ETV Bharat / bharat

ಆಯಸ್ಸು ಗಟ್ಟಿಯಾಗಿದ್ರೆ... 3ನೇ ಮಹಡಿಯಿಂದ ಬಿದ್ದರೂ ಬದುಕುಳಿದ ಮಗು!

ಅಪಾರ್ಟ್​ಮೆಂಟ್​ವೊಂದರ ಬಾಲ್ಕನಿಯಲ್ಲಿ ಆಟವಾಡುತ್ತಿದ್ದ ಮೂರು ವರ್ಷದ ಮಗುವೊಂದು ಮೂರನೇ ಮಹಡಿಯಿಂದ ಕೆಳಗೆ ಬಿದ್ದಿದ್ದು, ಪ್ರಾಣಾಪಾಯದಿಂದ ಪಾರಾಗಿದೆ.

3ನೇ ಮಹಡಿಯಿಂದ ಬಿದ್ದರೂ ಬದುಕುಳಿದ ಮಗು
3ನೇ ಮಹಡಿಯಿಂದ ಬಿದ್ದರೂ ಬದುಕುಳಿದ ಮಗು
author img

By

Published : Mar 25, 2022, 7:16 PM IST

ನಾಶಿಕ್​​(ಮಹಾರಾಷ್ಟ್ರ): ಆಯಸ್ಸು ಗಟ್ಟಿಯಾಗಿದ್ರೆ ಯಮ ಅಲ್ಲ, ಆ ಬ್ರಹ್ಮ ಬಂದ್ರೂ ಏನೂ ಮಾಡೋಕಾಗಲ್ಲ ಎನ್ನುತ್ತಾರೆ. ಮಹಾರಾಷ್ಟ್ರದ ನಾಶಿಕ್​​ನಲ್ಲಿ ನಡೆದಿರುವ ಘಟನೆ ಇದಕ್ಕೆ ಜ್ವಲಂತ ಉದಾಹರಣೆ. ಮೂರು ವರ್ಷದ ಬಾಲಕನೋರ್ವ ಕಟ್ಟಡದ ಮೂರನೇ ಮಹಡಿಯಿಂದ ಕೆಳಗೆ ಬಿದ್ದರೂ ಬದುಕುಳಿದಿದ್ದಾನೆ.

ಸಿಸಿಟಿವಿ ವಿಡಿಯೋ

ನಾಶಿಕ್​​ನ ಓಝಾರ್​ನ ಚಾಂದಿನಿ ಚೌಕ್​ ಅಲ್ಸಾನಾ ಅಪಾರ್ಟ್​​ಮೆಂಟ್​​ನಲ್ಲಿ ನಡೆದಿದ್ದು, ಮೂರು ವರ್ಷದ ಮಗು ಫೈಜಾನ್ ಸದ್ದಾಂ ಶೇಖ್​ ಕಟ್ಟಡದ ಮೂರನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ. ಆದರೆ, ಅದೃಷ್ಟವಶಾತ್​ ಬದುಕುಳಿದಿದ್ದಾನೆ. ಘಟನೆ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಮಾರ್ಚ್​​ 18ರಂದು ನಡೆದಿರುವ ಘಟನೆ ಇದಾಗಿದೆ. ಫೈಜಾನ್​ ತನ್ನ ಮನೆಯ ಬಾಲ್ಕನಿಯಲ್ಲಿ ಆಟವಾಡುತ್ತಿದ್ದನು. ಈ ವೇಳೆ ದಿಢೀರ್​ ಆಗಿ ಕೆಳಗೆ ಬಿದ್ದಿದ್ದಾನೆ. ತಕ್ಷಣವೇ ಆತನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಅಚ್ಚರಿ ಎಂದರೆ, ಆತನಿಗೆ ದೇಹದ ಯಾವುದೇ ಭಾಗದಲ್ಲಿ ಗಾಯಗಳು ಆಗಿಲ್ಲ. ಆತನ ಸಂಪೂರ್ಣವಾಗಿ ಪರೀಕ್ಷೆ ಮಾಡಿರುವ ವೈದ್ಯರಿಗೂ ಇದು ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: ₹50 ಲಕ್ಷ ವರದಕ್ಷಿಣೆ ನೀಡಿದ್ರೂ ಗಂಡನ ಮನೆಯವರ ಕಿರುಕುಳ ತಪ್ಪಲಿಲ್ಲ.. ವಿದ್ಯಾವಂತ ನವ ವಿವಾಹಿತೆ ಆತ್ಮಹತ್ಯೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.