ETV Bharat / bharat

ದೆಹಲಿಯಲ್ಲಿ ಮತ್ತೆ 5 ಸಾವಿರ ಕೊರೊನಾ ಕೇಸ್.. ಲಾಕ್‌ಡೌನ್‌ ಬದಲು ವೀಕೆಂಡ್​ ಕರ್ಫ್ಯೂ​ಗೆ ಮೊರೆ ಹೋದ ಸರ್ಕಾರ

author img

By

Published : Jan 4, 2022, 4:13 PM IST

ಕೊರೊನಾ ವೇಗವಾಗಿ ಹಬ್ಬುತ್ತಿರುವ ಕಾರಣ ಸೋಂಕು ನಿಯಂತ್ರಣಕ್ಕೆ ಅನಿವಾರ್ಯವಾಗಿ ಕೆಲ ನಿರ್ಬಂಧಗಳಿಗೆ ಒಳಗಾಗಬೇಕಿದೆ. ಜನರು ವೀಕೆಂಡ್​ ಕರ್ಫ್ಯೂ ಜಾರಿಯಿಂದ ಹೆದರಬೇಕಿಲ್ಲ. ಕಾರ್ಮಿಕರ ಹಿತದೃಷ್ಟಿಯನ್ನು ಪರಿಗಣಿಸಿಯೇ ಈ ವೀಕೆಂಡ್​ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ..

weekend curfew
ವೀಕೆಂಡ್​ ಕರ್ಫ್ಯೂ​

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಹಾವಳಿ ತೀವ್ರವಾದ ಕಾರಣ ಸರ್ಕಾರ ವೀಕೆಂಡ್​ ಕರ್ಫ್ಯೂ ಘೋಷಿಸಿದೆ. ಇದರಿಂದ ವಾರಾಂತ್ಯದ ಎರಡು ದಿನ ಎಲ್ಲ ಚಟುವಟಿಕೆಗಳ ಮೇಲೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ.

ಸುದ್ದಿಗಾರರ ಜೊತೆ ಮಾತನಾಡಿ ಮಾಹಿತಿ ನೀಡಿರುವ ಆರೋಗ್ಯ ಸಚಿವ ಸತ್ಯೇಂದ್ರ ಜೈನ್, ರಾಜ್ಯದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದೆ. ಇಂದು(ಮಂಗಳವಾರ) 5,500 ಹೊಸ ಕೇಸ್ ಪತ್ತೆಯಾಗಿವೆ. ಪಾಸಿಟಿವಿಟಿ ದರ 8.5ಕ್ಕೆ ಏರಿಕೆ ಕಂಡಿದೆ. ಇದರಿಂದಾಗಿ ರಾಜ್ಯದಲ್ಲಿ ಲಾಕ್​ಡೌನ್​ ಬದಲಾಗಿ ವೀಕೆಂಡ್​ ಕರ್ಫ್ಯೂ ಮೊರೆ ಹೋಗಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಒಮಿಕ್ರಾನ್​ ಪ್ರಕರಣಗಳೂ ಹೆಚ್ಚಾಗಿ ಪತ್ತೆಯಾಗುತ್ತಿವೆ. ತಜ್ಞರು ಕೂಡ ಶೀಘ್ರ ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ. ಇದರಿಂದಾಗಿ ವಾರಾಂತ್ಯದ ಎರಡು ದಿನ ಕರ್ಫ್ಯೂ ಜಾರಿ ಮಾಡಲಾಗುತ್ತಿದೆ. ಜನರು ಇದನ್ನು ಲಾಕ್​ಡೌನ್​ ಎಂದು ಪರಿಗಣಿಸಬಾರದು ಎಂದು ಸಚಿವರು ತಿಳಿಸಿದ್ದಾರೆ.

ಕೊರೊನಾ ವೇಗವಾಗಿ ಹಬ್ಬುತ್ತಿರುವ ಕಾರಣ ಸೋಂಕು ನಿಯಂತ್ರಣಕ್ಕೆ ಅನಿವಾರ್ಯವಾಗಿ ಕೆಲ ನಿರ್ಬಂಧಗಳಿಗೆ ಒಳಗಾಗಬೇಕಿದೆ. ಜನರು ವೀಕೆಂಡ್​ ಕರ್ಫ್ಯೂ ಜಾರಿಯಿಂದ ಹೆದರಬೇಕಿಲ್ಲ. ಕಾರ್ಮಿಕರ ಹಿತದೃಷ್ಟಿಯನ್ನು ಪರಿಗಣಿಸಿಯೇ ಈ ವೀಕೆಂಡ್​ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ದೆಹಲಿಯಲ್ಲಿ ಸೋಮವಾರ 4099 ಕೊರೊನಾ ಕೇಸ್​ ದೃಢಪಟ್ಟಿದ್ದವು. ಮಂಗಳವಾರ ಒಂದೇ ದಿನದಲ್ಲಿ 5500 ಕೇಸ್​ ಪತ್ತೆಯಾಗಿವೆ. ಇದು ಸರ್ಕಾರ ಮತ್ತು ಜನರನ್ನು ಆತಂಕಕ್ಕೆ ದೂಡಿದೆ. ಇದರಿಂದಾಗಿ ವಾರಾಂತ್ಯದ ಚಟುವಟಿಕೆಗಳನ್ನು ನಿರ್ಬಂಧಿಸಿ ವೀಕೆಂಡ್​ ಲಾಕ್​ಡೌನ್​ ಘೋಷಿಸಲಾಗಿದೆ.

ಇದನ್ನೂ ಓದಿ: ಕೋವಿಡ್‌ 20 ಸಾವಿರದ ಗಡಿ ದಾಟಿದರೆ ಮುಂಬೈನಲ್ಲಿ ಲಾಕ್​ಡೌನ್ ಜಾರಿ​: ಮೇಯರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.