ನವದೆಹಲಿ: 200 ಭಾರತೀಯ ನಾಗರಿಕರನ್ನು ಹೊತ್ತ ವಿಶೇಷ ವಿಮಾನ ರೊಮೇನಿಯಾದಿಂದ ನವದೆಹಲಿಗೆ ಬಂದಿಳಿದಿದೆ. ಈ ನಡುವೆ ಉಕ್ರೇನ್ನಲ್ಲಿ ಭೀಕರ ಕಾಳಗ ಮುಂದುವರಿದಿದೆ. ರಷ್ಯಾ ಮೂರನೇ ಬಾರಿಗೆ ಘೋಷಿಸಿದ ಕದನ ವಿರಾಮ ವಿಫಲವಾಗಿದೆ.
ಮತ್ತೊಂದೆಡೆ ಭಾರತ ಸರ್ಕಾರ ಆಪರೇಷನ್ ಗಂಗಾ ಕಾರ್ಯಾಚರಣೆ ಮುಂದುವರಿಸಿದೆ. ಈ ವರೆಗೂ ಭಾರತ ಸರ್ಕಾರ 17 ಸಾವಿರಕ್ಕೂ ಹೆಚ್ಚು ಜನರನ್ನು ಉಕ್ರೇನ್ನಿಂದ ಭಾರತಕ್ಕೆ ಕರೆ ತಂದಿದೆ ಎಂದು ತಿಳಿದು ಬಂದಿದೆ.
ಇಂದು ರೊಮೇನಿಯಾದಿಂದ 200 ಜನರು ವಿಶೇಷ ವಿಮಾನದಲ್ಲಿ ನವದೆಹಲಿ ತಲುಪಿದ್ದಾರೆ. ದೆಹಲಿಗೆ ಬಂದಿಳಿದ ವಿದ್ಯಾರ್ಥಿಗಳು ಸ್ವದೇಶಕ್ಕೆ ಮರಳಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ:ಯುದ್ಧಪೀಡಿತ ಉಕ್ರೇನ್ಗೆ ₹1,768 ಕೋಟಿ ನೆರವು ಘೋಷಿಸಿದ ಬ್ರಿಟನ್