ಹೈದರಾಬಾದ್ (ತೆಲಂಗಾಣ): ಕಲ್ಲಿದ್ದಲು ಗಣಿಯಲ್ಲಿ ಛಾವಣಿ ಕುಸಿದ ನಾಲ್ವರು ಸಿಬ್ಬಂದಿ ಕಳೆದ 18 ಗಂಟೆಗಳಿಂದ ಅವಶೇಷಗಳಡಿ ಸಿಲುಕಿರುವ ಘಟನೆ ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ರಾಮಗುಂಡಂನಲ್ಲಿ ಜರುಗಿದೆ. ರಾಮಗುಂಡಂ ಸಮೀಪದ ಆರ್ಜಿ-3 ವ್ಯಾಪ್ತಿಯ ಅಡ್ರಿಯಾಲಾ ಲಾಂಗ್‌ವಾಲ್ ಕಲ್ಲಿದ್ದಲು ಗಣಿಯಲ್ಲಿ ಈ ದುರಂತ ಸಂಭವಿಸಿದೆ. ಪರಿಣಾಮ ಮೂವರು ಗಾಯಗೊಂಡಿದ್ದು, ಇನ್ನೂ ನಾಲ್ವರು ಅವಶೇಷಗಳಡಿ ಸಿಲುಕಿದ್ದಾರೆ.
ಗಣಿಯ ಎಎಲ್‌ಪಿಯ 85ನೇ ಹಂತದಲ್ಲಿ ಛಾವಣಿಗೆ ಚಿಲಕ ಹಾಕುವ ವೇಳೆ, ಮೇಲ್ಛಾವಣಿಯ ಪಕ್ಕದ ಗೋಡೆ ಕುಸಿದು ಬಿದ್ದು ಈ ದುರ್ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಥಳದಲ್ಲಿ ರಕ್ಷಣಾ ತಂಡ ಕಾರ್ಯಾಚರಣೆ ನಡೆಸಿದ್ದು, ಮೂವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವಶೇಷಗಳಡಿ ಸಿಲುಕಿರುವ ನಾಲ್ವರ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರೆದಿದ್ದು, ಗಾಯಾಳುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಇನ್ನು, 25 ದಿನಗಳ ಹಿಂದೆಯೂ ಛಾವಣಿ ಕುಸಿದಿತ್ತು. ಈಗ ಮತ್ತೆ ಅದೇ ರೀತಿಯ ಘಟನೆ ಪುನರಾವರ್ತನೆಯಾಗಿದೆ.
ಇದನ್ನೂ ಓದಿ: ಆಸ್ತಿಗೋಸ್ಕರ ಜಗಳ: ಒಡಹುಟ್ಟಿದ ಅಣ್ಣನಿಂದಲೇ ತಮ್ಮನ ಕೊಲೆ