ಪುಣೆ : ಪುಣೆಯ ಅಲಂಕಾರ್ ಪೊಲೀಸ್ ಠಾಣೆಯ ಆವರಣದಲ್ಲಿ ಆಘಾತಕಾರಿ ಘಟನೆ ನಡೆದಿದೆ. ವಿದ್ಯಾರ್ಥಿಗೆ ಪಾಠ ಹೇಳಲು ಮನೆಗೆ ಬಂದ ಶಿಕ್ಷಕಿ ಬಾತ್ರೂಂಗೆ ಹೋಗಿದ್ದ ವೇಳೆ ಆ ದೃಶ್ಯವನ್ನು ಅಪ್ರಾಪ್ತ ವಿದ್ಯಾರ್ಥಿ ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾನೆ.
16ರ ಹರೆಯದ ವಿದ್ಯಾರ್ಥಿಯೊಬ್ಬ ತನ್ನ ಮೊಬೈಲ್ ಅನ್ನು ವಾಶ್ ರೂಂನಲ್ಲಿ ಮರೆಮಾಡಿಟ್ಟಿದ್ದಾನೆ. ಇದರ ಅರಿವಿಲ್ಲದ ಶಿಕ್ಷಕಿ ಬಾತ್ರೂಂ ಬಳಕೆ ಮಾಡಿ ಹೊರ ಬಂದಿದ್ದಾರೆ. ಆದರೆ, ಶಿಕ್ಷಕಿಯ ಎಲ್ಲಾ ಖಾಸಗಿ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಪೋಷಕರ ಬಂಧನದಲ್ಲಿದ್ದ ಯುವತಿ: ಪ್ರೇಯಸಿ ಅಲ್ಲಿಂದ ಓಡಿಸಿಕೊಂಡು ಬಂದು ಮದುವೆಯಾದ ಪ್ರಿಯಕರ
ಮನೆಯಲ್ಲಿ ಶಿಕ್ಷಕಿ ವಿದ್ಯಾರ್ಥಿಗೆ ಪಾಠ ಮಾಡುವ ವೇಳೆಯೂ ಅಪ್ರಾಪ್ತ ವಿದ್ಯಾರ್ಥಿ ತನ್ನ ಮೊಬೈಲ್ನಲ್ಲಿ ಆಕೆಯ ಎದೆಯ ವಿಡಿಯೋವನ್ನು ಸಹ ಸೆರೆ ಹಿಡಿದಿದ್ದಾನಂತೆ. ಈ ಸಂಬಂಧ 56 ವರ್ಷದ ಸಂತ್ರಸ್ತ ಶಿಕ್ಷಕಿ ದೂರು ನೀಡಿದ್ದು, ಎಲ್ಲಾ ಘಟನೆ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಪುಣೆಯ ಅಲಂಕಾರ್ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತ ವಿದ್ಯಾರ್ಥಿ ವಿರುದ್ಧ ವಿರುದ್ಧ ಪ್ರಕರಣ ದಾಖಲಾಗಿದೆ.