ETV Bharat / bharat

ಆರ್ಟಿಕಲ್​ 370 ರದ್ದು: ಸುಪ್ರೀಂ ತೀರ್ಪಿನಿಂದ ಏಕ್​ ಭಾರತ್​ ಶ್ರೇಷ್ಠ್​ ಭಾರತ್ ಕಲ್ಪನೆ ಸಾಕಾರ.. ಪ್ರಧಾನಿ ಮೋದಿ

ಆರ್ಟಿಕಲ್​ 370 ಕುರಿತ ಸುಪ್ರೀಂ ತೀರ್ಪಿನಿಂದ ಏಕ್​ ಭಾರತ್​ ಶ್ರೇಷ್ಠ್​ ಭಾರತ್ ಕಲ್ಪನೆ ಸಾಕಾರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

abrogation-of-article-370-development-democracy-dignity-replaced-disillusionment-disappointment-and-despondency-in-j-k-pm
ಆರ್ಟಿಕಲ್​ 370 ರದ್ದು : ಸುಪ್ರೀಂ ತೀರ್ಪಿನಿಂದ ಏಕ್​ ಭಾರತ್​ ಶ್ರೇಷ್ಠ್​ ಭಾರತ್ ಕಲ್ಪನೆ ಸಾಕಾರ : ಪ್ರಧಾನಿ ಮೋದಿ
author img

By PTI

Published : Dec 12, 2023, 9:20 PM IST

ನವದೆಹಲಿ : ಡಿಸೆಂಬರ್ 11 ರಂದು ಭಾರತದ ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯ 370 ಮತ್ತು 35(ಎ) ವಿಧಿಗಳನ್ನು ರದ್ದುಗೊಳಿಸುವುದರ ಕುರಿತು ಐತಿಹಾಸಿಕ ತೀರ್ಪು ನೀಡಿತು. ತನ್ನ ತೀರ್ಪಿನ ಮೂಲಕ ನ್ಯಾಯಾಲಯವು ಪ್ರತಿಯೊಬ್ಬ ಭಾರತೀಯನು ಗೌರವಿಸುವ ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ ಎತ್ತಿಹಿಡಿದಿದೆ. 2019ರ ಆಗಸ್ಟ್ 5 ರಂದು ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರವು ಸಾಂವಿಧಾನಿಕ ಏಕೀಕರಣದ ಉದ್ದೇಶದಿಂದ ಮಾಡಲಾಗಿದೆಯೇ ಹೊರತು ದುರುದ್ದೇಶದಿಂದ ಅಲ್ಲ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. 370ನೇ ವಿಧಿ ಶಾಶ್ವತವಲ್ಲ ಎಂಬ ಅಂಶವನ್ನು ನ್ಯಾಯಾಲಯ ಇಲ್ಲಿ ಗುರುತಿಸಿದೆ.

ಜಮ್ಮು, ಕಾಶ್ಮೀರ ಮತ್ತು ಲಡಾಖ್‌ನ ಉಸಿರುಕಟ್ಟುವ ದೃಶ್ಯಗಳು, ಪ್ರಶಾಂತ ಕಣಿವೆಗಳು ಮತ್ತು ಭವ್ಯವಾದ ಪರ್ವತಗಳು ತಲೆಮಾರುಗಳಿಂದ ಕವಿಗಳು, ಕಲಾವಿದರು ಮತ್ತು ಸಾಹಸಿಗಳಲ್ಲಿ ಮನಸಲ್ಲಿ ಸೂರೆಗೊಂಡಿವೆ. ಅಲ್ಲಿ ಹಿಮಾಲಯವು ಆಕಾಶವನ್ನು ಮುಟ್ಟುತ್ತದೆ. ಸರೋವರಗಳು ಮತ್ತು ನದಿಗಳು ಸ್ವರ್ಗವನ್ನು ಪ್ರತಿಬಿಂಬಿಸುತ್ತದೆ. ಆದರೆ, ಕಳೆದ ಏಳು ದಶಕಗಳಿಂದ ಇದು ಹಿಂಸಾಚಾರ ಮತ್ತು ಅಸ್ಥಿರತೆಗೆ ಸಾಕ್ಷಿಯಾಗಿದೆ.

ದುರದೃಷ್ಟವಶಾತ್, ಶತಮಾನಗಳ ವಸಾಹತುಶಾಹಿ, ಆರ್ಥಿಕ ಮತ್ತು ಮಾನಸಿಕ ಅಧೀನತೆಯಿಂದಾಗಿ ಒಂದು ರೀತಿಯ ಗೊಂದಲಮಯ ಸಮಾಜ ನಿರ್ಮಾಣವಾಯಿತು. ಮೂಲ ವಿಷಯಗಳಲ್ಲಿ ಸ್ಪಷ್ಟವಾದ ನಿಲುವನ್ನು ತೆಗೆದುಕೊಳ್ಳುವ ಬದಲು, ದ್ವಂದ್ವ ನಿಲುವುಗಳನ್ನು ಹೊಂದಿದೆವು. ಇದು ಗೊಂದಲಕ್ಕೆ ಕಾರಣವಾಯಿತು. ದುಃಖದ ಸಂಗತಿ ಎಂದರೆ ಇಂತಹ ಗೊಂದಲದ ಮನಸ್ಥಿತಿಗೆ ಜಮ್ಮು ಮತ್ತು ಕಾಶ್ಮೀರ ಬಲಿಪಶುವಾಯಿತು. ಸ್ವಾತಂತ್ರ್ಯದ ಸಮಯದಲ್ಲಿ, ನಾವು ರಾಷ್ಟ್ರೀಯ ಏಕೀಕರಣಕ್ಕೆ ಹೊಸ ಆರಂಭವನ್ನು ಮಾಡುವ ಆಯ್ಕೆಯನ್ನು ಹೊಂದಿದ್ದೆವು. ಆದರೆ, ದೀರ್ಘಾವಧಿಯ ರಾಷ್ಟ್ರೀಯ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿ ಗೊಂದಲಮಯ ಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಿದೆವು.

ಜಮ್ಮು ಕಾಶ್ಮೀರದ ಜನರು ಅಭಿವೃದ್ಧಿಯನ್ನು ಬಯಸುತ್ತಾರೆ ಎಂದು ನನಗೆ ಸ್ಪಷ್ಟವಾಗಿ ಗೊತ್ತಿತ್ತು. ತಮ್ಮ ಸಾಮರ್ಥ್ಯ ಮತ್ತು ಕೌಶಲ್ಯಗಳಿಂದ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿ ಜೊತೆಗೆ ಭಾರತದ ಅಭಿವೃದ್ಧಿಗೆ ಕೊಡುಗೆ ನೀಡಲು ಅವರು ಬಯಸುತ್ತಾರೆ. ಕಳೆದ ಏಳು ದಶಕಗಳಿಂದ ಇಲ್ಲಿನ ಜನರು ಪಡುತ್ತಿರುವ ಕಷ್ಟದಿಂದ ನೆಮ್ಮದಿ ಬಯಸಿದ್ದಾರೆ. ಈ ಮೂಲಕ ತಮ್ಮ ಮುಂದಿನ ಪೀಳಿಗೆ ಉತ್ತಮ ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಜನರು ಉತ್ಸುಕರಾಗಿದ್ದಾರೆ.

ಸುಪ್ರೀಂ ಕೋರ್ಟ್​ ತೀರ್ಪಿನಿಂದ ಭಾರತದ ಸಾರ್ವಭೌಮತೆ, ಸಮಗ್ರತೆಯನ್ನು ಎತ್ತಿ ಹಿಡಿದು ಏಕ್​ ಭಾರತ್​ ಶ್ರೇಷ್ಠ ಭಾರತ್ ಕಲ್ಪನೆಯನ್ನು ಸಾಕಾರಗೊಳಿಸಿದೆ. ಇನ್ನು ಮುಂದೆ ಜಮ್ಮು, ಕಾಶ್ಮೀರ ಮತ್ತು ಲಡಾಖ್​ನಲ್ಲಿ ಮಕ್ಕಳು ಉತ್ತಮ ವಾತಾವರಣದಲ್ಲಿ ಬೆಳೆಯುತ್ತಾರೆ. ಈ ಮಕ್ಕಳು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲಿನ ಜನರ ಕನಸುಗಳು ಇನ್ನು ಮುಂದೆ ಬಂಧಿಯಲ್ಲ. ಇನ್ನು ಮುಂದೆ ಇಲ್ಲಿ ಎಲ್ಲವೂ ಅಭಿವೃದ್ಧಿ, ಅಭಿವೃದ್ಧಿ, ಅಭಿವೃದ್ಧಿ ಮಾತ್ರ.

2019ರ ಆಗಸ್ಟ್​ 5ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ್ದೆವು. ಬಳಿಕ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದೆವು. ಇನ್ನು, ಮುಂದೆ ದೇಶದ ಕಾನೂನು ಇಲ್ಲಿಗೂ ಅನ್ವಯವಾಗುತ್ತದೆ. ಇಲ್ಲಿಯೂ ಚುನಾವಣೆಗಳನ್ನು ನಡೆಸಲಾಗುತ್ತದೆ. ಚುನಾವಣೆಯಲ್ಲಿ ನಿರಾಶ್ರಿತರಿಗೆ ಅವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ. ಇನ್ನು ಮುಂದೆ ಇಲ್ಲಿನ ಜನರೆಲ್ಲ ಅಭಿವೃದ್ಧಿಯ ಫಲಾನುಭವಿಗಳಾಗಲಿದ್ದಾರೆ.

ಈ ಎರಡು ವಿಧಿಗಳು ಒಂದೇ ದೇಶದ ಜನರನ್ನು ಇಬ್ಭಾಗ ಮಾಡಿತ್ತು. ಆದರೆ, ಕೇಂದ್ರ ಸರ್ಕಾರವು ಅಲ್ಲಿನ ಜನರಿಗೆ ಆದ ಅನ್ಯಾಯವನ್ನು ತೊಡೆದು ಹಾಕುವ ನಿರ್ಣಯವನ್ನು ಮಾಡಬೇಕಿತ್ತು. ಈಗ ಜಮ್ಮು ಮತ್ತು ಕಾಶ್ಮೀರದ ಸ್ಥಿತಿ ಬದಲಾಗಿದೆ. ಲಡಾಖ್​ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಇಲ್ಲಿ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಅಭಿವೃದ್ಧಿ, ಶೈಕ್ಷಣಿಕ ಸೇರಿದಂತೆ ಹಲವು ವಿಷಯಗಳಲ್ಲಿ ಜಮ್ಮು ಕಾಶ್ಮೀರ ಸಂಪೂರ್ಣವಾಗಿ ಬದಲಾಗಿದೆ.

ಇದನ್ನೂ ಓದಿ : ದೇಶದಲ್ಲಿ ಕಾಂಗ್ರೆಸ್​ ಲೂಟಿ ಮುಂದೆ 'ಮನಿ ಹೀಸ್ಟ್​' ಕಾಲ್ಪನಿಕ ಕಥೆ ಯಾರಿಗೆ ಬೇಕು: ಮೋದಿ ಟಾಂಗ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.