ನವದೆಹಲಿ: ಉಕ್ರೇನ್ ಯುದ್ಧದಲ್ಲಿ ಸಿಲುಕಿ ನಲಗುತ್ತಿರುವ ಭಾರತೀಯರ ಸ್ಥಳಾಂತರ ಮುಂದುವರೆದಿದೆ. ಈಗಾಗಲೇ 16 ಸಾವಿರಕ್ಕೂ ಹೆಚ್ಚು ಭಾರತೀಯರನ್ನು ಸರ್ಕಾರ ಉಕ್ರೇನ್ನಿಂದ ಸ್ಥಳಾಂತರ ಮಾಡಿದೆ. ಇನ್ನೂ ಸಾವಿರಾರು ಜನ ಯುದ್ಧಪೀಡಿತ ಉಕ್ರೇನ್ನಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಅವರ ಸ್ಥಳಾಂತರಕ್ಕೆ ಭಾರತೀಯ ವಿದೇಶಾಂಗ ಇಲಾಖೆ ಹಾಗೂ ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹರಸಾಹಸ ಮುಂದುವರೆಸಿದೆ.
ಈ ನಡುವೆ ಹಂಗೇರಿಯ ಬುಡಾಪೇಸ್ಟ್ನಿಂದ ಭಾರತೀಯರನ್ನು ಹೊತ್ತ ವಿಶೇಷ ವಿಮಾನ ಇಂದು ನಸುಕಿನ ಜಾವ ನವದೆಹಲಿ ತಲುಪಿದೆ. ನವದೆಹಲಿಗೆ ಬಂದಿಳಿದ ಭಾರತೀಯ ವಿದ್ಯಾರ್ಥಿಗಳು ಹಾಗೂ ನಾಗರಿಕರನ್ನು ಬರಮಾಡಿಕೊಳ್ಳಲಾಗಿದೆ.
ಉಕ್ರೇನ್ನಿಂದ ಭಾರತೀಯರ ಸ್ಥಳಾಂತರದ ಸಂಬಂಧ ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಇಂದು ಉಕ್ರೇನ್ನಿಂದ ಸುಮಾರು 1200 ಭಾರತೀಯ ನಾಗರಿಕರನ್ನು ಕರೆತರಲಾಗುವುದು ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಸುಮಾರು 7 ವಿಮಾನಗಳು ಇಂದು ಭಾರತಕ್ಕೆ ಪ್ರಯಾಣ ಬೆಳಸಲಿವೆ ಎಂದು ಅವರು ತಿಳಿಸಿದ್ದಾರೆ.
-
Today, 7 flights will bring approximately 1200 Indian nationals home. #OperationGanga https://t.co/yYt3ehaM7S
— Dr. S. Jaishankar (@DrSJaishankar) March 6, 2022 " class="align-text-top noRightClick twitterSection" data="
">Today, 7 flights will bring approximately 1200 Indian nationals home. #OperationGanga https://t.co/yYt3ehaM7S
— Dr. S. Jaishankar (@DrSJaishankar) March 6, 2022Today, 7 flights will bring approximately 1200 Indian nationals home. #OperationGanga https://t.co/yYt3ehaM7S
— Dr. S. Jaishankar (@DrSJaishankar) March 6, 2022
ಇದನ್ನು ಓದಿ: ರಷ್ಯಾ-ಉಕ್ರೇನ್ ಯುದ್ಧ: ಸಂಧಾನಕ್ಕೆ ಇಸ್ರೇಲ್ ಪ್ರಯತ್ನ