ನವಸಾರಿ(ಗುಜರಾತ್): ಪ್ರೀತಿಸಿ ಕೈಕೊಟ್ಟ ಲವರ್ ವಿರುದ್ಧ ಮಾಜಿ ಪ್ರಿಯಕರನೋರ್ವ ಸಿನಿಮೀಯ ಸ್ಟೈಲ್ನಲ್ಲಿ ಸೇಡು ತೀರಿಸಿಕೊಂಡಿರುವ ಘಟನೆ ಗುಜರಾತ್ನ ನವಸಾರಿಯಲ್ಲಿ ನಡೆದಿದೆ. ಮದುವೆ ಕಾರ್ಯಕ್ರಮವೊಂದರಲ್ಲಿ ಟೆಡ್ಡಿ ಬೇರ್ನಲ್ಲಿ ಬಾಂಬ್ ಇಟ್ಟು ಭಗ್ನ ಪ್ರೇಮಿಯೊಬ್ಬ ನವ ವಧುವಿಗೆ ನೀಡಿದ್ದಾನೆ.
ಮಿಂಧಬರಿ ಗ್ರಾಮದಲ್ಲಿ ಮದುವೆ ಉಡುಗೊರೆಯಾಗಿ ನೀಡಿರುವ ಸಾಮಗ್ರಿ ಪರಿಶೀಲನೆ ನಡೆಸುತ್ತಿದ್ದ ವೇಳೆ ಟೆಡ್ಡಿ ಬೇರ್ವೊಂದು ಸ್ಫೋಟಗೊಂಡಿದೆ. ಇದರ ಪರಿಣಾಮ ಮೂರು ವರ್ಷದ ಬಾಲಕ ಹಾಗೂ ವರನ ಎಡಗೈ ತುಂಡಾಗಿದ್ದು, ಕಣ್ಣಿನ ಭಾಗಕ್ಕೆ ಗಂಭೀರವಾದ ಗಾಯವಾಗಿದೆ. ಇವರನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಯುವತಿಯ ಮಾಜಿ ಲವರ್ ಟೆಡ್ಡಿ ಬೇರ್ನಲ್ಲಿ ಬಾಂಬ್ ಇರಿಸಿದ್ದಾನೆಂದು ಹೇಳಲಾಗ್ತಿದೆ.
ಇದನ್ನೂ ಓದಿ: ಇದು KGF ಚಾಪ್ಟರ್ 3 ಹಗರಣ.. ಬೃಹತ್ ಕಲ್ಲಿದ್ದಲು ಕಳ್ಳತನದ ವಿಡಿಯೋ ವೈರಲ್!
ಮೇ 12ರಂದು ಆರತಿ ಭೋಯಾ ಮತ್ತು ಗವಿತ್ ಎಂಬುವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ವೇಳೆ ಆರತಿಯನ್ನ ಪ್ರೀತಿಸಿದ್ದ ಮಾಜಿ ಲವರ್ ರಾಜೇಶ್ ಎಂಬಾತ ಮಗುವಿನ ಕೈಯಲ್ಲಿ ಟೆಡ್ಡಿ ಬೇರ್ ಕೊಟ್ಟು, ವಧುವಿನ ಕೈಗೆ ನೀಡಲು ತಿಳಿಸಿದ್ದಾನೆ. ಉಡುಗೊರೆಯಾಗಿ ನೀಡಲಾಗಿದ್ದ ವಸ್ತುಗಳ ಪರಿಶೀಲನೆ ವೇಳೆ ಅದು ಸ್ಫೋಟಗೊಂಡಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಆರಂಭಗೊಂಡಿದೆ. ಆರೋಪಿಯನ್ನ ವಿಚಾರಣೆಗೊಳಪಡಿಸಿದಾಗ ತಾನು ವಧುವಿನೊಂದಿಗೆ ಲಿವ್ ಇನ್ ರಿಲೇಶನ್ಶಿಪ್ನಲ್ಲಿ ವಾಸವಾಗಿದ್ದೇನು. ಆದರೆ, ನನಗೆ ಗೊತ್ತಾಗದ ರೀತಿಯಲ್ಲಿ ಮದುವೆ ಮಾಡಿಕೊಳ್ಳುಲು ಮುಂದಾಗಿದ್ದಳು, ಅದೇ ಕಾರಣಕ್ಕಾಗಿ ಈ ರೀತಿಯಾಗಿ ನಡೆದುಕೊಂಡಿರುವುದಾಗಿ ತಿಳಿಸಿದ್ದಾನೆ.