ETV Bharat / bharat

ಎಚ್ಚರ! ಮೊಬೈಲ್​ಗೆ ಬಂದ ಲಿಂಕ್​ ಕ್ಲಿಕ್​ ಮಾಡಿ ಎಗರಿಹೋಯ್ತು 24.14 ಲಕ್ಷ - ಸೈಬರ್ ಅಪರಾಧಿಗಳು

ಸೈಬರ್ ಅಪರಾಧಿಗಳು ಹಾರೈಕೆಯ ರೂಪದಲ್ಲಿ SMS ಅಥವಾ ಲಿಂಕ್‌ಗಳನ್ನು ಕಳುಹಿಸಿದ್ದಾರೆ. ಆ ವೇಳೆ ಮಹಿಳೆ ಲಿಂಕ್​ ಕ್ಲಿಕ್​ ಮಾಡಿದಾಗ ಎಲ್ಲಾ ಮಾಹಿತಿಯನ್ನು ಅವರು ಪಡೆದುಕೊಂಡಿದ್ದಾರೆ. ಹಾಗೆಯೇ ಆಕೆಯ ಖಾತೆಯಲ್ಲಿದ್ದ ಹಣವನ್ನು ಎಗರಿಸಿದ್ದಾರೆ.

ಮೊಬೈಲ್​ಗೆ ಬಂದ ಲಿಂಕ್​ ಕ್ಲಿಕ್​ ಮಾಡಿದ್ದಕ್ಕೆ ಎಗರಿಹೋಯ್ತು ಬರೋಬ್ಬರಿ  24.14 ಲಕ್ಷ !

author img

By

Published : Nov 9, 2021, 4:09 PM IST

ಹೈದರಾಬಾದ್: ಸೈಬರ್​ ಅಪರಾಧಗಳ ಬಗ್ಗೆ ಎಷ್ಟೇ ಎಚ್ಚರಿಕೆವಹಿಸಿದರೂ ಸಹ ಒಂದಲ್ಲೊಂದು ರೀತಿಯಲ್ಲಿ ಅಪರಾಧಿಗಳು ತಮ್ಮ ಹಿಡಿದ ಕೆಲಸದಲ್ಲಿ ಯಶಸ್ಸು ಕಾಣುತ್ತಿದ್ದಾರೆ. ಆದರೂ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಿದೆ. ಹೈದರಾಬಾದ್‌ನ ಚಂದಾನಗರದಲ್ಲಿ ಮಹಿಳೆಯೊಬ್ಬರಿಗೆ ಸೈಬರ್ ಅಪರಾಧಿಗಳು 24.14 ಲಕ್ಷ ರೂ. ವಂಚಿಸಿದ್ದಾರೆ.

ವಿವರ:

ಬಹಳ ಸಮಯದಿಂದ ತಮ್ಮ ಮೊಬೈಲ್​ಗೆ ಯಾವುದೇ ಸಿಗ್ನಲ್ ಇಲ್ಲದಿರುವುದನ್ನು ಕಂಡ ಮಹಿಳೆ ನವೆಂಬರ್ 1 ರಂದು ಮತ್ತೊಂದು ಸಂಖ್ಯೆಯಿಂದ ಕಸ್ಟಮರ್ ಕೇರ್ ಸೇವೆಗೆ ಕರೆ ಮಾಡಿದ್ದಾರೆ. ಆ ವೇಳೆ ಸಿಮ್ ಕಾರ್ಡ್ ಬ್ಲಾಕ್ ಆಗಿದೆ ಎಂದು ತಿಳಿದುಬಂದಿದೆ.

ಮರುದಿನ ಬೆಳಿಗ್ಗೆ ಆ ಮಹಿಳೆ ತನ್ನ ಸಂಬಂಧಿಕರೊಬ್ಬರನ್ನು ಏರ್‌ಟೆಲ್ ಸ್ಟೋರ್‌ಗೆ ಸಮಸ್ಯೆಯನ್ನು ಸರಿಪಡಿಸಲು ಕಳುಹಿಸಿದ್ದಾರೆ. ಆ ವೇಳೆ ಸಿಮ್ ಅನ್ ಲಾಕ್ ಮಾಡಲು ನಾಲ್ಕೈದು ಗಂಟೆ ಬೇಕು ಎಂದು ಸಿಬ್ಬಂದಿ ಹೇಳಿ ಕಳುಹಿಸಿದ್ದಾರೆ. ಅಂದು ರಾತ್ರಿ 8 ಗಂಟೆಗೆ ಸಿಮ್​ ಕೆಲಸ ಮಾಡಲು ಮುಂದಾಗುತ್ತದೆ. ಆಗ ಗೊತ್ತಾಗಿದ್ದೇ ಆಕೆಯ ಅಕೌಂಟ್‌ನಿಂದ 24.14 ಲಕ್ಷ ರೂಪಾಯಿ ಕಡಿತ ಆಗಿರುವುದು. ಅದನ್ನು ನೋಡಿ ಮಹಿಳೆ ಶಾಕ್ ಆಗಿದ್ದಾರೆ. ನಂತರ ಅವರು ಪೊಲೀಸರನ್ನು ಸಂಪರ್ಕಿಸಿ ದೂರು ಸಲ್ಲಿದ್ದಾರೆ. ಆಕೆಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಸೈಬರ್ ಅಪರಾಧಿಗಳು ಹಾರೈಕೆಯ ರೂಪದಲ್ಲಿ SMS ಅಥವಾ ಲಿಂಕ್‌ಗಳನ್ನು ಕಳುಹಿಸಿದ್ದಾರೆ. ಆ ವೇಳೆ ಮಹಿಳೆ ಲಿಂಕ್​ ಕ್ಲಿಕ್​ ಮಾಡಿದಾಗ ಎಲ್ಲಾ ಮಾಹಿತಿಯನ್ನು ಅವರು ಪಡೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೆ ಅಪರಾಧಿಗಳು ಮಾಲ್‌ವೇರ್ ಅನ್ನು ಎಸ್‌ಎಂಎಸ್ ರೂಪದಲ್ಲಿ ರವಾನಿಸಿರಬಹುದು ಎಂದು ಅವರು ಊಹಿಸಿದ್ದಾರೆ.

ಸಿಮ್​ ಬ್ಲಾಕ್​ ಮಾಡಿದ ನಂತರ ಮತ್ತೊಬ್ಬರ ಫೋಟೋ ಹಾಕಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಆ ಮಾಹಿತಿಯೊಂದಿಗೆ ಸಿಮ್ ಅನ್ನು ನಿರ್ಬಂಧಿಸಿ ಹೊಸ ಸಿಮ್ ಖರೀದಿಸಿ, ಆ ಮೂಲಕ ಅವರು ಬ್ಯಾಂಕ್‌ನಿಂದ OTP ಗಳನ್ನು ಸ್ವೀಕರಿಸಿದ್ದಾರೆ. ಆನ್​ಲೈನ್​ ಪೇಮೆಂಟ್​ ಅಪ್ಲಿಕೇಶನ್‌ಗಳನ್ನು ಬಳಸುವ ಮೂಲಕ ಸೈಬರ್ ಅಪರಾಧಿಗಳು ಸಂತ್ರಸ್ತರ ಖಾತೆಯಿಂದ ಹಣವನ್ನು ಅವರ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.