ETV Bharat / bharat

ಯುಪಿ ಸಿಎಂ ನಿಂದನೆ ಆರೋಪ ಪ್ರಕರಣ: ಆಪ್ ಶಾಸಕ ಸೋಮನಾಥ್ ಭಾರತಿ ಬಂಧನ - ರಾಯ್ ಬರೇಲಿ ಪೊಲೀಸರಿಂದ ಸೋಮನಾಥ್ ಭಾರತಿ ಬಂಧನ

ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಪ್ ಶಾಸಕ ಸೋಮನಾಥ್ ಭಾರತಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ.

cm
cm
author img

By

Published : Jan 11, 2021, 7:50 PM IST

ರಾಯ್ ಬರೇಲಿ (ಉತ್ತರಪ್ರದೇಶ): ಸಿಎಂ ಯೋಗಿ ಆದಿತ್ಯನಾಥ್​​ಗೆ ಕೊಲೆ ಬೆದರಿಕೆ ಹಾಕಿದ ಆರೋಪದಡಿ ಆಪ್ ಶಾಸಕ ಸೋಮನಾಥ್​ ಭಾರತಿಯನ್ನು ಬಂಧಿಸಿರುವುದಾಗಿ ರಾಯ್ ಬರೇಲಿ ಪೊಲೀಸರು ತಿಳಿಸಿದ್ದಾರೆ.

ಐಪಿಸಿ ಸೆಕ್ಷನ್ 147, 332, 353, 505 (2), 153 ಎ, 504, 506 ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಈಗಾಗಲೇ ಸೋಮನಾಥ್ ವಿರುದ್ಧ ಅಮೆಥಿಯ ಜಗದೀಶ್ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದರಿಂದ ಅವರನ್ನು ಅಮೆಥಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ರಾಯ್ ಬರೇಲಿಯ ಹೆಚ್ಚುವರಿ ಎಸ್​​ಪಿ ವಿಶ್ವಜಿತ್ ವಾಸ್ತವ ತಿಳಿಸಿದ್ದಾರೆ .

ಆಪ್ ಶಾಸಕ ಸೋಮನಾಥ್ ಭಾರತಿ ಬಂಧನ

ಇಂದು ಬೆಳಗ್ಗೆ ಸೋಮನಾಥ್​​, ಯುಪಿ ಸಿಎಂ ಧರಿಸಿರುವ ಖಾಕಿ ಬಟ್ಟೆ ತೆಗೆಯಲಿ, ಇಲ್ಲಿನ ಆಸ್ಪತ್ರೆಗಳಲ್ಲಿ ಜನಿಸಿರುವ ಮಕ್ಕಳು ನಾಯಿ ಮಕ್ಕಳು ಎಂದು ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದರು. ಈ ಸಂಬಂಧ FIR ದಾಖಲಿಸಿಕೊಂಡ ಪೊಲೀಸರು, ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.