ETV Bharat / bharat

ಬ್ಲೇಡ್​​ನಿಂದ ಗಂಡನ ಕತ್ತು ಸೀಳಿದ ಪತ್ನಿ.. 'ಪುಷ್ಪ' ಚಿತ್ರದ ಸೀನ್​ನಂತೆ ನಡೀತು ಕೃತ್ಯ! - ಬ್ಲೇಡ್​​ನಿಂದ ಗಂಡನ ಕತ್ತು ಸೀಳಿದ ಪತ್ನಿ

ಕಳೆದ ತಿಂಗಳ ಹಿಂದೆ ರಾಜು ಜೊತೆ ಮದುವೆ ಮಾಡಿಕೊಂಡಿದ್ದ ಅರ್ಚನಾ ಇದೀಗ ಆತನ ಕತ್ತು ಸೀಳಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಬ್ಲೇಡ್​​ನಿಂದ ಗಂಡನ ಕತ್ತು ಸೀಳಿದ ಪತ್ನಿ.. 'ಪುಷ್ಪ' ಚಿತ್ರದ ಸೀನ್​ನಂತೆ ನಡೀತು ಕೃತ್ಯ!

author img

By

Published : Apr 25, 2022, 6:49 PM IST

Updated : Apr 26, 2022, 1:22 PM IST

ಹನಮಕೊಂಡ(ತೆಲಂಗಾಣ): ನಟ ಅಲ್ಲು ಅರ್ಜುನ್​ ನಟನೆಯ ಪ್ಯಾನ್ ಇಂಡಿಯಾ ಚಿತ್ರ ಪುಷ್ಪದಲ್ಲಿನ ದೃಶ್ಯವೊಂದು ತೆಲಂಗಾಣದಲ್ಲಿ ಪುನರಾವರ್ತನೆಗೊಂಡಿದ್ದು, ಸಿನಿಮಾದಲ್ಲಿ ನಟನೆ ಮಾಡಿದ್ದ ದಾಕ್ಷಾಯಣಿ ಬ್ಲೇಡ್​ನಿಂದ ತನ್ನ ಗಂಡನ ಕತ್ತು ಸೀಳಿರುವ ರೀತಿಯಲ್ಲೇ ಇದೀಗ ಮಹಿಳೆಯೊಬ್ಬರು ಬ್ಲೇಡ್​​ನಿಂದ ಕಟ್ಟಿಕೊಂಡ ಗಂಡನ ಮೇಲೆ ದಾಳಿ ನಡೆಸಿದ್ದಾಳೆ.

ಹನುಮಕೊಂಡ ಜಿಲ್ಲೆಯ ದಾಮೆರ ಮಂಡಲದ ಪಸರಗೊಂಡ ಎಂಬಲ್ಲಿ ಈ ಘಟನೆ ನಡೆದಿದೆ. ರಾಜು ಮತ್ತು ಅರ್ಚನಾ ಕಳೆದ ತಿಂಗಳ ಹಿಂದೆ ಮದುವೆ ಮಾಡಿಕೊಂಡಿದ್ದರು. ಇದರ ಸಂಬಂಧ ಚೆನ್ನಾಗಿತ್ತು. ಆದರೆ, ಭಾನುವಾರ ರಾತ್ರಿ ಅರ್ಚನಾ ದಿಢೀರ್ ಆಗಿ ಹುಚ್ಚಿಯಂತೆ ವರ್ತಿಸಿ, ಗಂಡನ ಕತ್ತು ಸೀಳಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ರಾಜುನನ್ನ ವರಂಗಲ್​ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.

ಇದನ್ನೂ ಓದಿ: ಕಾಮುಕ ತಂದೆಯಿಂದಲೇ ಐದು ವರ್ಷದ ಮಗಳ ಮೇಲೆ ರೇಪ್​

ಭಾನುವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ರೂಂನಿಂದ ಹೊರಗೆ ಬಂದ ಅರ್ಚನಾ, ಬ್ಲೇಡ್ ತೆಗೆದುಕೊಂಡು ಹೋಗಿ, ರಾಜುವಿನ ಕತ್ತು ಸೀಳಿದ್ದಾರೆ. ಈ ವಳೆ ಆತ ಕಿರುಚುತ್ತಾ ಹೊರಗಡೆ ಬಂದಿದ್ದಾಳೆ. ಇದರ ಬೆನ್ನಲ್ಲೇ ಅರ್ಚನಾ ಬೇರೆ ಕೋಣೆಗೆ ಹೋಗಿ, ಬಾಗಿಲು ಹಾಕಿಕೊಂಡಿದ್ದಾಳೆ. ಮಾಹಿತಿ ಪಡೆದುಕೊಂಡು ಘಟನಾ ಸ್ಥಳಕ್ಕಾಗಮಿಸಿರುವ ಪೊಲೀಸರು ಈಗಾಗಲೇ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಂತ್ರಸ್ತನ ಕುಟುಂಬದಿಂದ ಯಾವುದೇ ರೀತಿಯ ದೂರು ದಾಖಲಾಗಿಲ್ಲ.

Last Updated : Apr 26, 2022, 1:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.