ETV Bharat / bharat

ಹಸು, ಮೇಕೆಗಳಿಗೂ ಆಧಾರ್​ ಸಂಖ್ಯೆ ಕಡ್ಡಾಯ.. ಇದರಿಂದ ಏನು ಲಾಭ ಗೊತ್ತಾ? - ಹಸು, ಮೇಕೆಗಳಿಗೆ ಆಧಾರ್ ಸಂಖ್ಯೆ

ಪಶ್ಚಿಮಬಂಗಾಳದ ಮಾಲ್ಡಾದಲ್ಲಿ ರಾಸುಗಳಿಗೂ ಆಧಾರ್​ ಸಂಖ್ಯೆಯನ್ನು ಕಡ್ಡಾಯ ಮಾಡಲಾಗಿದೆ. ಇದರಿಂದ ಅಲ್ಲಿನ ಜಾನುವಾರು ಮತ್ತು ಅವುಗಳ ಮಾಲೀಕರನ್ನು ಸುಲಭವಾಗಿ ಪತ್ತೆ ಮಾಡಲು ಸಹಾಯವಾಗಿದೆ.

aadhaar
ಹಸುವಿನ ಕಿವಿಗೆ ಆಧಾರ್​ ಸಂಖ್ಯೆ ಇರುವ ಟ್ಯಾಗ್​
author img

By

Published : Apr 25, 2022, 8:27 PM IST

Updated : Apr 25, 2022, 9:12 PM IST

ಮಾಲ್ಡಾ(ಪಶ್ಚಿಮಬಂಗಾಳ): ಯಾವುದೇ ಕೆಲಸಕ್ಕೂ ಈಗ ಆಧಾರ್​ ಕಡ್ಡಾಯವಾಗಿದೆ. ವಿಶಿಷ್ಟ ಗುರುತಿನ 12 ಅಂಕಿಯ ಆಧಾರ್ ಎಷ್ಟು ಮಹತ್ವದ್ದು ಎಂಬುದು ತಿಳಿದಿದೆ. ಈ ವಿಶಿಷ್ಟ ಗುರುತಿನ ಸಂಖ್ಯೆ ಮನುಷ್ಯರಿಗೆ ಮಾತ್ರವಲ್ಲದೇ ಜಾನುವಾರುಗಳಿಗೂ ಬಂದರೆ ಹೇಗಿರುತ್ತದೆ. ಹೌದು, ಕೇಂದ್ರ ಸರ್ಕಾರ ಇದೀಗ ಹಸುಗಳು ಮತ್ತು ಮೇಕೆಗಳಿಗೆ ಇದನ್ನು ಪರಿಚಯಿಸುವ ಪ್ರಕ್ರಿಯೆ ಪ್ರಾರಂಭಿಸಿದೆ. ಇದನ್ನು ಪ್ರಾಣಿಗಳ ಆಧಾರ್ ಕಾರ್ಡ್ ಎಂದು ಕರೆಯಲಾಗಿದ್ದು, ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಮೊದಲ ಬಾರಿಗೆ ಜಾರಿ ಮಾಡಲಾಗಿದೆ.

ಹಸು, ಮೇಕೆಗಳಿಗೂ ಆಧಾರ್​ ಸಂಖ್ಯೆ ಕಡ್ಡಾಯ

ಜಾನುವಾರುಗಳಿಗೆ ಆಧಾರ್​ ಕಾರ್ಡ್​ ನೀಡದೇ ಆ ಸಂಖ್ಯೆಯನ್ನು ಅವುಗಳ ಕಿವಿಗಳಿಗೆ ಟ್ಯಾಗ್​ ರೀತಿ ಜೋಡಿಸಲಾಗುತ್ತದೆ. ಇದರಿಂದ ಹಸುಗಳು ಅಥವಾ ಮೇಕೆಗಳನ್ನು ಟ್ರ್ಯಾಕ್ ಮಾಡಲು ನೆರವಾಗಲಿದೆ. ಮೇಲಾಗಿ ದನದ ಕಳ್ಳಸಾಗಾಣಿಕೆ ಹತ್ತಿಕ್ಕಲು ಹೆಚ್ಚಿನ ನೆರವು ನೀಡುತ್ತದೆ ಎಂಬುದು ಇದರ ಹಿಂದಿನ ಉದ್ದೇಶವಾಗಿದೆ.

ಮಾಲೀಕರ ಪತ್ತೆ ಸುಲಭ: ಹಸು, ಮೇಕೆಗಳ ಕಿವಿಗಳಿಗೆ ಟ್ಯಾಗ್​ ಹಾಕುವುದರಿಂದ ಈ ಜಾನುವಾರು ಯಾರಿಗೆ ಸಂಬಂಧಿಸಿದ್ದು, ಇದರ ಮಾಲೀಕರು ಯಾರು ಎಂಬದನ್ನು ಸುಲಭವಾಗಿ ಪತ್ತೆ ಮಾಡಬಹುದು. ಜಾನುವಾರುಗಳ ಮಾಲೀಕರ ಬಗ್ಗೆಯೂ ಮಾಹಿತಿ ತಿಳಿಯಲಿದೆ. 4 ವರ್ಷಗಳಿಂದ ಹಸುಗಳು ಮತ್ತು ಮೇಕೆಗಳ ವಿವರಗಳು ಸರ್ಕಾರಿ ಪೋರ್ಟಲ್‌ನಲ್ಲಿ ದಾಖಲಿಸಲಾಗಿದೆ ಎಂದು ಜಿಲ್ಲಾ ಪಶು ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉತ್ಪಲ್​ಕುಮಾರ ಕರ್ಮಾಕರ್ ತಿಳಿಸಿದ್ದಾರೆ.

ಹಸುವಿನ ಕಿವಿಗೆ ಆಧಾರ್​ ಸಂಖ್ಯೆ ಇರುವ ಟ್ಯಾಗ್​
ಹಸುವಿನ ಕಿವಿಗೆ ಆಧಾರ್​ ಸಂಖ್ಯೆ ಇರುವ ಟ್ಯಾಗ್​

ಇದಲ್ಲದೇ, ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯಲು ಹಸು ಮತ್ತು ಮೇಕೆಗಳ ಗುರುತಿನ ಚೀಟಿ ಕಡ್ಡಾಯಗೊಳಿಸಲಾಗಿದೆ. ಕಳೆದ ತಿಂಗಳು ಜಾನುವಾರುಗಳಿಗೆ ಲಸಿಕೆ ಹಾಕಲಾಗಿತ್ತು. ನಾಲ್ಕರಿಂದ ಎಂಟು ತಿಂಗಳ ವಯಸ್ಸಿನ 37 ಸಾವಿರ ಕರುಗಳಿಗೆ ಉಚಿತವಾಗಿ ಲಸಿಕೆ ನೀಡಲಾಯಿತು.

ಸೆಪ್ಟೆಂಬರ್‌ನಿಂದ 70 ಸಾವಿರಕ್ಕೂ ಹೆಚ್ಚು ರಾಸುಗಳಿಗೆ ಲಸಿಕೆ ಹಾಕಲಾಗಿದೆ. ಪ್ರತಿ ಕರುವಿನ ಕಿವಿಗೆ ಆಧಾರ್ ಟ್ಯಾಗ್‌ಗಳನ್ನು ಜೋಡಿಸಲಾಗಿದೆ. ಒಂದೂವರೆ ಲಕ್ಷ ಹಸುಗಳಿಗೆ ಟ್ಯಾಗ್ ಹಾಕಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಈ ಕ್ರಮವನ್ನು ರಾಸುಗಳ ಮಾಲೀಕರು ಕೂಡ ಸ್ವಾಗತಿಸಿದ್ದಾರೆ. ಹಸುಗಳ ಕಿವಿಗೆ ಟ್ಯಾಗ್ ಹಾಕುವುದರಿಂದ ಅವುಗಳು ಕಾಣೆಯಾದಲ್ಲಿ ಅಥವಾ ಬಾಂಗ್ಲಾದೇಶದ ಗಡಿ ದಾಟಿದಾಗ ಹಿಂತಿರುಗಿ ಪಡೆಯಲು ಸಹಾಯವಾಗಿದೆ. ಔಷಧಿಗಳನ್ನು ಉಚಿತವಾಗಿ ಪಡೆಯಬಹುದು ಎಂದು ಮಾಲೀಕರು ತಿಳಿಸಿದ್ದಾರೆ.

ಓದಿ: ವಿಚಾರಣೆ ನೆಪದಲ್ಲಿ ಠಾಣೆಗೆ ಕರೆದು ದೌರ್ಜನ್ಯ: ಬಜ್ಪೆ ಠಾಣಾಧಿಕಾರಿ ಸಹಿತ ಮೂವರು ಸಿಬ್ಬಂದಿ ಅಮಾನತು

Last Updated : Apr 25, 2022, 9:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.