ಬೆಂಗಳೂರು/ನವದೆಹಲಿ : ವಿದೇಶಕ್ಕೆ ಹೊರಡಲು ತಡೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾದ ಮಾಜಿ ಮುಖ್ಯಸ್ಥ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಆಕಾರ್ ಪಟೇಲ್ ಕೋರ್ಟ್ ಮೆಟ್ಟಿಲೇರಿದ್ದು, ಶುಕ್ರವಾರ ದೆಹಲಿಯ ರೋಸ್ ಅವೆನ್ಯೂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿದ್ದಾರೆ.
ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾ ವಿರುದ್ಧ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ (ಎಫ್ಸಿಆರ್ಎ) ಉಲ್ಲಂಘನೆ ಸಂಬಂಧ ಪ್ರಕರಣ ದಾಖಲಾಗಿದೆ. ಇದರಲ್ಲಿ ಆಕಾರ್ ಪಟೇಲ್ ವಿರುದ್ಧ ಸಹ ಎಫ್ಆರ್ಐ ದಾಖಲಾಗಿದ್ದು, ಈ ಸಂಬಂಧ ಸಿಬಿಐ ಲುಕ್‌ಔಟ್ ನೋಟಿಸ್ ಹೊರಡಿಸಿದೆ. ಹೀಗಾಗಿ, ಬೆಂಗಳೂರಿನಿಂದ ಅಮೆರಿಕಕ್ಕೆ ಹೋಗಬೇಕಾಗಿದ್ದ ಅವರನ್ನು ಬುಧವಾರ ಬೆಂಗಳೂರು ವಿಮಾನ ನಿಲ್ದಾಣದಲ್ಲೇ ತಡೆಯಲಾಗಿತ್ತು.
-
have been stopped at immigration again. cbi has not taken me off their look out circular
— Aakar Patel (@Aakar__Patel) April 7, 2022 " class="align-text-top noRightClick twitterSection" data="
">have been stopped at immigration again. cbi has not taken me off their look out circular
— Aakar Patel (@Aakar__Patel) April 7, 2022have been stopped at immigration again. cbi has not taken me off their look out circular
— Aakar Patel (@Aakar__Patel) April 7, 2022
ಇದರ ವಿರುದ್ಧ ಆಕಾರ್ ಪಟೇಲ್ ದೆಹಲಿಯ ಕೋರ್ಟ್‌ನ ಮೊರೆ ಹೋಗಿದ್ದರು. ಗುರುವಾರ ಅರ್ಜಿ ವಿಚಾರಣೆ ಮಾಡಿದ್ದ ನ್ಯಾಯಾಲಯವು ತಕ್ಷಣವೇ ಲುಕ್‌ಔಟ್ ನೋಟಿಸ್ ಹಿಂಪಡೆಯಬೇಕು. ಅವರಿಗೆ ವಿದೇಶಕ್ಕೆ ಹೋಗಲು ಅವಕಾಶ ನೀಡಬೇಕೆಂದು ಸೂಚಿಸಿತ್ತು. ಅಲ್ಲದೇ, ವಿಮಾನ ನಿಲ್ದಾಣದಲ್ಲಿ ಆಕಾರ್ ಪಟೇಲ್ ಅವರನ್ನು ತಡೆಹಿಡಿದ ಕಾರಣಕ್ಕೆ ಸಿಬಿಐ ಕ್ಷಮೆ ಕೋರಬೇಕೆಂದು ನ್ಯಾಯಾಲಯ ತಾಕೀತು ಮಾಡಿತ್ತು.
ನ್ಯಾಯಾಲಯದ ಆದೇಶದಂತೆ ಗುರುವಾರ ರಾತ್ರಿ ಅವರು ಬೆಂಗಳೂರು ವಿಮಾನ ನಿಲ್ದಾಣದಿಂದ ಅಮೆರಿಕಕ್ಕೆ ಹೋಗಲು ಸಿದ್ಧರಾಗಿದ್ದರು. ಆದರೂ, ಅವರ ಪ್ರಯಾಣಕ್ಕೆ ತಡೆಹಿಡಿಯಲಾಗಿದೆ ಎಂದು ಹೇಳಲಾಗಿದೆ. ಈ ಸಂಬಂಧ ಆಕಾರ್ ಪಟೇಲ್ ಸಿಬಿಐ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದಡಿ ಮತ್ತೆ ಕೋರ್ಟ್ ಮೊರೆ ಹೋಗಿದ್ದಾರೆ.
ಇದನ್ನೂ ಓದಿ: ಹೊಸ ಜೋಡಿಗೆ ಮದುವೆ ಉಡುಗೊರೆಯಾಗಿ ಸಿಕ್ತು ಪೆಟ್ರೋಲ್-ಡೀಸೆಲ್!