ETV Bharat / bharat

ಚಿತ್ರದೊಳಗೆ ಸಾವಿರ ಚಿತ್ರ, ಇದು ಡಿಜಿಟಲ್ ಚಿತ್ತಾರ: ವಿಡಿಯೋ ನೋಡಿ! - ಚಿತ್ರದೊಳಗೊಂದು ಚಿತ್ರ ವಿಡಿಯೋ

ಡಿಜಿಟಲ್ ಆರ್ಟ್ ಇದು ಆಧುನಿಕ ಕಲೆ. ಇದಕ್ಕೆ ಪೆನ್ನು, ಪೇಂಟು, ಹಾಳೆ, ಕ್ಯಾನ್ವಾಸು ಬೇಕಿಲ್ಲ. ಇದು ಕಂಪ್ಯೂಟರ್ ಪರದೆ ಎಂಬ ಕ್ಯಾನ್ವಾಸ್ ಮೇಲೆ, ಸಾಫ್ಟ್‌ವೇರ್ ಎಂಬ ಬಣ್ಣದಿಂದ ತಯಾರಾಗುತ್ತದೆ. ಇಂಥದೇ ಒಂದು ಅದ್ಭುತ ಡಿಜಿಟಲ್ ಪೇಂಟಿಂಗ್ ಆರ್ಟ್​ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಜೊತೆಗೆ ವಿಡಿಯೋ ನೋಡಿ ಆನಂದಿಸಿ!

digital-art
ಚಿತ್ರದೊಳಗೆ ಸಾವಿರ ಚಿತ್ರ
author img

By

Published : Jul 27, 2022, 1:41 PM IST

Updated : Jul 27, 2022, 2:50 PM IST

ಬೆಂಗಳೂರು: ಚಿತ್ರಕಲೆ ಎಂಬ ಒಂದೇ ಶಬ್ದ ಸಾಕು.. ಮನಸಿಗೆ ಎಂಥದೋ ಒಂದು ಅವ್ಯಕ್ತ ಆನಂದ ಉಂಟು ಮಾಡುತ್ತದೆ. ಚಿತ್ರಕಲೆ ಮಾತ್ರವಲ್ಲದೆ ಇನ್ನೂ ಅನೇಕ ಕಲೆಗಳು ಮಾನವನ ಉಗಮದಿಂದಲೇ ಈ ಭೂಮಿಯ ಮೇಲೆ ಅಸ್ತಿತ್ವದಲ್ಲಿವೆ. ಸಾವಿರಾರು ವರ್ಷಗಳ ಹಿಂದೆ, ಗವಿಗಳಲ್ಲಿ ಕಲ್ಲು ಬಂಡೆಗಳ ಮೇಲೆ ಕಾಡುಮಾನವರು ಬಿಡಿಸಿದ್ದ ಚಿತ್ರಗಳೇ ಇದಕ್ಕೆ ಸಾಕ್ಷಿ.

ಚಿತ್ರಕಲೆ ಎಂಬುದು ಕಾಲಾಂತರದಲ್ಲಿ ಹಲವಾರು ರೂಪಗಳಲ್ಲಿ ಮಾರ್ಪಾಟಾಗಿದೆ. ಕಾಗದ, ಕ್ಯಾನ್ವಾಸ್ ಮೇಲೆ ಬಿಡಿಸುವುದು ಮಾತ್ರ ಈಗ ಚಿತ್ರಕಲೆಯಲ್ಲ. ಕಂಪ್ಯೂಟರ್ ಪರದೆಯ ಮೇಲೆ ಚಿತ್ರಗಳನ್ನು ಮೂಡಿಸುವುದು ಸಹ ಅದ್ಭುತ ಕಲೆಯಾಗಿದೆ. ಆಧುನಿಕ ಸಾಫ್ಟ್‌ವೇರ್​ಗಳನ್ನು ಉಪಯೋಗಿಸಿ, ಅತ್ಯಂತ ಜಾಣ್ಮೆಯಿಂದ ಹಾಗೂ ಅಷ್ಟೇ ತಾಳ್ಮೆಯಿಂದ ಕಂಪ್ಯೂಟರ್ ಪರದೆಯ ಮೇಲೆ ಚಿತ್ತಾರ ಬಿಡಿಸುವುದನ್ನು ಡಿಜಿಟಲ್ ಕಲೆ ಅಥವಾ ಡಿಜಿಟಲ್ ಆರ್ಟ್ ಎನ್ನುತ್ತಾರೆ. ಮೊದಲಿಗೆ ಈ ಕೆಳಗಿನ ವಿಡಿಯೋ ಕ್ಲಿಕ್ಕಿಸಿ ಒಮ್ಮೆ ನೋಡಿ.

ಕಳೆದ ಎರಡು ದಶಕಗಳ ಅವಧಿಯಲ್ಲಿ ಡಿಜಿಟಲ್ ಆರ್ಟ್​ ಹಲವಾರು ಆಯಾಮಗಳಲ್ಲಿ ಬೆಳವಣಿಗೆ ಸಾಧಿಸಿದೆ. ಫ್ಲೆಕ್ಸ್​, ಬ್ಯಾನರ್ ಪ್ರಿಂಟ್ ಮಾಡುವುದರಿಂದ ಹಿಡಿದು ಡೋರೆಮಾನ್ ಕಾರ್ಟೂನ್, ಬಾಹುಬಲಿಯಂಥ ಮಹಾನ್ ಚಲನಚಿತ್ರ ನಿರ್ಮಾಣದಲ್ಲಿ ಡಿಜಿಟಲ್ ಆರ್ಟ್​ನದ್ದೇ ಪಾರಮ್ಯ.

ಈಗ ಇದೇ ಡಿಜಿಟಲ್ ಆರ್ಟ್​ ಬಳಸಿ ತಯಾರಿಸಲಾದ ವಿಡಿಯೋವೊಂದು ಇಂಟರ್​ನೆಟ್​ನಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ವೈರಲ್ ಆಗಿದೆ. ಇದನ್ನು ನೀವೂ ಒಂದು ಸಲ ನೋಡಲೇಬೇಕು ಅಷ್ಟು ಚೆನ್ನಾಗಿದೆ ಈ ವೀಡಿಯೋ. ಇದನ್ನು ವೀಡಿಯೋ ಅನ್ನುವುದಕ್ಕಿಂತ ಚಿತ್ರಗಳ ಮುಗಿಯದ ಸರಣಿ ಎಂದು ಕರೆಯಬಹುದೇನೋ! ಕನಸಿನೊಳಗೊಂದು ಕನಸು ಎಂಬುದು ಎಂಥ ಅದ್ಭುತ ಕಲ್ಪನೆಯಲ್ಲವೇ? ಈ ವಿಡಿಯೋ ಕೂಡ ಹಾಗೆಯೇ ಇದೆ. ಒಂದು ಚಿತ್ರದೊಳಗೆ ಹೋಗಿ ಅಲ್ಲಿಂದ ಮತ್ತೊಂದು ಲೋಕ ಅನಾವರಣವಾಗುವುದು, ಅದರಲ್ಲಿ ಮತ್ತೊಂದು ವಿಶ್ವ ತೆರೆದುಕೊಳ್ಳುವುದು.. ಬೆರಗುಗೊಳಿಸುವಂತಿದೆ.

@Vaskange ಎಂಬ ಟ್ವಿಟರ್​ ಹ್ಯಾಂಡಲ್​ನಲ್ಲಿ ಶೇರ್ ಮಾಡಲಾಗಿರುವ ಈ ಅದ್ಭುತ ಡಿಜಿಟಲ್ ಪೇಂಟಿಂಗ್ ಆರ್ಟ್​ ಅನ್ನು ನೋಡಿದರೆ ಮಾತ್ರ ಗೊತ್ತಾಗುತ್ತದೆ ಇದೆಷ್ಟು ರೋಮಾಂಚಕವಾಗಿದೆ ಎಂಬುದು.

ಇಲ್ಲಿ ಶೇರ್ ಮಾಡಲಾದ ಕ್ಲಿಪ್​ನಲ್ಲಿ ವ್ಯಕ್ತಿಯೊಬ್ಬನು ಡಿಜಿಟಲ್ ಪೇಂಟಿಂಗ್ ಒಂದನ್ನು ಜೂಮ್ ಮಾಡುತ್ತಾನೆ. ಅದೆಷ್ಟು ಜೂಮ್ ಮಾಡಿದರೂ ಚಿತ್ರ ಅಸ್ಪಷ್ಟವಾಗುವುದಿಲ್ಲ. ಇದು ಇಲ್ಲಿಗೆ ಮುಗಿಯುವುದಿಲ್ಲ. ಜೂಮ್ ಮಾಡುತ್ತ ಹೋದಂತೆ ಈ ಚಿತ್ರದೊಳಗೆ ಇನ್ನೊಂದು ಚಿತ್ರ, ಅದರೊಳಗೆ ಮಗದೊಂದು ಚಿತ್ರ ಹಾಗೇ ಮುಂದುವರಿಯುತ್ತದೆ. ಚಿತ್ರದ ಯಾವುದೋ ಮೂಲೆಯಲ್ಲಿನ ವಸ್ತುವೊಂದರಲ್ಲಿ ಹೊಸ ಲೋಕದ ಅನಾವರಣವಾಗುತ್ತ ಹೋಗುವುದು ಎಂಥವರನ್ನೂ ಚಕಿತರನ್ನಾಗಿ ಮಾಡುತ್ತದೆ.

ಡಿಜಿಟಲ್ ಆರ್ಟ್ ಮೋಡಿ: ಡಿಜಿಟಲ್ ಆರ್ಟ್ ಎಂಬ ಪದವನ್ನು ಮೊಟ್ಟ ಮೊದಲ ಬಾರಿಗೆ 1980 ರ ದಶಕದ ಆರಂಭದಲ್ಲಿ ಬಳಸಲಾಗಿತ್ತು. ಆಗ ಕಂಪ್ಯೂಟರ್ ಎಂಜಿನಿಯರ್‌ಗಳು ಪೇಂಟ್ ಎಂಬ ಸಾಫ್ಟವೇರ್ ಪ್ರೋಗ್ರಾಂ ಅನ್ನು ರೂಪಿಸಿದಾಗ, ಅದರ ಬಳಕೆದಾರರಾಗಿದ್ದ ಹೆರಾಲ್ಡ್ ಕೋಹೆನ್ ಎಂಬುವರು ಡಿಜಿಟಲ್ ಆರ್ಟ್​ ಪದ ಬಳಸಿದ್ದರು.

ಡಿಜಿಟಲ್ ಆರ್ಟ್ ಇದನ್ನು ಕಂಪ್ಯೂಟರ್​ ಒಂದು ಸ್ವತಃ ತಯಾರಿಸಬಹುದು, ಸ್ಕ್ಯಾನ್ ಮಾಡಬಹುದು ಅಥವಾ ಮೌಸ್​, ಕೀಬೋರ್ಡ್​ ಬಳಸಿ ತಂತ್ರಜ್ಞರು, ಕಲಾವಿದರು ತಯಾರಿಸಬಹುದು. 1990ರ ನಂತರ ಡಿಜಿಟಲ್ ತಂತ್ರಜ್ಞಾನದ ಬೆಳವಣಿಗೆಯ ಕಾರಣದಿಂದ ವಿಡಿಯೋಗಳನ್ನು ಕಂಪ್ಯೂಟರುಗಳಿಗೆ ಡೌನ್ಲೋಡ್ ಮಾಡುವುದು ಸಾಧ್ಯವಾಯಿತು. ಹೀಗೆ ಡೌನ್ಲೋಡ್ ಮಾಡಿದ ವಿಡಿಯೋಗಳಿಗೆ ಕಲಾವಿದರು ತಾವು ಕ್ಯಾಮೆರಾದಲ್ಲಿ ಸೆರೆಹಿಡಿದ ಚಿತ್ರಗಳನ್ನು ಜೋಡಿಸಲು ಸಾಧ್ಯವಾಯಿತು. ಇದರಿಂದಾಗಿ ಫಿಲ್ಮ್​ ಒಂದನ್ನು ಈ ಹಿಂದೆ ಎಂದೂ ಮಾಡದ ರೀತಿಯಲ್ಲಿ ಎಡಿಟಿಂಗ್ ಮಾಡುವ ಸ್ವಾತಂತ್ರ್ಯ ಕಲಾವಿದರಿಗೆ ಸಿಕ್ಕಿತು. ವಿಡಿಯೋ, ಚಿತ್ರ ಹೀಗೆ ಡಿಜಿಟಲ್ ಆರ್ಟ್​ನಲ್ಲಿ ಏನು ಬೇಕಾದರೂ ಮಾರ್ಪಡಿಸಿ ಅವುಗಳಿಗೆ ಹೊಸ ರೂಪ ಕೊಡುವುದು ಸಾಧ್ಯ.

Last Updated : Jul 27, 2022, 2:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.