ETV Bharat / bharat

ಮನೆಗೆಲಸದ ನೆಪದಲ್ಲಿ ವೇಶ್ಯಾವಾಟಿಕೆಗೆ ಒತ್ತಾಯ, 3 ಲಕ್ಷಕ್ಕೆ ಮಹಿಳೆಯ ಮಾರಾಟ ಆರೋಪ: ದೂರು ದಾಖಲು

author img

By

Published : Feb 25, 2023, 2:47 PM IST

ಮನೆಗೆಲಸದ ನೆಪದಲ್ಲಿ ಮಹಿಳೆಗೆ ವೇಶ್ಯಾವಾಟಿಕೆಗೆ ಒತ್ತಾಯ- ಮೂರು ಲಕ್ಷಕ್ಕೆ ಮಾರಾಟ ಆರೋಪ - ಕಾಶಿಮೀರಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ

prostitution
ವೇಶ್ಯಾವಾಟಿಕೆ

ಮುಂಬೈ: ಒಮನ್‌ನಲ್ಲಿ 43 ವರ್ಷದ ಮಹಿಳೆಯನ್ನು ಮನೆಗೆಲಸದ ನೆಪದಲ್ಲಿ ವೇಶ್ಯಾವಾಟಿಕೆಗೆ ಒತ್ತಾಯಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಕಾಶಿಮೀರಾ ಪೊಲೀಸರು ಪ್ರಕರಣದ ಆರೋಪಿಗಳಾದ ಏಜೆಂಟ್​ರ್​ ಅಶ್ರಫ್ ಮತ್ತು ನಮಿತಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಭಾರತೀಯ ದಂಡ ಸಂಹಿತೆಯ ವಿವಿಧ ಕಾಯ್ದೆಗಳಡಿ ಕೇಸ್​ ದಾಖಲು.. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420, 370 ಮತ್ತು 34 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಅಶ್ರಫ್ ಮತ್ತು ನಮಿತಾಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಜೂನ್ 8, 2022 ಮತ್ತು ಆಗಸ್ಟ್ 2, 2022ರ ನಡುವೆ ಸಂತ್ರಸ್ತೆಗೆ ವಂಚಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ನೊಂದ ಮಹಿಳೆ ಫೆಬ್ರವರಿ 21 ರಂದು ಬಗ್ಗೆ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಸೊಸೆ, ಮಗ, ತಂದೆಯಿಂದ ನಡೀತಿತ್ತು ಹೈಟೆಕ್​ ವೇಶ್ಯಾವಾಟಿಕೆ.. ದಂಧೆಗೆ ಬರುತ್ತಿದ್ದರು ಮಹಾರಾಷ್ಟ್ರ ಕಾಲ್​ ಗರ್ಲ್ಸ್​

ಒಮನ್​ ಗೆ ಮಾರಾಟ ಮಾಡುವ ಮೂಲಕ ಮಾನವ ಕಳ್ಳಸಾಗಣೆ.. ದೂರು ನೀಡಿರುವ 43 ವರ್ಷದ ಮಹಿಳೆಯು ಜೂನಿಯರ್ ಆರ್ಟಿಸ್ಟ್ ಸಪ್ಲೈಯರ್ ಆಗಿದ್ದು, ಬ್ಯೂಟಿ ಪಾರ್ಲರ್ ಕೂಡ ನಡೆಸುತ್ತಿದ್ದಾರೆ. ಈಕೆ ಜೂನ್ 2022 ರಲ್ಲಿ ಮುಂಬೈನ ನೆರೂಲ್‌ನಲ್ಲಿ ವಾಸವಿದ್ದ ಅಶ್ರಫ್ ಎಂಬಾತನನ್ನು ಭೇಟಿಯಾದರು. ಬಳಿಕ ಆತ ಒಮನ್‌ನಲ್ಲಿ ಮನೆಗೆಲಸದ ಉದ್ಯೋಗ ಕೊಡಿಸುವ ನೆಪದಲ್ಲಿ ವೇಶ್ಯಾವಾಟಿಕೆಗೆ ಒತ್ತಾಯಿಸಿದ್ದಾನೆ. ನಂತರ 3 ಲಕ್ಷ ರೂ. ಗೆ ಒಮನ್‌ಗೆ ಮಾರಾಟ ಮಾಡುವ ಮೂಲಕ ಏಜೆಂಟ್ ಅಶ್ರಫ್ ಮತ್ತು ನಮಿತಾ ಕಳ್ಳಸಾಗಣೆ ಮಾಡಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ವೇಶ್ಯಾವಾಟಿಕೆ ದಂಧೆ: ಠಾಣೆ ಎದುರೇ ಬೆಂಕಿ ಹಂಚಿಕೊಳ್ಳುವ ಬೆದರಿಕೆಯೊಡ್ಡಿದ ತೃತೀಯ ಲಿಂಗಿಗಳು

ಪ್ರಕರಣದ ತನಿಖೆ ಚುರುಕುಗೊಳಿಸಿದ ಪೊಲೀಸರು.. ಆರೋಪಿಗಳಾದ ಅಶ್ರಫ್ ಮತ್ತು ನಮಿತಾ ಅವರು ಮುಂಬೈನ ನೆರೂಲ್‌ನಲ್ಲಿರುವ ಸೆಕ್ಟರ್ 6 ರಲ್ಲಿ ಕಚೇರಿಯನ್ನು ಸ್ಥಾಪಿಸಿದ್ದಾರೆ. ಸಂತ್ರಸ್ತೆಯು ಆರೋಪಿಗಳಿಬ್ಬರ ಮೊಬೈಲ್ ನಂಬರ್ ಕೊಟ್ಟಿದ್ದು, ಕಾಶಿ ಮೀರಾ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಿರುವ ಪೊಲೀಸರು, ಹೀಗೆ ವೇಶ್ಯಾವಾಟಿಕೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಅಶ್ರಫ್ ಮತ್ತು ನಮಿತಾ ವಿರುದ್ಧ ಬೇರೆ ಯಾವುದಾದರೂ ಕೇಸ್​ ದಾಖಲಾಗಿವೆಯೇ? ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಆರೋಪಿಗಳ ಕೇಸ್​ ಹಿಸ್ಟರಿ ಮತ್ತು ಮಹಿಳೆ ನೀಡಿರುವ ದೂರು ಕುರಿತು ಪೊಲೀಸರ ತನಿಖೆ.. ಇದಕ್ಕೂ ಮೊದಲು ಇಬ್ಬರೂ ಆರೋಪಿಗಳು ಉದ್ಯೋಗ ಕೊಡಿಸುವುದಾಗಿ ಎಷ್ಟು ಮಹಿಳೆಯರಿಗೆ ಆಮಿಷವೊಡ್ಡಿ ಇದೇ ರೀತಿ ವಂಚಿಸಿದ್ದಾರೆ? ಎಂಬ ಕುರಿತು ತನಿಖೆ ನಡೆಯುತ್ತಿದೆ. ಅಲ್ಲದೇ, ಸಂತ್ರಸ್ತೆ ಪೊಲೀಸರಿಗೆ ಏಕೆ ತಡವಾಗಿ ದೂರು ನೀಡಿದ್ದಾರೆ? ಎಂಬುದರ ಬಗ್ಗೆ ಸಹ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಮುಂಬೈ ರೆಡ್​ ಲೈಟ್​ ಏರಿಯಾದಂತೆ ಬೆಂಗಳೂರಿನ ಲಾಡ್ಜ್​ನಲ್ಲಿ ಸಿಕ್ರೆಟ್ ವೇಶ್ಯಾವಾಟಿಕೆ.. ಸಿಕ್ಕಿಬಿದ್ದ ಚಾಲಾಕಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.