ETV Bharat / bharat

ಭಾರತ ಜೋಡೋ ಯಾತ್ರೆ: ರಾಹುಲ್​ಗೆ ಸಾಥ್​ ನೀಡಿದ ಕಮಲ್ ಹಾಸನ್​ - congress party

ದೆಹಲಿ ತಲುಪಿದ ಭಾರತ್​ ಜೋಡೋ ಯಾತ್ರೆ-ಮೆರವಣಿಗೆಯಲ್ಲಿ ಒಟ್ಟಿಗೆ ಪಾಲ್ಗೊಂಡ ಗಾಂಧಿ ಕುಟುಂಬ- ಯಾತ್ರೆಯಲ್ಲಿ ಪಾಲ್ಗೊಂಡ ಕಮಲ್​ ಹಾಸನ್​.​

actor-kamal-hassan-joins-bharat-jodo-yatra-as-it-marches-ahead-in-the-national-capital-delhi
ಭಾರತ ಜೋಡೋ ಯಾತ್ರೆ: ರಾಹುಲ್​ಗೆ ಸಾಥ್​ ನೀಡಿದ ಕಮಲ್​!!
author img

By

Published : Dec 24, 2022, 6:19 PM IST

ನವದೆಹಲಿ: ಕೇಂದ್ರ ಸರ್ಕಾರ ಘೋಷಿಸಿದ ಕೋವಿಡ್​ ಮಾರ್ಗಸೂಚಿಯನ್ನು ಧಿಕ್ಕರಿಸಿ, ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದ ಭಾರತ್​ ಜೋಡೋ ಯಾತ್ರೆ ರಾಷ್ಟ್ರ ರಾಜಧಾನಿ ದೆಹಲಿಗೆ ಕಾಲಿಟ್ಟಿದೆ. ಈ ಯಾತ್ರೆಯಲ್ಲಿ ಕಾಲಿವುಡ್​ನ ಹಿರಿಯ ನಟ ಕಮಲ್​ ಹಾಸನ್ ಭಾಗಿಯಾಗಿದ್ದಾರೆ.

ಇಂದು ದೆಹಲಿಯ ಕೆಂಪು ಕೋಟೆಯಲ್ಲಿ ಮಾತನಾಡಿದ ಕಮಲ್​ ಹಾಸನ್​ ''ನಾನೇಕೆ ಇಲ್ಲಿದ್ದೇನೆ ಎಂದು ಅನೇಕರು ನನ್ನನ್ನು ಕೇಳುತ್ತಾರೆ, ನಾನು ಒಬ್ಬ ಭಾರತೀಯನಾಗಿ ಇಲ್ಲಿದ್ದೇನೆ, ನನ್ನ ತಂದೆ ಕಾಂಗ್ರೆಸ್ಸಿಗರಾಗಿದ್ದರು, ನಾನು ವಿವಿಧ ಸಿದ್ಧಾಂತಗಳನ್ನು ಹೊಂದಿದ್ದೇನೆ ಮತ್ತು ನನ್ನದೇ ಆದ ರಾಜಕೀಯ ಪಕ್ಷವನ್ನು ಪ್ರಾರಂಭಿಸಿದ್ದೇನೆ. ಆದರೆ ದೇಶದ ವಿಷಯಕ್ಕೆ ಬಂದಾಗ, ಎಲ್ಲಾ ರಾಜಕೀಯ ಪಕ್ಷದ ಗೆರೆಯನ್ನು ಮಸುಕಾಗಬೇಕು, ನಾನು ಆ ಗೆರೆಯನ್ನು ಮಸುಕುಗೊಳಿಸಿ ಇಲ್ಲಿಗೆ ಬಂದಿದ್ದೇನೆ’’ ಎಂದು ಹೇಳಿದರು.

  • Delhi | Many people ask me why I'm here. I'm here as an Indian. My father was a Congressman. I had various ideologies & started my own political party but when it comes to the country, all political party lines have to blur. I blurred that line & came here: Actor Kamal Haasan pic.twitter.com/nAFyeeK18K

    — ANI (@ANI) December 24, 2022 " class="align-text-top noRightClick twitterSection" data=" ">

ದೆಹಲಿಯಲ್ಲಿ ನಡೆಯುತ್ತಿರುವ ಭಾರತ್​ ಜೋಡೋ ಯಾತ್ರೆಗೆ ಜೈರಾಮ್​ ರಮೇಶ್​, ಪವನ್ ಖೇರಾ, ಭೂಪಿಂದರ್​ ಸಿಂಗ್​, ಕುಮಾರಿ ಸೆಲ್ವಾ ಮತ್ತು ರಣದೀಪ್​ ಸುರ್ಜೆವಾಲಾ ಸೇರಿದಂತೆ ಪಕ್ಷದ ಹಲವು ನಾಯಕರು ರಾಹುಲ್​ ಜೊತೆ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಎರಡನೇ ಬಾರಿ ಯಾತ್ರೆಯಲ್ಲಿ ಸೋನಿಯಾ ಗಾಂಧಿ: ದೆಹಲಿಯ ಮೆರವಣಿಗೆಯಲ್ಲಿ ಕಾಂಗ್ರೆಸ್​ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಕಾ ರಾಬರ್ಟ್​ ವಾದ್ರಾ ಕೂಡ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಸೋನಿಯಾ ಗಾಂಧಿ ಅವರು ಅಕ್ಟೋಬರ್​ನಲ್ಲಿ ಕರ್ನಾಟಕದಲ್ಲಿ ನಡೆದ ಬೃಹತ್​ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: ಬಿಜೆಪಿ ಜನಾರ್ದನ ರೆಡ್ಡಿಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಸಾರಿಗೆ ಸಚಿವ ಶ್ರೀರಾಮಲು ಸ್ಪಷ್ಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.