ETV Bharat / bharat

ಲಿಯೋ "ನಾ ರೆಡಿ" ಸಾಂಗ್​ ವಿವಾದ : ನಟ ವಿಜಯ್​ ಬಂಧಿಸುವಂತೆ DGPಗೆ ದೂರು ನೀಡಿದ ಮಹಿಳಾ ನಾಯಕಿ - ಲೋಕೇಶ್ ಕನಕರಾಜ್ ನಿರ್ದೇಶನ

ಲಿಯೋ ಚಿತ್ರ ಹಾಡಿನಲ್ಲಿ ಧೂಮಪಾನ ಉತ್ತೇಜಿಸಲಾಗುತ್ತಿದೆ ಎಂದು ಆರೋಪಿಸಿ ಪೀಪಲ್ಸ್ ಪೊಲಿಟಿಕಲ್ ಪಾರ್ಟಿಯ ನಾಯಕಿ ರಾಜೇಶ್ವರಿ ಪ್ರಿಯಾ , ನಟ ವಿಜಯ್​ ವಿರುದ್ಧ ದೂರು ದಾಖಲಿಸಿದ್ದು, ಬಂಧಿಸುವಂತೆ ಒತ್ತಾಯಿಸಿದ್ದಾರೆ.

a-women-political-leader-rajeshwari-complains-to-chennai-dgp-office-to-arrest-actor-vijay-for-naa-ready-song
ಲಿಯೋ "ನಾ ರೆಡಿ" ಸಾಂಗ್​ ವಿವಾದ : ನಟ ವಿಜಯ್​ ಬಂಧನಕ್ಕೆ ಮಹಿಳಾ ನಾಯಕಿ ಒತ್ತಾಯ
author img

By

Published : Jul 6, 2023, 11:00 PM IST

ಚೆನ್ನೈ(ತಮಿಳುನಾಡು) : ಕಾಲಿವುಡ್​ ಸ್ಟಾರ್​ ದಳಪತಿ ವಿಜಯ್​ ನಟನೆಯ ಬಹುನಿರೀಕ್ಷಿತ ಲಿಯೋ ಸಿನೆಮಾದ ಹಾಡು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಈ ಸಿನೆಮಾ ಹಾಡಿನಲ್ಲಿ ಕಂಡು ಬಂದಿರುವ ದೃಶ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಪೀಪಲ್ಸ್ ಪೊಲಿಟಿಕಲ್ ಪಾರ್ಟಿಯ ನಾಯಕಿ ರಾಜೇಶ್ವರಿ ಪ್ರಿಯಾ, ಈ ಸಂಬಂಧ ತಮಿಳುನಾಡು ಡಿಜಿಪಿಗೆ ದೂರು ನೀಡಿದ್ದು, ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಲೋಕೇಶ್ ಕನಕರಾಜ್ ನಿರ್ದೇಶನದ 'ಲಿಯೋ' ಸಿನಿಮಾದಲ್ಲಿ ನಟ ವಿಜಯ್ ನಟಿಸುತ್ತಿದ್ದಾರೆ. ಇತ್ತೀಚೆಗೆ ಲಿಯೋ ಚಿತ್ರದ 'ನಾ ರೆಡಿ ' ಹಾಡು ಬಿಡುಗಡೆಗೊಂಡಿತ್ತು. ಈ ಹಾಡಿನಲ್ಲಿ ನಟ ವಿಜಯ್ ಧೂಮಪಾನ ಮಾಡುವ ದೃಶ್ಯಗಳಿದ್ದು ಸಾಕಷ್ಟು ವಿವಾದ ಸೃಷ್ಟಿಸಿತ್ತು. ಈ ಹಾಡಿನಲ್ಲಿ ನಟ ವಿಜಯ್ ನಟನೆ ದೃಶ್ಯಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ರಾಜೇಶ್ವರಿ ಪ್ರಿಯಾ, ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ವೊಂದನ್ನು ಹಾಕಿದ್ದರು. ಈ ಸಂಬಂಧ ಅವರಿಗೆ ಬೆದರಿಕೆ ಹಾಕಲಾಗಿದೆ ಎಂದು ರಾಜೇಶ್ವರಿ ಆರೋಪಿಸಿದ್ದಾರೆ. ಈ ಸಂಬಂಧ ಅವರು ಚೆನ್ನೈ ಡಿಜಿಪಿ ಕಚೇರಿಗೆ ಆಗಮಿಸಿ ದೂರು ದಾಖಲಿಸಿದ್ದಾರೆ. ಅಷ್ಟೇ ಅಲ್ಲದೇ, ಪ್ರಕರಣದಕ್ಕೆ ಸಂಬಂಧಿಸಿದಂತೆ ನಟನನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಾಜೇಶ್ವರಿ ಪ್ರಿಯಾ, ನಟ ವಿಜಯ್​ ಅವರ ಲಿಯೋ ಸಿನೆಮಾದ ಹಾಡಿನಲ್ಲಿ ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಟ್ಯಾಗ್​ ಹಾಕಿಲ್ಲ. ಈ ಸಂಬಂಧ ನಾವು ಹಾಡನ್ನು ಖಂಡಿಸುತ್ತೇವೆ. ಇದು ಯುವಕರನ್ನು ದಾರಿ ತಪ್ಪಿಸುವಂತಿದೆ ಎಂದು ಹೇಳಿದ್ದಾರೆ.

ಈ ನಡುವೆ ನಟ ವಿಜಯ್ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ ಅಶ್ಲೀಲವಾಗಿ ಮಾತನಾಡುತ್ತಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದ ಮೂಲಕ ಬೆದರಿಕೆ ಹಾಕುತ್ತಿದ್ದಾರೆ ಎಂದು ರಾಜೇಶ್ವರಿ ಆರೋಪಿಸಿದರು. ಅದರಲ್ಲೂ ನಾನು ಸಾಮಾಜಿಕ ಜಾಲತಾಣದಲ್ಲಿ ನಟ ವಿಜಯ್ ಅವರ ಐಡಿಯನ್ನು ಟ್ಯಾಗ್ ಮಾಡಿದ ನಂತರ ಹೆಚ್ಚಿನ ಬೆದರಿಕೆಗಳು ಬರುತ್ತಿದೆ. ನಟ ವಿಜಯ್ ಅವರ ಪ್ರಚೋದನೆಯಿಂದ ಅವರ ಅಭಿಮಾನಿಗಳು ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ಇದೇ ವೇಳೆ ದೂರಿದರು. ಈ ರೀತಿ ಪ್ರಚೋದನೆ ನೀಡಿರುವ ನಟ ವಿಜಯ್ ಅವರನ್ನು ಪೊಲೀಸರು ಶೀಘ್ರದಲ್ಲೇ ಬಂಧಿಸಬೇಕು ಎಂದು ರಾಜೇಶ್ವರಿ ಒತ್ತಾಯಿಸಿದರು.

ನಟ ವಿಜಯ್ ಅವರನ್ನೇ ಗುರಿಯಾಗಿಸಿಕೊಂಡು ಯಾಕೆ ದೂರು ಸಲ್ಲಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಈ ಹಿಂದೆ ರಜನಿಕಾಂತ್ ವಿರುದ್ಧವೂ ದೂರು ದಾಖಲಿಸಿದ್ದೆ. ನಟ ವಿಜಯ್ ಅವರು ಸಾಕಷ್ಟು ಯುವ ಅಭಿಮಾನಿಗಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯು ಶೇ. 53% ಜನರು ನಟರಿಂದ ಪ್ರೇರಣೆ ಪಡೆದು ಧೂಮಪಾನ ಮಾಡುತ್ತಾರೆ ಎಂದು ತಿಳಿಸಿದೆ ಎಂದು ತಾವು ನೀಡಿರುವ ದೂರನ್ನು ಸಮರ್ಥಿಸಿಕೊಂಡರು.

ಇದನ್ನೂ ಓದಿ : ನಟ ದಳಪತಿ ವಿಜಯ್ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು.. ಕಾರಣ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.