ತನ್ನ ತಾಳ್ಮೆ, ಆಸಕ್ತಿ, ಸತತ ಪ್ರಯತ್ನದಿಂದ ಇಲ್ಲೊಬ್ಬ ಮಹಿಳೆ ವೆಬ್‌ಸೈಟ್ ಆರಂಭಿಸಿ ಯಶಸ್ವಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಹೌದು, ತಮ್ಮದೇ ವೆಬ್ಸೈಟ್ನ ಸಿಇಒ ಆಗಿರುವ ಯಶಸ್ವಿ ಉದ್ಯಮಿ ನಂದಿನಿ ಶೆಣೈ ತಮ್ಮ ಪಿಂಕ್ವಿಲ್ಲಾ ವೆಬ್ಸೈಟ್ನಿಂದ ಸಾಧನೆಯ ಬೆನ್ನೇರಿದ ಯಶೋಗಾಥೆ ತಿಳಿಯೋಣ ಬನ್ನಿ.
ನಂದಿನಿಯವರಿಗೆ ಎಲ್ಲರಿಗಿಂತಲೂ ಸಿನಿಮಾ ಮತ್ತು ತಾರೆಯರ ಬಗ್ಗೆ ಅತಿಯಾದ ಹುಚ್ಚು ಇತ್ತು. ತಮ್ಮ ಮನೆಯಲ್ಲಿ ಯಾವಾಗಲು ಚಲನಚಿತ್ರಗಳ ಕುರಿತು ಚರ್ಚೆ ನಡೆಯುತ್ತಿತ್ತಂತೆ. ಆದರೆ ನಮ್ಮ ಕುಟುಂಬದಲ್ಲಿ ಎಲ್ಲರೂ ಇಂಜಿನಿಯರಿಂಗ್ಗಳು. ಹಾಗಾಗಿ ನಾನು ಕೂಡ ಇಂಜಿನಿಯರಿಂಗ್ ಮುಗಿಸಿ ಎಂಎಸ್ ಮಾಡಲು ಅಮೆರಿಕಕ್ಕೆ ತೆರಳಿ ಕೋರ್ಸ್ ಮುಗಿಸಿ ಸಾಫ್ಟ್ ವೇರ್ ಉದ್ಯೋಗಿಯಾಗಿ ಅಲ್ಲೇ ನೆಲೆಸಿದ್ದೆ ಎಂದು ತಮ್ಮ ಲೈಫ್ನ ಕುರಿತು ಈ ರೀತಿಯಾಗಿ ಹೇಳಿದ್ದಾರೆ.
ಈಗಿನ ಕಾಲದಲ್ಲಾದರು ಚಲನಚಿತ್ರಗಳು ಮತ್ತು ತಾರೆಯರ ಬಗ್ಗೆ ಎಲ್ಲಾ ಇತ್ತೀಚಿನ ಗಾಸಿಪ್‌ಗಳು ಗೂಗಲ್‌ನಲ್ಲಿ ಕಂಡುಬರುತ್ತವೆ. ಆದರೆ ಒಂದು ಕಾಲದಲ್ಲಿ ಇದರ ಕುರಿತು ಬೇರೆ ದೇಶದಲ್ಲಿರುವವರಿಗೆ ಆ ಮಾಹಿತಿ ಸಿಗುವುದು ಕಷ್ಟವಾಗಿತ್ತು. ಆ ಸಂದರ್ಭದಲ್ಲಿ ಎಲ್ಲರಿಗೂ ತಲುಪುವಂತೆ ವೆಬ್‌ಸೈಟ್ ಆರಂಭಿಸಬೇಕು ಎಂಬ ಯೋಚನೆ ಬಂತು, ಅದೇ ಯೋಚನೆ ನನ್ನನ್ನು ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ ಎನ್ನುತ್ತಾರೆ ಶೆಣೈ.
ಈ ಯೋಜನೆಯ ಪ್ರಾರಂಭದಲ್ಲಿ ನನ್ನ ಕುಟಂಬದವರೆಲ್ಲ ಆಕ್ಷೇಪಿಸಿದರು ಕೂಡ ನಾನು ನಿರಾಶೆಯಾಗದೆ ಕೆಲಸವನ್ನು ಶುರುಮಾಡಿಯೆ ಬಿಟ್ಟೆ. 2007ರಲ್ಲಿ 'ಪಿಂಕ್ವಿಲ್ಲಾ' ಎಂಬ ನನ್ನ ವೆಬ್‌ಸೈಟ್ ಅನ್ನು ವಿನ್ಯಾಸಗೊಳಿಸಿ ಪ್ರಾರಂಭಿಸಿದೆ. ಇದರಲ್ಲಿ ಯಾರೂ ಕೂಡ ನಟ-ನಟಿಯರ ಮಾಹಿತಿಯನ್ನು ಹಂಚಿಕೊಳ್ಳಬಹುದು. ಪ್ರಾರಂಭಿಸಿದ 1 ವರ್ಷದೊಳಗೆ ನಾವು ದಿನಕ್ಕೆ 35 ಲೇಖನಗಳನ್ನು ಸ್ವೀಕರಿಸುವ ಮಟ್ಟವನ್ನು ತಲುಪಿ, ಅವುಗಳೆಲ್ಲವು ಲಕ್ಷಾಂತರ ವೀಕ್ಷಣೆಗಳನ್ನು ಪಡೆಯುವ ಹಂತಕ್ಕೆ ವೆಬ್‌ಸೈಟ್ ಬೆಳೆಯಿತು.
ಮುಖ್ಯವಾಗಿ, ತಮ್ಮ ವೆಬ್‌ಸೈಟ್ ನಲ್ಲಿ 2009 ರಂದು ನಾಯಕಿಯೊಬ್ಬರ ಹೊಸ ಅಪ್ಡೇಟ್ನ್ನು ಹಾಕಿದಾಗ ಪತ್ರಿಕೆಗಳು ಈ ವಿಷಯವನ್ನು ನಮ್ಮ ವೆಬ್ಸೈಟ್ನ ಹೆಸರಿನೊಂದಿಗೆ ಪ್ರಕಟಿಸಲು ಒಪ್ಪಿಕೊಂಡಿತ್ತು. ಅದಾದ ಬಳಿಕ ಪಿಂಕ್ವಿಲ್ಲಾಗೆದ ವೀಕ್ಷಕರು ಇನ್ನು ಹೆಚ್ಚಾದರು. ಅಲ್ಲಿಂದ ನಾನು ಹಿಂತಿರುಗಿ ನೋಡುವ ಅಗತ್ಯವಿರಲಿಲ್ಲ. ಯಶಸ್ಸಿನ ದಾರಿಯಲ್ಲಿ ನನ್ನ ವೆಬ್‌ಸೈಟ್ ಪಯಣಿಸುತ್ತಿತ್ತು ಎಂದಿದ್ದಾರೆ.
ನಾನು ಈ ಹಂತ ತಲುಪಲು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ. ಹಗಲು ರಾತ್ರಿಯೆನ್ನದೆ, ಕಷ್ಟಪಟ್ಟು ವೆಬ್‌ಸೈಟ್ ಕೆಲಸ ಮಾಡುತ್ತಿದ್ದೆ. ದಿನಕ್ಕೆ ಲಕ್ಷಾಂತರ ವೀಕ್ಷಣೆಗಳು ಬರಲು ಹಂಬಲಿಸುತ್ತಿದ್ದೆ. ಇಷ್ಟೇ ಅಲ್ಲದೆ, ನನ್ನ ವೆಬ್ಸೈಟ್ನ್ನು ಇನ್ನೂ ಅಭಿವೃದ್ಧಿ ಪಡಿಸಲು ತಂಡವನ್ನು ರಚಿಸಿದ್ದೆ. ನಂತರ ನೇರವಾಗಿ ತಾರೆಯರನ್ನ ಸಂದರ್ಶನ ನಡೆಸುವುದನ್ನು ಶುರುಮಾಡಿದೆವು. ಹೀಗೆ ಮುಂದೆ ನಾನು ನನ್ನ ಸಾಫ್ಟ್ ವೇರ್ ಕೆಲಸ ಬಿಟ್ಟೆ. ವಿಷೇಶವೆಂದರೆ ನಾನು ಈ ಉದ್ಯೋಗ ಪ್ರಾರಂಭಿಸುವ ಸಮಯದಲ್ಲಿ ಎಲ್ಲರಿಂದ ಆಕ್ಷೇಪವಿತ್ತು. ಆದರೆ ಈ ಬಾರಿ ಯಾರು ನನ್ನ ನಿರ್ಧಾರಕ್ಕೆ ಅಡ್ಡಿ ಬರಲಿಲ್ಲ. ಕಾರಣ ಅವರಿಗೆ ನನ್ನ ಮೇಲೆ ಮೂಡಿದ್ದ ವಿಶ್ವಾಸ. ಆದ್ದರಿಂದ ಯಾವುದೇ ಪ್ರಯತ್ನ ಮಾಡುವ ಮುನ್ನ ಅದಕ್ಕೆ ನೂರೆಂಟು ವಿಘ್ನಗಳು ಸಹಜ. ಆದರೆ ಅದೆಲ್ಲವನ್ನು ಮೀರಿ ನಿಂತು ಬೆಳೆಯಬೇಕು ಎಂದು ತಮ್ಮ ಜೀವನದ ಕುರಿತು ಈ ರೀತಿಯಾಗಿ ನಂದಿನಿ ಶೆಣೈ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಕಷ್ಟಪಟ್ಟು ಸಂಪಾದಿಸಿದ ಆಸ್ತಿ ಮೇಲೆ ಸಾಲ.. ಒಳ್ಳೆಯದ್ದಾ.. ಕೆಟ್ಟದ್ದಾ?; ಇಲ್ಲಿವೆ ಕೆಲ ಟಿಪ್ಸ್!