ETV Bharat / bharat

ಮದ್ಯದ ಮತ್ತಲ್ಲಿ ಪೊಲೀಸ್‌ ಕೊರಳಪಟ್ಟಿ ಹಿಡಿದು ಯುವತಿಯ ರಂಪಾಟ: ವಿಡಿಯೋ - ಕುಡಿದ ಮತ್ತಿನಲ್ಲಿ ಪೊಲೀಸರೊಂದಿಗೆ ಗಲಾಟೆ

ಕಂಠಪೂರ್ತಿ ಕುಡಿದ ಮತ್ತಿನಲ್ಲಿ ಮಹಿಳೆಯೋರ್ವಳು ನಡುರಸ್ತೆಯಲ್ಲೇ ಪೊಲೀಸ್ ಸಿಬ್ಬಂದಿ ಜೊತೆ ರಂಪಾಟ ನಡೆಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ವಿಡಿಯೋ ವೈರಲ್​ ಆಗಿದೆ.

Drunken Girl Arguing Police
Drunken Girl Arguing Police
author img

By

Published : Mar 25, 2022, 3:40 PM IST

ಮುಂಬೈ(ಮಹಾರಾಷ್ಟ್ರ): ಮದ್ಯಪಾನ ಮಾಡಿರುವ ಮಹಿಳೆಯೋರ್ವಳು ನಡುರಸ್ತೆಯಲ್ಲಿ ಪೊಲೀಸ್ ಅಧಿಕಾರಿ ಜೊತೆ ವಾಗ್ವಾದ ನಡೆಸಿದ್ದಾಳೆ. ಇದರ ಜೊತೆಗೆ ಅವರ ಕೊರಳಪಟ್ಟಿ ಹಿಡಿದು ಧಮ್ಕಿ ಹಾಕಿದ್ದಾಳೆ. ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ವೈರಲ್​​ ಆಗಿದೆ.

ಈ ಘಟನೆ ಯಾವಾಗ ಮತ್ತು ನಿಖರವಾಗಿ ಮುಂಬೈನ ಯಾವ ಪ್ರದೇಶದಲ್ಲಿ ನಡೆದಿದೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಕುಡಿದ ಗುಂಗಿನಲ್ಲಿ ಮೂವರು ಯುವತಿಯರು ರಸ್ತೆಯಲ್ಲೇ ಗಲಾಟೆ ಮಾಡಿದ್ದು, ಕಾರು ಚಾಲಕನನ್ನು ಹೊರಗೆಳೆದು, ಕಾರನ್ನು ತಮ್ಮ ವಶಕ್ಕೆ ಪಡೆದುಕೊಂಡು, ಧ್ವಂಸ ಮಾಡಲು ಯತ್ನಿಸಿದ್ದಾರೆ. ಈ ವಿಚಾರ ತಿಳಿದು ಘಟನಾ ಸ್ಥಳಕ್ಕೆ ಪೊಲೀಸ್​​ ಅಧಿಕಾರಿ ಬರುತ್ತಿದ್ದಂತೆ ಅವರ ಕೊರಳಪಟ್ಟಿ ಹಿಡಿದ ಯುವತಿಯೊಬ್ಬಳು ಆವಾಜ್​ ಹಾಕಿದ್ದಾಳೆ. ಇಷ್ಟೇ ಅಲ್ಲ, ಅವರ ಬಳಿಯಿದ್ದ ಪಿಸ್ತೂಲ್ ಕಿತ್ತುಕೊಂಡು ಅನುಚಿತವಾಗಿ ವರ್ತಿಸಿದ್ದಾಳೆ.

ಇದನ್ನೂ ಓದಿ: ಈ ಬಾಬಾನಿಗೆ ಮದ್ಯವೇ ನೈವೇದ್ಯ : ಭಕ್ತರಿಗೆ ಅದುವೇ ತೀರ್ಥ!

ಈ ಘಟನೆಯನ್ನು ಕಾರು ಚಾಲಕ ತನ್ನ ಮೊಬೈಲ್‌ ಕ್ಯಾಮರಾ ಮೂಲಕ ಸೆರೆ ಹಿಡಿದಿದ್ದಾನೆ. ಕಳೆದ ಕೆಲ ದಿನಗಳ ಹಿಂದೆ ಮುಂಬೈನಲ್ಲಿ ಇಂಥದ್ದೇ ಘಟನೆ ನಡೆದಿತ್ತು. ಇದರ ಬೆನ್ನಲ್ಲೇ ಇದೀಗ ಮದ್ಯದ ಮತ್ತಲ್ಲಿ ಮತ್ತೊಂದು ಘಟನೆ ನಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.