರಣವಿಲ್ಲ. ಅವರು ಎಲ್ಲರ ಹೃದಯದಲ್ಲೂ ಶಾಶ್ವತವಾಗಿ ಜೀವಂತವಾಗಿರುತ್ತಾರೆ. ಭಾರತೀಯ ಸೈನಿಕರ ಬಲಿದಾನ ವ್ಯರ್ಥವಾಗುವುದಿಲ್ಲ. ಭಾರತದ ಇದಕ್ಕೆ ತಕ್ಕ ಉತ್ತರ ನೀಡಲಿದೆ. ಶತ್ರುಗಳು ಭಾರತವನ್ನು ದುರ್ಬಲ ಎಂದು ಭಾವಿಸಬಾರದು. ಭಾರತದ ವೀರ ಸೈನಿಕರ ತ್ಯಾಗಕ್ಕೆ ಖಂಡಿತಾ ಉತ್ತರ ನೀಡಲಿದೆ. ಸರಿಯಾದ ಸಮಯಕ್ಕೆ ಕಾಯಬೇಕು ಅಷ್ಟೇ ಎಂದು ನಟ, ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ಹೇಳಿದರು.
ಇದನ್ನು ಓದಿ: 2 ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ: ಮೂವರು ಸಜೀವ ದಹನ
ಒಡಿಶಾದೊಂದಿಗೆ ನಾನು ನಿಕಟ ಸಂಬಂಧ ಹೊಂದಿದ್ದೇನೆ ಎಂದು ಹೇಳಿದ ಮಿಥುನ್ ಚಕ್ರವರ್ತಿ, ನಾನು ಒಡಿಶಾವನ್ನು ತುಂಬಾ ಪ್ರೀತಿಸುತ್ತೇನೆ. ಒಡಿಶಾದ ಜನರು ಕೂಡ ನನ್ನನ್ನು ತುಂಬಾ ಪ್ರೀತಿಸುತ್ತಾರೆ. ನನಗೆ ಗೌರವವನ್ನು ನೀಡಿದ್ದಾರೆ. ಹೀಗಾಗಿ ಅವಕಾಶ ಸಿಕ್ಕಾಗ ಒಡಿಶಾಗೆ ಬರಲು ನಾನು ಸಿದ್ಧ ಎಂದು ತಿಳಿಸಿದರು. ಮಿಥುನ್ ಚಕ್ರವರ್ತಿ ಅವರು ಪ್ರಸಿದ್ಧ ಸಖಿ ಗೋಪಾಲ ದೇವಸ್ಥಾನಕ್ಕೂ ಭೇಟಿ ನೀಡಿದರು. ಸಖಿಗೋಪಾಲ್ ಮತ್ತು ರಾಧಾ ಅವರಿಗೆ ಪ್ರಾರ್ಥನೆ ಸಲ್ಲಿಸಿದರು. ಇದಲ್ಲದೇ, ಮಿಥುನ್ ಚಕ್ರವರ್ತಿ ಭಾನುವಾರ ಪಿಪಿಲಿಯಲ್ಲಿ ಅಖಿ ಮುತ್ತಿ ಅನುಕೂಲ ಆಚರಣೆ ಮಾಡಿದರು.
ಇದನ್ನು ಓದಿ: ಒಬ್ಬರಿಗೆ ರಾತ್ರಿ ಇನ್ನೊಬ್ಬರಿಗೆ ಹಗಲು ಕೆಲಸ - ಸಂಸಾರಕ್ಕೆ ಸಮಯವೆಲ್ಲಿ?: ವಿಚ್ಛೇದನಕ್ಕೆ ಅನುಮತಿ ನೀಡಿದ ಸುಪ್ರೀಂ
ಗುರುವಾರ ಜಮ್ಮು ಕಾಶ್ಮೀರದ ಪೂಂಚ್ನಲ್ಲಿ ಸೇನಾ ವಾಹನದ ಮೇಲೆ ಭಯೋತ್ಪಾದಕರು ಗ್ರೇನೆಡ್ ದಾಳಿ ನಡೆಸಿದ್ದು, ದಾಳಿಯಲ್ಲಿ ಭಾರತದ ಐವರು ಯೋಧರು ಹುತಾತ್ಮರಾಗಿದ್ದರು. ಘಟನೆಯಲ್ಲಿ ಹವಾಲ್ದಾರ್ ಮನ್ದೀಪ್ ಸಿಂಗ್, ಲ್ಯಾನ್ಸ್ ನಾಯಕ್ ದೇಬಾಶೀಶ್ ಬಸ್ವಾಲ್, ಲ್ಯಾನ್ಸ್ ನಾಯಕ್ ಕುಲ್ವಂತ್ ಸಿಂಗ್, ಸಿಪಾಯಿ ಹರ್ಕ್ರಿಶನ್ ಸಿಂಗ್ ಹಾಗೂ ಸಿಪಾಯಿ ಸೇವಕ್ ಸಿಂಗ್ ಹುತಾತ್ಮರಾಗಿದ್ದರು.
ಈ ಬಗ್ಗೆ ಭಾರತೀಯ ಸೇನೆ ಮಾಹಿತಿ ಹಂಚಿಕೊಂಡಿತ್ತು. ಹುತಾತ್ಮರಾದ ಯೋಧರು ಪೂಂಚ್ ಪ್ರದೇಶದಲ್ಲಿ ರಾಷ್ಟ್ರೀಯ ರೈಫಲ್ಸ್ ಪಡೆಯುವಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗೆ ನಿಯೋಜನೆಗೊಂಡಿದ್ದರು. ಜಮ್ಮುವಿನ ರಜೌರಿ ಸೆಕ್ಟರ್ನಲ್ಲಿ ಯೋಧರು ಪ್ರಯಾಣಿಸುತ್ತಿದ್ದ ಸೇನಾ ವಾಹನದ ಮೇಲೆ ಭಯೋತ್ಪಾದಕರು ಗ್ರೇನೆಟ್ ದಾಳಿ ನಡೆಸಿದ್ದರು. ದಾಳಿಯಿಂದ ಸೇನಾ ವಾಹನ ಸಂಪೂರ್ಣವಾಗಿ ಬೆಂಕಿಗಾಹುತಿಯಾ ಪರಿಣಾಮ ಐವರು ಯೋಧರು ಪ್ರಾಣ ಕಳೆದುಕೊಂಡಿದ್ದರು. ಈ ವಿಚಾರ ಈಗ ವಿಶ್ವಾದ್ಯಂತ ಸದ್ದು ಮಾಡಿತ್ತು.
ಇದನ್ನೂ ಓದಿ: ಗ್ರೆನೇಡ್ ದಾಳಿಯಲ್ಲಿ ಐವರು ಯೋಧರು ಹುತಾತ್ಮ: ಉಗ್ರರ ಬೇಟೆಗೆ ಕಾರ್ಯಾಚರಣೆ