ಹೈದರಾಬಾದ್: ಸಾಧನೆಗೆ ಬೇಕಾಗಿರುವುದು ಛಲ, ದೃಢ ಮನಸ್ಸು. ಅಂಗವೈಕಲ್ಯತೆ ಮೆಟ್ಟಿ ನಿಂತು ಸಾಧನೆ ಮಾಡಿದ ಅನೇಕರು ನಮಗೆ ಸ್ಪೂರ್ತಿಯಾಗಿದ್ದಾರೆ. ಅಂತಹದ್ದೇ ಪ್ರೇರಣೆಗೆ ಸಾಕ್ಷಿಯಾಗಿದ್ದಾರೆ ಚೈದುಗುಲ್ಲ ಶೇಖರ್ ಗೌಡ್. ಯಾದಾದ್ರಿ ಭುವನಗಿರಿಯ ಚೌತುಪ್ಪಲ್ ಮಂಡಲ್ನ ಪಿಪಲ್ಪಹಡ್ನ ಚೈದುಗುಲ್ಲ ಶೇಖರ್ ಗೌಡ್ ಅಪಘಾತದಲ್ಲಿ ಒಂದು ಕಾಲು ಮತ್ತು ಒಂದು ಕೈ ಕಳೆದುಕೊಂಡಿದ್ದರು.
ಇದರಿಂದ ಹತಾಶೆಗೊಳಗಾಗದೇ ಅವರು ತಮ್ಮ ದೃಢ ಮನಸ್ಸು ಮಾಡಿ ಕೃತಕ ಕಾಲಿನ ಸಹಾಯದಿಂದ ಶಿಖರ ಏರಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ಎವರೆಸ್ಟ್ನ ಬೇಸ್ ಕ್ಯಾಂಪ್ನಿಂದ 5,364 ಮೀಟರ್ ಎತ್ತರ ಬೆಟ್ಟ ಏರಿದ್ದಾರೆ. ಜೊತೆಗೆ ರಷ್ಯಾದ 5,642 ಮೀಟರ್ ಎತ್ತರದ ಮೌಂಟ್ ಎಲ್ಬುಸ್ ಶಿಖರ, ಆಫ್ರಿಕಾದ 5,895 ಮೀಟರ್ ಎತ್ತರದ ಕಿಲಿಮಂಜರೊ ಶಿಖರವನ್ನು ಏರಿ ಭಾರತದ ಧ್ವಜ ಹಾರಿಸಿದ್ದಾರೆ.
ಸದ್ಯ ಗೌಡ್ ಅರ್ಜೆಟಿನಾದ ನಾಲ್ಕನೇ ಎತ್ತರದ ಶಿಖರವಾಗಿರುವ ಅಕೊನ್ಕಾಗುವಾ ಹತ್ತಲು ಸಿದ್ದತೆ ನಡೆಸಿದ್ದಾರೆ. ಸರ್ಕಾರದ ಸಹಾಯ ಸಿಕ್ಕರೆ ಇನ್ನು ಅನೇಕ ಶಿಖರ ಹತ್ತವ ಇಚ್ಛೆ ವ್ಯಕ್ತಪಡಿಸಿದ್ದಾರೆ ಶೇಖರ್ ಗೌಡ್
ಐಟಿಐ ಅಧ್ಯಯನದ ವೇಳೆ ಕಾಲು ಜಾರಿ ಬಿದ್ದಿದ್ದ ಯುವಕ: ಬಡ ಕುಟುಂಬದಲ್ಲಿ ಜನಿಸಿದ ಶೇಖರ್, ನಲಗೊಂಡದಲ್ಲಿ ಐಟಿಐ ಅಧ್ಯಯನ ಮಾಡುತ್ತಿದ್ದ ವೇಳೆ 2006ರಲ್ಲಿ ಮನೆಯ ಮಹಡಿಯಲ್ಲಿ ಕಾಲು ಜಾರಿ ವಿದ್ಯುತ್ ಟ್ರಾನ್ಸ್ಫಾರ್ಮ್ ಮೇಲೆ ಬಿದ್ದರು. ಗಂಭೀರವಾಗಿ ಗಾಯಗೊಂಡ ಆತನ ಬಲ ಕೈ ಮತ್ತು ಎಡ ಗಾಲನ್ನು ಕತ್ತರಿಸಲಾಯಿತು. ಇದಾದ ಬಳಿಕ ಕೆಲವು ಮೊಬೈಲ್ ರಿಪೇರಿ ಶಾಪ್ನಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಅಂಗವೈಕಲ್ಯ ಮೆಟ್ಟಿ ನಿಂತು ಸಾಧನೆ: ಇದಾದ ಬಳಿಕ 2014ರಲ್ಲಿ ಹೈದರಾಬಾದ್ನಲ್ಲಿ ಮ್ಯಾರಾಥನ್ನಲ್ಲಿ ಭಾಗಿಯಾದರು. ಈ ವೇಳೆ ಚೆನ್ನೈ ದಸ್ತಗಿರಿಯಿಂದ ಪ್ರೋತ್ಸಾಹ ನೀಡಲಾಯಿತು. ಇದಾದ ಬಳಿಕ ಅವರು ಹಿಂದಿರುಗಿ ನೋಡಲಿಲ್ಲ. ಭಾರತೀಯ ಕೃತಕ ಅಂಗಾಂಶ ಬ್ಯಾಂಕ್ನಿಂದ ಕೃತಕ ಕಾಲು ಮತ್ತು ಬ್ಲೆಡ್ ಪಡೆದರು. ಇವರು 3ಗಂಟೆ 39 ಸೆಕೆಂಡ್ನಲ್ಲಿ ಡೆಹ್ರಾಡೂನ್ ಹಾಫ್ ಮ್ಯಾರಾಥನ್ ಪೂರೈಸಿದರು.
ಇಲ್ಲಿಯವರೆಗೆ 30 ಮ್ಯಾರಾಥನ್ಗಳನ್ನು ಇವರು ಪೂರೈಸಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 48 ಗಂಟೆಗಳ ಕಾಲ 4,100ಕಿ.ಮೀ ಸೈಕಲ್ ಸವಾರಿ ನಡೆಸಿದ್ದರು.
ಹಿರೇಂಜ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್: ಶೇಖರ್ ಹೆಸರು ಹಿರೇಂಜ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿದೆ. ಇದೇ ಉತ್ಸವದಿಂದ ಪ್ರಪಂಚದ ಏಳು ಅತ್ಯಂತ ಎತ್ತರದ ಶಿಖರ ಏರುವ ಗುರಿ ಹೊಂದಿದ್ದು, ಈಗಾಗಲೇ ಮೂರನ್ನು ಏರಿದ್ದಾರೆ. ಬಡ ಕುಟುಂಬದ ಶೇಖರ್ ಕ್ರೌಡ್ಫಂಡಿಂಗ್ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಶೇಖರ್ ಹೈದರಾಬಾದ್ನಲ್ಲಿ ವಾಸವಾಗಿದ್ದು, ಮದಿನಗುದ ಪ್ರಣಂ ಆಸ್ಪತ್ರೆಯಲ್ಲಿ ರೋಗಿ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: ಕೇವಲ 5 ಪೈಸೆಗೆ ಅನ್ಲಿಮಿಟೆಡ್ ತಾಲಿ; ರೆಸ್ಟೋರೆಂಟ್ಗೆ ಮುಗಿಬಿದ್ದ ಗ್ರಾಹಕರು