ಹೈದರಾಬಾದ್: ಇಂದು ಕೇರಳ ಸೇರಿದಂತೆ ಕರಾವಳಿ ಭಾಗಗಳಲ್ಲಿ ವಿಷು ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ವಿಷು ಕೇರಳದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ವಸಂತಕಾಲದ ಆಗಮನವನ್ನು ಇದು ಸೂಚಿಸುತ್ತದೆ. ಅಲ್ಲದೇ ಈ ದಿನವನ್ನು ಕೇರಳಿಗರು ಹೊಸವರ್ಷ ಎಂದು ಹಾಗು ಸುಗ್ಗಿಯ ಹಬ್ಬವೆಂದು ಸಹ ಆಚರಣೆ ಮಾಡುತ್ತಾರೆ. ಸಂಸ್ಕೃತ ಭಾಷೆಯಲ್ಲಿ 'ವಿಷು' ಎಂದರೆ 'ಸಮಾನ' ಎಂದರ್ಥ. ಇದನ್ನು ಕೇವಲ ಕೇರಳಿಗರು ಮಾತ್ರವಲ್ಲದೇ ದೇಶಾದ್ಯಂತ ವಿವಿಧ ಹೆಸರುಗಳಲ್ಲಿ ಈ ದಿನ ಆಚರಿಸಲಾಗುತ್ತದೆ. ಅಸ್ಸೋಂನಲ್ಲಿ 'ಬಿಹು' ಎಂದು ಆಚರಿಸಿದರೇ ಪಂಜಾಬ್, ಉತ್ತರಾಖಂಡದಲ್ಲಿ 'ಬೈಸಾಖಿ' ಎಂದು ಆಚರಿಸುತ್ತಾರೆ.
ವಿಷು ಆರಂಭವಾಗಿದ್ದು ಯಾವಾಗ: ಈ ದಿನ ಸೂರ್ಯ ಆಸ್ಥಾನವನ್ನು ಬದಲಿಸಿ ಮೇಷ ರಾಶಿಗೆ ಪ್ರವೇಶಿಸುತ್ತಾನೆ ಎಂದು ವಿಷು ಆಚರಣೆ ಮಾಡಲಾಗುತ್ತದೆ. ಕ್ರಿ.ಪೂ 844 ರಿಂದ ವಿಷು ಹಬ್ಬದ ಆಚರಣೆ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಈ ಬಾರಿ ಸೂರ್ಯ ಏ.14 ಶುಕ್ರವಾರದಂದು ಮಧ್ಯಾಹ್ನ ಪ್ರವೇಶ ಮಾಡಿದ್ದು ಈ ಹಿನ್ನೆಲೆ ಇಂದು ಕೇರಳ ಸೇರಿದಂತೆ ಕರ್ನಾಟಕದ ಕರಾವಳಿ ಭಾಗಗಳಲ್ಲಿ ವಿಶು ಆಚರಣೆ ಮಾಡಲಾಗುತ್ತಿದೆ. ಇನ್ನು ಇದು ಕೇರಳ ಜೋತಿಷ್ಯಶಾಸ್ತ್ರದ ಪ್ರಕಾರ ಇದು ಹೊಸ ವರ್ಷವನ್ನು ಗುರುತಿಸುವ ಹಬ್ಬವಾಗಿದೆ. ಸೂರ್ಯ ಮೇಷ ರಾಶಿಗೆ ಆಸ್ಥಾನವನ್ನು ಬದಲಿಸುವುದನ್ನು ಸೂಚಿಸುತ್ತದೆ.
ಅಲ್ಲದೇ ಈ ದಿನ ಸೂರ್ಯ ಪ್ರಕಾಶಮಾನವಾಗಿರುತ್ತಾನೆ ಮತ್ತು ಹೆಚ್ಚು ಶಕ್ತಿಶಾಲಿಯಾಗಿರುತ್ತಾನೆ ಎಂಬುದು ಇಲ್ಲಿಯ ನಂಬಿಕೆಯಾಗಿದೆ. ಈ ಹಿನ್ನೆಲೆ ವಿಶೇಷ ವಿಶು ಹಬ್ಬದಂದು ಬೆಳಗ್ಗೆ ಬೇಗ ಎದ್ದು ಮನೆಯನ್ನು ಶುಭ್ರಗೊಳಿಸಿ, ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿಗಳನ್ನು ಹಾಕಿ, ಮನೆಯನ್ನು ಹೂ ಗಳಿಂದ ಅಲಂಕರಿಸಲಾಗುತ್ತದೆ. ಅಲ್ಲದೇ ಹೊಸ ಬಟ್ಟೆಗಳನ್ನು ಧರಿಸಿ ಕೃಷ್ಣನ ದೇವಸ್ಥಾನಕ್ಕೆ ತೆರಳಿ ಜನರು ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ.
ವಿಷು ಹಬ್ಬದ ಪೌರಾಣಿಕ ಹಿನ್ನೆಲೆ: ನರಕಾಸುರ ಎಂಬ ರಾಕ್ಷಸನನ್ನು ಈ ದಿನ ಶ್ರೀಕೃಷ್ಣ ಪರಮಾತ್ಮನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ. ಹಾಗಾಗಿ ಈ ದಿನ ಕೃಷ್ಣನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಕೃಷ್ಣನ ಸ್ಮರಣೆಯಿಂದ ಈ ಎಲ್ಲ ಇಷ್ಟಾರ್ಥಗಳು ಸಿದ್ದಿಯಾಗುತ್ತವೆ. ಪಾಪಪರಿಹಾರ, ದೋಷ ಪರಿಹಾರವಾಗಿ ಅಷ್ಟೈಶ್ವರ್ಯ ಸಿದ್ದಿಯಾಗಿ ಸುಖ ಸಂಸರ ಪ್ರಾಪ್ತಿಯಾಗುತ್ತದೆ ಎಂದು ಹೇಳಾಗುತ್ತದೆ.
ಇದನ್ನೂ ಓದಿ: ಭಾರತದ ವಿವಿಧ ರಾಜ್ಯಗಳಲ್ಲಿನ ಪ್ರಖ್ಯಾತ ಹಬ್ಬಗಳಿವು: ಒಮ್ಮೆಯಾದರೂ ಕಣ್ತುಂಬಿಕೊಳ್ಳಿ!
ಮತ್ತೊಂದು ಪೌರಾಣಿಕ ಕಥೆ ಪ್ರಕಾರ, ಒಮ್ಮೆ ಹತ್ತು ತಲೆ ರಾವಣ ಸೂರ್ಯ ದೇವನನ್ನು ಪೂರ್ವದಿಂದ ಉದಯಿಸುವುದು ತಡೆಯುತ್ತಾನೆ, ಆಯೋಧ್ಯಾಧಿಪತಿ ಶ್ರೀರಾಮ ದೇವರು ರಾವಣನನ್ನು ಸಂಹರಿಸಿದ ಬಳಿಕ ಸೂರ್ಯ ಪೂರ್ವ ದಿಕ್ಕಿನಿಂದ ಉದಯಿಸಲು ಪ್ರಾರಂಭಿಸಿದ ಎನ್ನಲಾಗುತ್ತದೆ. ಈ ದಿನವನ್ನು ಎಲ್ಲ ಮನೆಗಳಲ್ಲಿ ಬಗೆ ಬಗೆಯ ಪಂಚಭಕ್ಷಾ ಆಹಾರ ಪದಾರ್ಥಗಳ ತಯಾರಿಸಿ ಕುಟುಂಬ ಸಮೇತವಾಗಿ ಒಟ್ಟಿಗೆ ಕುಳಿತು ಊಟವನ್ನು ಮಾಡುತ್ತಾರೆ.
ಇದನ್ನೂ ಓದಿ: ಬೈಸಾಖಿ ನಿಮಿತ್ತ ಗಂಗಾಸ್ನಾನಕ್ಕಾಗಿ ಹರಿದ್ವಾರಕ್ಕೆ ಭಕ್ತರ ದಂಡು