ETV Bharat / bharat

ಲಂಚದ ಹಣದೊಂದಿಗೆ ವಿಧಾನ ಸಭೆಗೆ ಆಗಮಿಸಿದ ಆಪ್​ ಶಾಸಕ

ತಾತ್ಕಾಲಿಕ ಸಿಬ್ಬಂದಿಗಳನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಲಂಚ ಪಡೆದುಕೊಳ್ಳುತ್ತಿದ್ದಾರೆಂದು ಆರೋಪ - ನಿಯಮ 280ರ ವಿಶೇಷ ಉಲ್ಲೇಖದ ಅಡಿ ವಿಷಯ ಪ್ರಸ್ತಾಪಿಸಿದ ಶಾಸಕ.

aap-mla-mahendra-goyal-shows-bundle-of-notes-received-in-bribe-bjp-mla-walk-out-from-the-house
ದೆಹಲಿ: ಲಂಚದ ಹಣದೊಂದಿಗೆ ವಿಧಾನ ಸಭೆಗೆ ಆಗಮಿಸಿದ ಆಪ್​ ಶಾಸಕ
author img

By

Published : Jan 18, 2023, 10:26 PM IST

ನವದೆಹಲಿ: ದೆಹಲಿ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಕ್ಷದ ಶಾಸಕ ಮಹೇಂದ್ರ ಗೋಯಲ್ ಅವರು ಎಲ್ಲರ ಮುಂದೆ ಲಂಚದ ನೋಟುಗಳ ಬಂಡಲ್ ತೋರಿಸಿದ್ದಾರೆ. ಜೊತೆಗೆ, ದೆಹಲಿ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆದಾರರು ತಾತ್ಕಾಲಿಕ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲು ಹಣವನ್ನು ತೆಗದುಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಮಾಹಿತಿಗಳ ಪ್ರಕಾರ ಒಟ್ಟು 15 ಲಕ್ಷ ರೂ ನಗದನ್ನು ಶಾಸಕರ ಸಭೆಗೆ ತಂದಿದ್ದರು ಎನ್ನಲಾಗಿದೆ.

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸರ್ಕಾರಿ ಆಸ್ಪತ್ರೆಯಲ್ಲಿ ತಾತ್ಕಾಲಿಕ ಸಿಬ್ಬಂದಿಗಳನ್ನು ನೇಮಕಕ್ಕೆ ಗುತ್ತಿಗೆದಾರರು ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂದು ವಿಧಾನ ಸಭಾ ಸ್ಪೀಕರ್ ರಾಮ್​ನಿವಾಸ್ ಗೋಯಲ್ ಅವರಿಗೆ ಶಾಸಕರು ಮಾಹಿತಿ ನೀಡಿದರು. ಗುತ್ತಿಗೆದಾರರ ಮಾಫಿಯಾದಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಜೀವ ಬೇದರಿಕೆಯಿದೆ, ಜೀವ ಭಯದಿಂದ ಇಂದು ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡುತ್ತಿದ್ದೇನೆ ಎಂದು ಆಪ್ ಶಾಸಕ ಮಹೇಂದ್ರ ಗೋಯಲ್ ಹೇಳಿದ್ದಾರೆ.

ಈ ಕುರಿತು ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ವಿಧಾನಸಭೆ ಸ್ಪೀಕರ್ ರಾಮ್​ನಿವಾಸ್​ ಗೋಯಲ್ ಅವರು ಎಎಪಿ ಶಾಸಕರಿಗೆ ಈ ಅಕ್ರಮದ ಬಗ್ಗೆ ಲಿಖಿತ ದೂರು ಮತ್ತು ಸಂಪೂರ್ಣ ಪ್ರಕರಣದ ಸಾಕ್ಷ್ಯವನ್ನು ನೀಡುವಂತೆ ಕೇಳಿದ್ದಾರೆ. ಈ ಪ್ರಕರಣವನ್ನು ವಿಧಾನಸಭೆಯ ಅರ್ಜಿ ಸಮಿತಿಗೆ ತನಿಖೆಗೆ ಕಳುಹಿಸಲಾಗುವುದು ಎಂದು ಸ್ವೀಕರ್​​ ಭರವಸೆ ನೀಡಿದರು.

ದೆಹಲಿ ವಿಧಾನಸಭೆಯ ಮೂರನೇ ದಿನವಾದ ಬುಧವಾರ, ನಿಯಮ 280ರ ವಿಶೇಷ ಉಲ್ಲೇಖದ ಅಡಿ, ಶಾಸಕರು ವಿವಿಧ ವಿಷಯಗಳ ಬಗ್ಗೆ ಚರ್ಚಿಸುವ ಸಂದರ್ಭದಲ್ಲಿ, ಮಹೇಂದ್ರ ಗೋಯಲ್ ಅವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಗುತ್ತಿಗೆದಾರರು ತಾತ್ಕಾಲಿಕ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಲಂಚ ಪಡೆದುಕೊಳ್ಳುತ್ತಿದ್ದಾರೆ ಎಂದು ವಿಧಾನ ಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದರು.

ಇದನ್ನೂ ಓದಿ: ಡಿಕೆಶಿ ಬಂಧನದ ವೇಳೆ ನಡೆದ ಗಲಾಟೆ, ಮಹದಾಯಿ ಗಲಾಟೆ: ಸರ್ಕಾರದಿಂದ ಕ್ಲೈಮ್ ಕಮಿಷನ್ ನೇಮಕ

ದೆಹಲಿ ಸರ್ಕಾರಿ ಆಸ್ಪತ್ರೆಯಲ್ಲಿ ಕಾಲಕಾಲಕ್ಕೆ, ನೌಕರರನ್ನು ಶುಚಿತ್ವದಿಂದ ಹಿಡಿದು ಶುಶ್ರೂಷೆಯವರೆಗೆ ಗುತ್ತಿಗೆಯ ಆಧಾರದ ಮೇಲೆ ಕೆಲಸಕ್ಕೆ ನೇಮಿಸಿಕೋಳ್ಳುತ್ತದೆ. ಆದರೆ, ಈ ಹಿಂದೆ ಇದ್ದ ಗುತ್ತಿಗೆದಾರ ಸಂಸ್ಥೆ ಲಂಚ ಪಡೆದು ಎಲ್ಲ ಹುದ್ದೆಗಳಿಗೂ ನೌಕರರನ್ನು ನೇಮಿಸಿಕೊಂಡಿದೆ ಎಂದು ಆರೋಪ ಮಾಡಿದರು.

ಈ ಬಗ್ಗೆ ಮಾಹಿತಿ ಪಡೆದ ಶಾಸಕರು ಗುತ್ತಿಗೆದಾರರನ್ನು ಸಂಪರ್ಕಿಸಿದ್ದಾರೆ. ಗುತ್ತಿಗೆದಾರನೂ ಈ ಬಗ್ಗೆ ಎಲ್ಲೂ ವಿಷಯ ಪ್ರಸ್ತಾಪ ಮಾಡಬಾರದು ಎಂದು ಹಣ ಕೊಟ್ಟು ಸುಮ್ಮನಿರಲು ಹೇಳಿದ್ದಾರೆ. ಆದರೆ, ಆಪ್​ ಶಾಸಕ ಲಂಚದ ಹಣವನ್ನು ನೇರವಾಗಿ ತಮ್ಮೊಂದಿಗೆ ವಿಧಾನಸೌಧಕ್ಕೆ ತೆಗೆದುಕೊಂಡು ಬಂದು ಸದನದ ಕಲಾಪದಲ್ಲಿ ವಿಷಯ ಪ್ರಸ್ತಾಪ ಮಾಡಿ ಎಲ್ಲರಿಗೂ ಹಣವನ್ನು ತೋರಿಸಿದ್ದಾರೆ.

ಈ ಬಗ್ಗೆ ದೆಹಲಿ ಪೊಲೀಸರು, ಲೆಫ್ಟಿನೆಂಟ್ ಗವರ್ನರ್ ಅವರಿಗೆ ದೂರು ನೀಡಲಾಗಿದ್ದು, ಆದರೆ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಕುರಿತು ಸಂಪೂರ್ಣ ವಿಷಯವನ್ನು ಲಿಖಿತವಾಗಿ ನೀಡುವಂತೆ ಸ್ಪೀಕರ್ ಆಪ್​ ಶಾಸಕರಿಗೆ ಸೂಚಿಸಿದರು.

ಇದನ್ನೂ ಓದಿ: ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಭರವಸೆ ಕೊಟ್ಟು ಬಂದಿದ್ದೇವೆ: ಬಿಎಸ್ ಯಡಿಯೂರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.