ETV Bharat / bharat

ಸಿಡಿಲಿಗೆ ಆ್ಯಸಿಡ್​ ಟ್ಯಾಂಕ್​ ಸ್ಫೋಟವಾಗಿ ಇಬ್ಬರು ಬಲಿ 9 ಮಂದಿ ಸ್ಥಿತಿ ಗಂಭೀರ

ರಾಜಸ್ಥಾನದಲ್ಲಿ ನಿನ್ನೆ ನಡೆದ ಆ್ಯಸಿಡ್​ ಟ್ಯಾಂಕ್​ ಸ್ಫೋಟ ಪ್ರಕರಣದಲ್ಲಿ 2 ಮಂದಿ ಮೃತಪಟ್ಟು, 9 ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿಡಿಲಿನ ಕಾರಣ ಟ್ಯಾಂಕ್​ ಸ್ಫೋಟ ಆಗಿದೆ ಎಂದು ಹೇಳಲಾಗಿದೆ.

acid-tank-exploded-in-rajastan
ಸಿಡಿಲಿಗೆ ಆ್ಯಸಿಡ್​ ಟ್ಯಾಂಕ್​ ಸ್ಫೋಟವಾಗಿ ಇಬ್ಬರು
author img

By

Published : Aug 13, 2022, 10:09 AM IST

ಚಿತ್ತೋರಗಢ: ಸಿಡಿಲಿನ ಹೊಡೆತಕ್ಕೆ ಹಿಂದೂಸ್ಥಾನ ಜಿಂಕ್​ ಪ್ಲಾಂಟ್​ನಲ್ಲಿ ಆ್ಯಸಿಡ್​ ಟ್ಯಾಂಕ್​ ಸ್ಫೋಟಗೊಂಡು ಇಬ್ಬರು ಮೃತಪಟ್ಟು, 9 ಮಂದಿ ಗಂಭೀರ ಸುಟ್ಟ ಗಾಯಕ್ಕೆ ತುತ್ತಾದ ದುರ್ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಇದರಲ್ಲಿ ಐವರ ಸ್ಥಿತಿ ಚಿಂತಾಜನಕವಾಗಿದ್ದು, ಈ ಬಗ್ಗೆ ತನಿಖೆಗೆ ಸೂಚಿಸಲಾಗಿದೆ.

acid tank exploded in rajastan

ಚಿತ್ತೋರ್​ಗಢ ಸಮೀಪದ ಪುಥೋಳಿಯಲ್ಲಿನ ಹಿಂದೂಸ್ತಾನ್ ಜಿಂಕ್ ಪ್ಲಾಂಟ್‌ನಲ್ಲಿ ಶುಕ್ರವಾರ ಸಂಜೆ ಸಿಡಿಲಿನ ಅಬ್ಬರಕ್ಕೆ ಆ್ಯಸಿಡ್ ಟ್ಯಾಂಕ್ ಸ್ಫೋಟ ಆಗಿದೆ. ಅಲ್ಲಿಯೇ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಆ್ಯಸಿಡ್​ ಭೀಕರತೆಗೆ ಸುಟ್ಟು ಮೃತಪಟ್ಟಿದ್ದಾರೆ. ಇದಲ್ಲದೇ, 9 ಮಂದಿಗೆ ಕಾರ್ಮಿಕರಿಗೆ ಗಂಭೀರವಾದ ಸುಟ್ಟ ಗಾಯಗಳಾಗಿವೆ.

ತಕ್ಷಣವೇ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಐವರ ಸ್ಥಿತಿ ಚಿಂತಾಜನಕವಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಪ್ರಥಮ ಚಿಕಿತ್ಸೆ ಬಳಿಕ ಗಾಯಾಳುಗಳನ್ನು ಉದಯಪುರದ ಮಹಾರಾಣಾ ಭೋಪಾಲ್​ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ನಡುವೆ ಚಿತ್ತೋರ್​ಗಢ ಜಿಲ್ಲಾಧಿಕಾರಿ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

ಓದಿ: ನಕಲಿ ಮದ್ಯ ಸೇವನೆ 6 ಮಂದಿ ಸಾವು; ಹಲವರು ಅಸ್ವಸ್ಥ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.