ಮುಂಬೈ: ರೈಲಿನಲ್ಲಿ ಹವಾನಿಯಂತ್ರಕ ಕೋಚ್ನಲ್ಲೇ ಪ್ರಯಾಣಿಸಲು ಜನರು ಇಷ್ಟಪಡುತ್ತಾರೆ. ಆದರೆ ದೊಡ್ಡ ಮೊತ್ತ ನೀಡಿ ಟಿಕೆಟ್ ಖರೀದಿಸಬೇಕು. ಕೆಲವೊಮ್ಮೆ ತಾಂತ್ರಿಕ ದೋಷಗಳಿಂದ ಎಸಿ ಆಫ್ ಆಗುತ್ತದೆ. ಹೀಗೆ ಉಂಟಾದ ತೊಂದರೆಗೆ ಪ್ರಯಾಣಿಕರೊಬ್ಬರು ಗ್ರಾಹಕ ನ್ಯಾಯಾಲಯಕ್ಕೆ ದೂರು ದಾಖಲಿಸಿ ಜಯ ಸಾಧಿಸಿದ್ದಾರೆ.
ಮುಂಬೈಯಿಂದ ಅಲಹಾಬಾದ್ಗೆ ಪ್ರಯಾಣಿಸಲು ಶಶಿಕಾಂತ್ ಶುಕ್ಲಾ ಎಂಬವರು ದುರಂತೋ ಎಕ್ಸ್‌ಪ್ರೆಸ್‌ನಲ್ಲಿ ಎಸಿ ಟಿಕೆಟ್ ಕಾಯ್ದಿರಿಸಿದ್ದರು. ಪ್ರಯಾಣದ ಸಮಯದಲ್ಲಿ ಎಸಿ ಬಂದ್ ಆಗಿ ಕೋಚ್ನ ತಾಪಮಾನವು 42 ಡಿಗ್ರಿ ತಲುಪಿತ್ತು. ತೊಂದರೆಗೊಳಗಾದ ಶಶಿಕಾಂತ್ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಕೋರ್ಟ್ 1190 ರೂಪಾಯಿ ಟಿಕೆಟ್ಗೆ 50 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಗ್ರಾಹಕ ನ್ಯಾಯಾಲಯವು ರೈಲ್ವೆ ಇಲಾಖೆಗೆ ಹೇಳಿದೆ. ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡ ರೈಲ್ವೆ ಟಿಕೆಟ್ ಹಣವನ್ನು ಹಿಂದಿರುಗಿಸುವುದರ ಜೊತೆಗೆ ಪರಿಹಾರವಾಗಿ 50 ಸಾವಿರ ರೂಪಾಯಿಯನ್ನು ನೀಡಿದೆ.
ಇದನ್ನೂ ಓದಿ: ಉಬರ್ ಚಾಲಕನ ನಿರ್ಲಕ್ಷ್ಯದಿಂದ ವಿಮಾನ ತಪ್ಪಿಸಿಕೊಂಡ ಮಹಿಳೆ: ಗ್ರಾಹಕ ನ್ಯಾಯಾಲಯದಿಂದ ದಂಡ