ಅಸ್ಸೋಂ : ಸಾಮಾನ್ಯವಾಗಿ ಕಾಡು ಪ್ರಾಣಿಗಳು ಬೇಟೆಯಾಡುತ್ತವೆ ಅನ್ನೋದನ್ನ ಕೇಳಿದ್ದೀವಿ, ಸಿನಿಮಾಗಳಲ್ಲಿ ನೋಡಿದ್ದೀವಿ. ಆದರೆ, ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಯೊಂದು ಮೇಯುತ್ತಿದ್ದ ಮೇಕೆಯನ್ನು ಬೇಟೆಯಾಡಿದೆ.
ಬಯಲಿನಲ್ಲಿ ಮೇಯುತ್ತಿದ್ದ ಮೇಕೆಯನ್ನು ಹುಲಿಯೊಂದು ಬೇಟೆಯಾಡಿ ಬಾಯಲ್ಲಿ ಕಚ್ಚಿಕೊಂಡು ಹೋಗುತ್ತಿರುವ ವಿಡಿಯೋವೊಂದು ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.