ETV Bharat / bharat

ಒಂದಲ್ಲ, ಎರಡಲ್ಲ, ಮಹಿಳೆಗೆ ಒಂದೇ ದಿನ ಮೂರು ಸಲ ಕೋವಿಡ್​ ವ್ಯಾಕ್ಸಿನ್!

author img

By

Published : Jun 28, 2021, 10:52 PM IST

ವೈದ್ಯರು ಹಾಗೂ ನರ್ಸ್​ಗಳ ನಿರ್ಲಕ್ಷ್ಯದಿಂದಾಗಿ ಮಹಿಳೆಯೊಬ್ಬರಿಗೆ ಒಂದೇ ದಿನ ಮೂರು ಸಲ ವ್ಯಾಕ್ಸಿನ್​ ನೀಡಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಆದರೆ ವೈದ್ಯಕೀಯ ಅಧಿಕಾರಿ ಈ ಮಾಹಿತಿ ತಳ್ಳಿಹಾಕಿದ್ದಾರೆ.

woman was vaccinated three times
woman was vaccinated three times

ಥಾಣೆ(ಮಹಾರಾಷ್ಟ್ರ): ಮುನ್ಸಿಪಾಲ್​ ಕಾರ್ಪೋರೇಷನ್​ ವಿರುದ್ಧ ಇದೀಗ ಮತ್ತೊಮ್ಮೆ ಆಕ್ರೋಶ ವ್ಯಕ್ತವಾಗಿದ್ದು, ಓರ್ವ ಮಹಿಳೆಗೆ ಒಂದೇ ದಿನ ಮೂರು ಸಲ ವ್ಯಾಕ್ಸಿನ್​ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಥಾಣೆ ಮಹಾನಗರ ಪಾಲಿಕೆಯ ಆನಂದನಗರ ವ್ಯಾಕ್ಸಿನೇಷನ್ ಕೇಂದ್ರದಲ್ಲಿ ಜೂನ್​ 25ರಂದು ಈ ಘಟನೆ ನಡೆದಿದೆ. ಇದೇ ಮೊದಲ ಬಾರಿಗೆ ಇಂತಹದೊಂದು ಘಟನೆ ನಡೆದಿದೆ ಎನ್ನಲಾಗಿದೆ. ತೆರಿಗೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ವೈಭವ್​ ಸಾಲ್ವೆ ಅವರ ಪತ್ನಿಗೆ ಜೂನ್​ 25ರಂದು ಮೊದಲ ಕೋವಿಡ್​ ವ್ಯಾಕ್ಸಿನ್​ ನೀಡಲಾಗಿದೆ. ಇದರ ಬೆನ್ನಲ್ಲೇ ಅದೇ ದಿನ ಲಸಿಕೆಯ ಎರಡನೇ ಹಾಗೂ ಮತ್ತೊಂದು ಡೋಸ್​ ನೀಡಲಾಗಿದೆ.

ಇದರ ಬಗ್ಗೆ ವೈದ್ಯರಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಮಹಿಳೆ ಮೇಲೆ ಕೆಲ ಗಂಟೆಗಳ ಕಾಲ ನಿಗಾ ಇಟ್ಟಿದ್ದಾರೆ. ಜತೆಗೆ ವಿಷಯ ಮೆರೆಮಾಚಲು ಮಹಿಳೆಯ ಗಂಡನ ಮೇಲೆ ಒತ್ತಡ ಹೇರಿದ್ದು, ಹೊರಗಡೆ ಮಾಹಿತಿ ಹಂಚಿಕೊಳ್ಳದಂತೆ ತಿಳಿಸಿದ್ದಾರೆ.

ಇದನ್ನೂ ಓದಿರಿ: ಸಂಬಂಧದಲ್ಲಿ ಚಿಕ್ಕಮ್ಮ: ಆದ್ರೂ ಪ್ರೀತಿಸಿ ಮದುವೆಯಾದ ಯುವಕ!

ಕೆಲಸ ಕಳೆದುಕೊಳ್ಳುವ ಭೀತಿಯಿಂದ ವಿಷಯ ಮುಚ್ಚಿಟ್ಟಿದ್ದಾರೆ. ಆದರೆ, ಸ್ಥಳೀಯ ಬಿಜೆಪಿ ಕಾರ್ಪೋರೇಟರ್​ಗೆ ಮಾಹಿತಿ ಗೊತ್ತಾಗಿದೆ. ಇದೀಗ ಇದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪುರಸಭೆ ಆಯುಕ್ತರು ತಿಳಿಸಿದ್ದಾರೆ. ಇದರ ಬಗ್ಗೆ ವೈದ್ಯಕೀಯ ಅಧಿಕಾರಿಗೆ ಕೇಳಿದಾಗ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.