ಚಮೋಲಿ (ಉತ್ತರಾಖಂಡ): ಫೆಬ್ರವರಿ 7ರಂದು ಉತ್ತರಾಖಂಡದ ಚಮೋಲಿಯಲ್ಲಿ ನೀರ್ಗಲ್ಲು ಸ್ಫೋಟದಿಂದ ಉಂಟಾದ ಪ್ರವಾಹದಲ್ಲಿ ಸಾವನ್ನಪ್ಪಿದವರ ಸಂಖ್ಯೆ 58ಕ್ಕೆ ಏರಿಕೆಯಾಗಿದೆ.
ಐಟಿಬಿಪಿ, ಎನ್ಡಿಆರ್ಎಫ್, ಎಸ್ಡಿಆರ್ಎಫ್ ತಂಡಗಳು ವಿವಿಧ ಇಲಾಖೆಗಳ ಇಂಜಿನಿಯರ್‌ಗಳು, ಅಧಿಕಾರಿಗಳು, ಭೂವಿಜ್ಞಾನಿಗಳು, ವಿಜ್ಞಾನಿಗಳು ಸೇರಿ ಒಟ್ಟು 325ಕ್ಕೂ ಹೆಚ್ಚು ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ: ದೆಹಲಿಗರ ನಿದ್ದೆಕೆಡಿಸಿದ 500 ಕಿ.ಮೀ. ದೂರದಲ್ಲಿನ ಉತ್ತರಾಖಂಡ ನೀರ್ಗಲ್ಲು ಪ್ರವಾಹ!
ಜೋಶಿಮಠದ ತಪೋವನ ಸುರಂಗ, ರೇನಿ ಗ್ರಾಮ ಸೇರಿ ಚಮೋಲಿಯಲ್ಲಿ ಈವರೆಗೆ ಒಟ್ಟು 58 ಮೃತದೇಹಗಳು ಪತ್ತೆಯಾಗಿದ್ದು, ಸುಮಾರು 170 ಮಂದಿ ನಾಪತ್ತೆಯಾಗಿದ್ದಾರೆ.