ETV Bharat / bharat

ಚರಂಡಿಗೆ ಹಾರಿ ಗಲೀಜು ಸ್ವಚ್ಛಗೊಳಿಸಿದ ಕೌನ್ಸಿಲರ್​ಗೆ ಹಾಲಿನ ಅಭಿಷೇಕ! - ದೆಹಲಿ ಪುರಸಭೆ ಚುನಾವಣೆ

ದೆಹಲಿಯಲ್ಲಿ ಪುರಸಭೆ ಚುನಾವಣೆ ರಂಗೇರುತ್ತಿದೆ. ಮತದಾರರನ್ನು ತಮ್ಮ ಸೆಳೆಯಲು ಅಭ್ಯರ್ಥಿಗಳು ಕಸರತ್ತು ನಡೆಸುತ್ತಿದ್ದಾರೆ. ಅದರಂತೆ ನಿನ್ನೆ ಎಎಪಿ ಕೌನ್ಸಿಲರ್​ ಮತದಾರರನ್ನು ಸೆಳೆಯಲು ಚರಂಡಿಗೆ ಹಾರಿ ಗಲೀಜು ಸ್ವಚ್ಛಗೊಳಿಸಿದ್ದಾರೆ.

AAP Councilor Jumps Into Drain in Delhi, Drain Cleaned by AAP Councilor in Delhi, Delhi municipal election, New Delhi political news, ನವದೆಹಲಿಯಲ್ಲಿ ಚರಂಡಿಗೆ ಹಾರಿದ ಎಎಪಿ ಕೌನ್ಸಿಲರ್​, ನವದೆಹಲಿಯಲ್ಲಿ ಚರಂಡಿ ಸ್ವಚ್ಛಗೊಳಿಸಿದ ಎಎಪಿ ಕೌನ್ಸಿಲರ್​, ದೆಹಲಿ ಪುರಸಭೆ ಚುನಾವಣೆ, ನವದೆಹಲಿ ರಾಜಕೀಯ ಸುದ್ದಿ,
ಚರಂಡಿಗೆ ಹಾರಿ ಗಲೀಜು ಸ್ಚಚ್ಛಗೊಳಿಸಿದ ಕೌನ್ಸಿಲರ್​ಗೆ ಹಾಲಿನ ಅಭಿಷೇಕ
author img

By

Published : Mar 23, 2022, 10:11 AM IST

ನವದೆಹಲಿ: ನಗರದಲ್ಲಿ ಮುನ್ಸಿಪಲ್ ಚುನಾವಣೆ ರಂಗೇರುತ್ತಿದೆ. ಪುರಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರಿ ಪಡೆದುಕೊಳ್ಳಲು ಪಕ್ಷಗಳ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಅಭ್ಯರ್ಥಿಗಳು ಸಹ ಮತದಾರರ ಮನವೋಲಿಸು ನಾನಾ ಪ್ರಯತ್ನಗಳು ಮಾಡುತ್ತಿದ್ದಾರೆ. ಅದರ ಭಾಗವಾಗಿ ಇಲ್ಲೊಬ್ಬ ಅಭ್ಯರ್ಥಿ ಚರಂಡಿಗೆ ಹಾರಿ, ಚರಂಡಿಗೆ ಸ್ವಚ್ಛಗೊಳಿಸಿರುವ ಘಟನೆ ನಡೆದಿದೆ.

ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಪುರಸಭೆಯಲ್ಲಿ ಜಯ ಸಾಧಿಸಲು ಕಸರತ್ತು ನಡೆಸುತ್ತಿದೆ. ಅದರಂತೆ ಅಭ್ಯರ್ಥಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ. ಪೂರ್ವ ದೆಹಲಿಯ ಎಎಪಿ ಸ್ಥಳೀಯ ನಾಯಕ ಹಸೀಬ್ - ಉಲ್-ಹಸನ್ ಶಾಸ್ತ್ರಿ ಪಾರ್ಕ್‌ನಲ್ಲಿ ತುಂಬಿ ಹರಿಯುವ ಚರಂಡಿಗೆ ಹಾರಿ, ಚರಂಡಿ ಸ್ವಚ್ಛಗೊಳಿಸಿದರು.

ಓದಿ: ಟಿಂಬರ್​ ಡಿಪೋದಲ್ಲಿ ಭಾರಿ ಅಗ್ನಿ ಅವಘಡ.. 11 ಜನರ ಸಜೀವ ದಹನ

ಚರಂಡಿಯಲ್ಲಿ ಕಸ - ಕಡ್ಡಿ, ಪ್ಲ್ಯಾಸ್ಟಿಕ್​ ತೆಗೆದು ಸ್ವಚ್ಛಗೊಳಿಸಿದ ಬಳಿಕ ಎಎಪಿ ಕಾರ್ಯಕರ್ತರು ಹಸನ್​ಗೆ ಹಾಲಿನ ಅಭಿಷೇಕ ನಡೆಸಿ ದೇಹ ಸ್ವಚ್ಛಗೊಳಿಸಿದರು. ಇನ್ನು ‘ನಾಯಕ್’​ ಚಿತ್ರದಲ್ಲಿ ಅನಿಲ್​ ಕಪೂರ್​ಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡುತ್ತಾರೆ. ಎಎಪಿ ನಾಯಕ​ ಹಸನ್​ಗೂ ಹಾಲಿನ ಅಭಿಷೇಕ ನಡೆಸಿದ್ದಾರೆ. ಈ ಎರಡೂ ಜೋಡಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿವೆ.

ಚರಂಡಿಗೆ ಹಾರಿ ಗಲೀಜು ಸ್ಚಚ್ಛಗೊಳಿಸಿದ ಕೌನ್ಸಿಲರ್​ಗೆ ಹಾಲಿನ ಅಭಿಷೇಕ

ಮಾಧ್ಯಮಗಳೊಂದಿಗೆ ಚರಂಡಿ ನೀರಿನಲ್ಲಿ ನಿಂತು ಮಾತನಾಡಿದ ಎಎಪಿ ಕೌನ್ಸಿಲರ್ ಹಸನ್, ಹಲವು ತಿಂಗಳಿನಿಂದ ಚರಂಡಿ ತುಂಬಿ ಹರಿಯುತ್ತಿದೆ. ಅಧಿಕಾರಿಗಳಿಗೆ ಪದೇ ಪದೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಬಿಜೆಪಿ ಕೌನ್ಸಿಲರ್ ಮತ್ತು ಸ್ಥಳೀಯ ಶಾಸಕರು ಸಹ ಕ್ಯಾರೆ ಎನ್ನುತ್ತಿಲ್ಲ. ಆದರಿಂದ ನಾನೇ ಖುದ್ದಾಗಿ ಚರಂಡಿಗಿಳಿದು ಸ್ಚಚ್ಛಗೊಳಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಓದಿ: ಇದೇ 25ಕ್ಕೆ ಬಹು ನಿರೀಕ್ಷಿತ RRR ರಿಲೀಸ್‌; ಥಿಯೇಟರ್‌ ಪರದೆ ಮುಂದೆ ಮುಳ್ಳುತಂತಿ ಬೇಲಿ ಅಳವಡಿಕೆ..!

ಪೂರ್ವ ದೆಹಲಿಯ ಗಾಂಧಿ ನಗರ ವಿಧಾನಸಭೆಯಲ್ಲೂ ಈ ವಿಷಯ ಚರ್ಚೆಯಾಗಿದೆ. ರಾಷ್ಟ್ರ ರಾಜಧಾನಿಯ ಮೂರು ನಾಗರಿಕ ಸಂಸ್ಥೆಗಳನ್ನು ವಿಲೀನಗೊಳಿಸುವ ಕೇಂದ್ರದ ಯೋಜನೆಗೆ ಸಂಬಂಧಿಸಿದಂತೆ ಆಡಳಿತಾರೂಢ ಎಎಪಿ ಮತ್ತು ಬಿಜೆಪಿ ಮಧ್ಯೆ ಕೆಲ ವಾರಗಳಿಂದ ಘರ್ಷಣೆ ನಡೆಯುತ್ತಿವೆ. ಆದ್ರೆ ಕೇಂದ್ರ ಸಚಿವ ಸಂಪುಟದಿಂದ ಈ ಮಸೂದೆ ಜಾರಿಗೆ ಬಂದಿದೆ.

ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ತಿದ್ದುಪಡಿ) ಮಸೂದೆ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್, ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಪೂರ್ವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಅನ್ನು ವಿಲೀನಗೊಳಿಸುತ್ತದೆ. ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗುವ ನಿರೀಕ್ಷೆಯಿದೆ.

ಓದಿ: ಇಂದು ಕೂಡ ಪೆಟ್ರೋಲ್‌, ಡೀಸೆಲ್‌ ಲೀಟರ್‌ಗೆ ತಲಾ 80 ಪೈಸೆ ಏರಿಕೆ; ಬೆಂಗಳೂರಿನಲ್ಲಿ ತೈಲ ಬೆಲೆ ಹೀಗಿದೆ..

ಇದು ನಾಗರಿಕ ಚುನಾವಣೆಯನ್ನು ಹಳಿತಪ್ಪಿಸುವ ಸಾಧ್ಯತೆಯಿದೆ. ಪೌರ ಸಂಸ್ಥೆಗಳ ಚುನಾವಣೆಯನ್ನು ಮುಂದೂಡಬೇಡಿ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಪ್ರಧಾನಿಯವರೇ, ಸರ್ಕಾರಗಳು ಬರುತ್ತವೆ ಮತ್ತು ಹೋಗುತ್ತವೆ. ನೀವು ಇರುವುದಿಲ್ಲ, ನಾನು ಕೂಡ ಇರುವುದಿಲ್ಲ. ಆದರೆ, ದೇಶದ ಸಂಸ್ಥೆಗಳನ್ನು ದುರ್ಬಲಗೊಳಿಸಬೇಡಿ. ಎಂಸಿಡಿ ಚುನಾವಣೆಗಳನ್ನು ಮುಂದೂಡಬೇಡಿ ಎಂದು ಕೇಜ್ರಿವಾಲ್ ಈ ಹಿಂದೆ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.