ETV Bharat / bharat

ಇಲ್ಲಿ ಜ್ಞಾನವೇ ದೇವರು: ಕಣ್ಣೂರಿನಲ್ಲಿದೆ ಜಾತ್ಯತೀತ ಪುಸ್ತಕ ದೇಗುಲ - secular temple

ಕಣ್ಣೂರು ಜಿಲ್ಲೆಯ ಚೆರುಪುಳದಲ್ಲಿ ಅಪರೂಪದ ಪುಸ್ತಕದ ದೇವಾಲಯವಿದೆ.

ಪುಸ್ತಕದ ದೇವಾಲಯ
ಪುಸ್ತಕದ ದೇವಾಲಯ
author img

By ETV Bharat Karnataka Team

Published : Nov 29, 2023, 5:44 PM IST

ಕಣ್ಣೂರು (ಕೇರಳ): ಯಾವುದೇ ಧರ್ಮ, ಜಾತಿ, ಅಡೆತಡೆಗಳಿಲ್ಲದ ಪುಸ್ತಕಗಳನ್ನು ಯಾರು ಬೇಕಾದರೂ ಪೂಜಿಸಬಹುದು. ಇದಕ್ಕೆ ಸೂಕ್ತ ನಿದರ್ಶನ ಎಂಬಂತೆ ಕಣ್ಣೂರಿನಿಂದ 58 ಕಿ. ಮೀ ದೂರದಲ್ಲಿರುವ ಬೆಟ್ಟದ ಹಳ್ಳಿಯಾದ ಚೆರುಪುಳದಲ್ಲಿ ಪುಸ್ತಕಗಳ ದೇವಾಲಯವನ್ನು ಕಾಣಬಹುದಾಗಿದೆ. ಇಲ್ಲಿರುವ ದೇವಾಲಯ ಜಾತ್ಯತೀತವಾಗಿದೆ.

ಇಲ್ಲಿ ನೈವೇದ್ಯ, ಪ್ರಸಾದ ಎಲ್ಲವೂ ಪುಸ್ತಕಗಳೇ. ಇಲ್ಲಿ ಆರಾಧನೆಗೂ ಜ್ಞಾನಕ್ಕೂ ನೇರ ಸಂಬಂಧವಿದೆ. ಪ್ರಾರ್ಥನೆಗಳು ಬುದ್ಧಿವಂತಿಕೆ ಮತ್ತು ಜ್ಞಾನದೊಂದಿಗೆ ಸಂಪರ್ಕ ಹೊಂದಿವೆ. ಇದು ದೇಶದಲ್ಲೇ ಅಪರೂಪದ ಪುಸ್ತಕಗಳನ್ನು ಹೊಂದಿರುವ ಮಠಾತೀತ ದೇವಸ್ಥಾನವಾಗಿದೆ. ಚೆರುಪುಳ ಪೀಯೆನ್ಸ್ ಕಾಲೇಜಿನ ಅಧ್ಯಾಪಕರಾದ ಮಾಸ್ಟರ್ ಪ್ರಪೋಯಿಲ್ ನಾರಾಯಣನ್ ಈ ದೇವಾಲಯದ ನಿರ್ಮಾತೃ. ನಾರಾಯಣನ್ ಅವರಿಗೆ ವಿದ್ಯಾರ್ಥಿ ದಿನದಿಂದಲೇ ಜ್ಞಾನವೇ ದೇವರು ಎಂಬುದು ಅರಿವಿಗೆ ಬಂದಿದೆ. ನಂತರ ಅವರು ಪುಸ್ತಕದ ದೇವಾಲಯವನ್ನು ಕಟ್ಟುವ ಕನಸನ್ನು ಕಂಡಿದ್ದರು.

ಅವರ ಹದಿಹರೆಯದ ವರ್ಷಗಳಲ್ಲಿ ಬ್ರೆನ್ನನ್ ಕಾಲೇಜಿನಲ್ಲಿ ಓದುತ್ತಿದ್ದಾಗ ಪುಸ್ತಕ ಚರ್ಚೆಗಳು ಮತ್ತು ಚಲನಚಿತ್ರ ಪ್ರದರ್ಶನಗಳಿಗೆ ತಮ್ಮನ್ನು ತಾವು ಒಡ್ಡಿಕೊಂಡಿದ್ದರು. ಇದು 30 ವರ್ಷಗಳ ಹಿಂದೆ ಬಲವಾದ ಸಾಂಸ್ಕೃತಿಕ ಸಂಘಕ್ಕೆ ಕಾರಣವಾಯಿತು. ನಂತರ ಅವರು ಪುಸ್ತಕ ಚರ್ಚೆ ಮತ್ತು ಚಲನಚಿತ್ರ ಪ್ರದರ್ಶನಗಳನ್ನು ನಡೆಸಿದರು. ಆದರೆ, ಹಣಕಾಸಿನ ಅಡಚಣೆಯಿಂದ ಅದು ನಿಂತು ಹೋಯಿತು. ಆದರೆ, ನಾರಾಯಣ ಅವರು ತಮ್ಮ ಕನಸನ್ನು ಬಿಡಲು ಸಿದ್ಧರಿರಲಿಲ್ಲ. ನಂತರ ತಮ್ಮ ಕನಸಿನಂತೆ ಅಕ್ಟೋಬರ್ 2021ರಲ್ಲಿ ದೇವಾಲಯವನ್ನು ತೆರೆದರು.

ನೀವು ದೇಗುಲದ ಪ್ರವೇಶ ಮಂಟಪ ತಲುಪಿದ ಕೂಡಲೇ ಸುಮಾರು 5000 ಪುಸ್ತಕಗಳನ್ನು ಕಾಣಬಹುದು. ಅಲ್ಲಿಂದ ಮೆಟ್ಟಿಲುಗಳ ಮೇಲೆ ಹೋಗಿ 30 ಅಡಿ ಎತ್ತರದ ದೈತ್ಯ ಕಲ್ಲಿನ ತುದಿ ತಲುಪಿದರೆ, ಕಾಂಕ್ರೀಟ್​ನಿಂದ ಮಾಡಿದ ಪುಸ್ತಕ ದೇವಾಲಯವನ್ನು ನೋಡಬಹುದು. ಅಲ್ಲದೇ ಈ ದೇವಾಲಯದಲ್ಲಿ ''ಜ್ಞಾನವೇ ದೇವರು. ಧರ್ಮವು ವಿಶಾಲ ಚಿಂತನೆ ಮತ್ತು ತಾರ್ಕಿಕ ಸಾಮರ್ಥ್ಯ. ನಮ್ರತೆಯು ಬುದ್ಧಿವಂತಿಕೆ ಮಾರ್ಗವಾಗಿದೆ." ಎಂಬ ಮೂರು ವಾಕ್ಯಗಳನ್ನು ಬರೆಯಲಾಗಿದೆ. ಅಲ್ಲದೇ, ದೇವಾಲಯದ ಅಂಗಳದಲ್ಲಿ ಕಲ್ಲಿನ ದೀಪವನ್ನು ಕಾಣಬಹುದಾಗಿದೆ. ಅದರ ಪಕ್ಕದಲ್ಲಿ ಚೆರುಸ್ಸೆರಿ ಮತ್ತು ಬುದ್ಧನ ಪ್ರತಿಮೆ ಇದೆ. ಬರಹಗಾರರಿಗೆ ಮೂರು ಶೆಡ್‌ಗಳನ್ನು ನಿರ್ಮಿಸಲಾಗಿದೆ. ಇಲ್ಲಿ 20 ಜನರು ಉಳಿಯಬಹುದು. ಇಲ್ಲಿ ನೀವು ಶಾಂತ ವಾತಾವರಣದಲ್ಲಿ ಬರೆಯಬಹುದು. ತೆರೆದ ವೇದಿಕೆ, ಸಣ್ಣ ಸಭಾಂಗಣ ಮತ್ತು ಊಟದ ಹಾಲ್ ವ್ಯವಸ್ಥೆ ಕೂಡಾ ಇದೆ.

ಇಲ್ಲಿಗೆ ಬರುವವರಿಗೆ ಊಟ ಮತ್ತು ವಸತಿ ಉಚಿತ. ಕೇರಳ ಮತ್ತು ಕರ್ನಾಟಕದ ಹಲವು ಭಾಗಗಳಿಂದ ನೂರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಈ ದೇಗುಲದ ಇನ್ನೊಂದು ವಿಶೇಷವೆಂದರೆ, ಇಲ್ಲಿ ಯಾವುದೇ ಅರ್ಚಕರು ಇಲ್ಲ. ಭಾನುವಾರ ಮತ್ತು ವಿಶೇಷ ದಿನಗಳಲ್ಲಿ ದೇವಾಲಯ ತೆರೆದಿರುತ್ತದೆ. 2022ರಲ್ಲಿ 15 ದಿನಗಳ ಕಾಲ ಇಲ್ಲಿ ಉತ್ಸವ ನಡೆಸಲಾಗಿತ್ತು. ಸಂಪ್ರದಾಯದಂತೆ ಹಬ್ಬದ ದಿನಗಳಲ್ಲಿ ಈ ಪುಸ್ತಕಗಳ ದೇವಾಲಯವು ದಿನಸಿಗಳನ್ನು ಸಂಗ್ರಹಿಸುವ ಬದಲು ಪುಸ್ತಕಗಳಿಂದ ತುಂಬಿ ಹೋಗಿತ್ತು. ಇಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕೂಟಗಳು ನಡೆಯಲಿವೆ. ನವರಾತ್ರಿ ಕಾಲದಲ್ಲಿ ವಿದ್ಯಾರ್ಜಾನೆಗೆ ಇಲ್ಲಿಗೆ ಅನೇಕ ಮಕ್ಕಳು ಬಂದು ಸೇರುತ್ತಾರೆ.

ದೇವಸ್ಥಾನ ನಿರ್ಮಾಣಕ್ಕೆ 40 ಲಕ್ಷ ರೂ ಖರ್ಚು: ಆಚರಣೆಗೆ ಯಾವುದೇ ಸಮಿತಿಯಾಗಲಿ, ದೇಣಿಗೆಯನ್ನೂ ಸಂಗ್ರಹಿಸುತ್ತಿಲ್ಲ. ಪಡಿಯೊಟ್ಟು ಚಾಲ್ ಸ್ಥಳೀಯರಾದ ಸಾಬು ಮಾಲಿಕಲ್ ಅವರು ನಾರಾಯಣನ್ ಮಾಸ್ಟರ್ ಅವರ ನಿಕಟವರ್ತಿಯಾಗಿದ್ದು, ಪುಸ್ತಕಗಳ ದೇವಾಲಯದ ಎಲ್ಲಾ ಚಟುವಟಿಕೆಗಳಲ್ಲಿ ತಮ್ಮ ಬೆಂಬಲವನ್ನು ನೀಡುತ್ತಿದ್ದಾರೆ. ಸಾಬು ಮಾಲಿಕಲ್ ಮತ್ತು ನಾರಾಯಣನ್ ಮಾಸ್ಟರ್ ಅಧ್ಯಕ್ಷರಾಗಿರುವ ಆಡಳಿತ ಸಮಿತಿಯು ದೇವಾಲಯದ ಕಾರ್ಯಗಳನ್ನು ನಿರ್ವಹಿಸುತ್ತಿದೆ. ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಇಲ್ಲಿಯವರೆಗೆ 40 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಬರಹಗಾರರಿಗೆ ಹೊಸ ಸಭಾಂಗಣಗಳನ್ನು ಕಟ್ಟುವ ಮೂಲಕ ನವಪುರವನ್ನು ಅಭಿವೃದ್ಧಿಪಡಿಸುವುದು ನಾರಾಯಣನ್ ಮಾಸ್ಟರ್​ ಅವರ ಗುರಿಯಾಗಿದೆ. ನಾರಾಯಣನ್ ಮಾಸ್ಟರ್ 26 ಪುಸ್ತಕಗಳ ಲೇಖಕರೂ ಹೌದು.

ಇದನ್ನೂ ಓದಿ: ಮೊದಲ ಗ್ರಂಥಾಲಯ ಗ್ರಾಮ ಉದ್ಘಾಟನೆ..ಏನೇನೆಲ್ಲಾ ವಿಶೇಷತೆ ಇದೆ ಗೊತ್ತಾ ಇಲ್ಲಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.