ಡುಂಗರ್ಪುರ (ರಾಜಸ್ಥಾನ) : ಮಲತಾಯಿವೋರ್ವಳು ತನ್ನ ಇಬ್ಬರು ಮುಗ್ಧ ಮಕ್ಕಳನ್ನು ಟಬ್‌ನಲ್ಲಿ ಮುಳುಗಿಸಿ ಅಮಾನವೀಯವಾಗಿ ಕೊಂದ ಘಟನೆ, ಜಿಲ್ಲೆಯ ರಾಮ್‌ಸಗಡದ ಶರಂ ಗ್ರಾಮದಲ್ಲಿ ನಡೆದಿದೆ.
ದುರ್ಗಾ ಮಕ್ಕಳನ್ನು ಕೊಂದಿರುವ ಮಲತಾಯಿ. ವಿಶಾಲ್ (3), ನಿಶಾ (5) ಮೃತ ಕಂದಮ್ಮಗಳು. ಬದ್ರಿ ಫೆರಾ ಎಂಬಾತ ಎರಡು ಮದುವೆಯಾಗಿದ್ದು, ಮೊದಲ ಹೆಂಡತಿ ಕಳೆದ ಎರಡು ವರ್ಷಗಳ ಹಿಂದೆ ಪತಿ, ಮಕ್ಕಳನ್ನು ಬಿಟ್ಟು ಹೋಗಿದ್ದಾಳೆ. ಬಳಿಕ ಬದ್ರಿ ದುರ್ಗಾಳನ್ನು ಮದುವೆಯಾಗಿ ತನ್ನ ಮನೆಗೆ ಕರೆತಂದಿದ್ದ. ಮಕ್ಕಳಿಬ್ಬರೂ 2 ವರ್ಷಗಳ ಕಾಲ ಮಲತಾಯಿ ಬಳಿ ಬೆಳೆದರು. ಆದರೆ ದುರ್ಗಾ ಇದೀಗ ಇಬ್ಬರೂ ಮಕ್ಕಳನ್ನು ಭೀಕರವಾಗಿ ಕೊಂದಿದ್ದಾಳೆ.
ಮೊದಲು ಟಬ್‌ನಲ್ಲಿ ಮುಳುಗಿಸಿ ಕೊಂದು ಬಳಿಕ ಸಾಮಾನ್ಯ ಸಾವು ಎಂದು ಬಿಂಬಿಸಿದ್ದಾಳೆ. ಆನಂತರ ಇಬ್ಬರು ಮಕ್ಕಳನ್ನು ಹೂತುಹಾಕಿದ್ದಾಳೆ. ಇದಾದ ಬಳಿಕ ಜೂನ್ 5 ರಂದು ದುರ್ಗಾ ಕಣ್ಮರೆಯಾಗಿ ಎರಡು ದಿನದ ಬಳಿಕ ಬಂದು ಮಕ್ಕಳನ್ನು ಕೊಂದಿರುವುದು ತಾನೇ ಎಂದು ಒಪ್ಪಿಕೊಂಡಿದ್ದಾಳೆ.
ಘಟನೆಯ ಮಾಹಿತಿ ಮೇರೆಗೆ ಸೋಮವಾರ ರಾಮಸಗಡ ಪೊಲೀಸರು ಸ್ಥಳಕ್ಕಾಗಮಿಸಿ ವಿಚಾರಿಸಿದರು. ಅದೇ ಸಮಯದಲ್ಲಿ, ಎಸ್‌ಡಿಎಂ ಉಪಸ್ಥಿತಿಯಲ್ಲಿ ಸಮಾಧಿ ಮಾಡಿದ ಮಕ್ಕಳ ಶವಗಳನ್ನು ಹೊರತೆಗೆಯಲಾಯಿತು. ಪ್ರಕರಣ ಸಂಬಂಧ ಮಲತಾಯಿ ದುರ್ಗಾಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.