ಇಡುಕ್ಕಿ (ಕೇರಳ): ಪುಟ್ಟ ಬಾಲಕನನ್ನು ಸಂಬಂಧಿಯೋರ್ವ ಹೊಡೆದು ಕೊಂದ ಅಮಾನವೀಯ ಘಟನೆ ಇಡುಕ್ಕಿಯ ಅನಾಚಲ್ ಪ್ರದೇಶದಲ್ಲಿ ನಡೆದಿದೆ.
ಅಮಕಾಂಡಂನ ರಿಯಾಜ್ ಮಂಜಿಲ್ ಅವರ ಪುತ್ರ ಅಲ್ತಾಫ್ (6) ಮೃತ ಬಾಲಕ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಭಾನುವಾರ ಅಲ್ತಾಫ್ ತಲೆಗೆ ಚಿಕ್ಕಪ್ಪ ಶಹಜಹಾನ್ ಸುತ್ತಿಗೆಯಿಂದ ಹೊಡೆದಿದ್ದು, ಪರಿಣಾಮ ಬಾಲಕ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ:ತಾಯಿಗೆ ನಿಂದನೆ : ಹಿರಿಯ ವಿದ್ಯಾರ್ಥಿಯನ್ನ ಇರಿದು ಕೊಂದ ಕಿರಿಯ ವಿದ್ಯಾರ್ಥಿ
ಲಭ್ಯವಾಗಿರುವ ಮಾಹಿತಿ ಪ್ರಕಾರ, ಆರೋಪಿ ಶಹಜಹಾನ್ನಿಂದ ಆತನ ಪತ್ನಿ ಸಬಿತಾ ಶಹಜಹಾನ್ ಬೇರೆಯಾಗಿ ಪೋಷಕರ ಬಳಿ ವಾಸಿಸುತ್ತಿದ್ದಾಳೆ. ದಾಂಪತ್ಯ ಜೀವನದ ವೈಮನಸ್ಸಿಗೆ ಅಲ್ತಾಫ್ ತಾಯಿ ಕಾರಣ ಎಂದು ಭಾವಿಸಿ ಕೋಪಗೊಂಡ ಶಹಜಹಾನ್, ರಿಯಾಜ್ ಮನೆಗೆ ನುಗ್ಗಿ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ರಿಯಾಜ್ ಪತ್ನಿ, ತಾಯಿ, ಪುತ್ರಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ಶಹಜಹಾನ್ ತಲೆಮರೆಸಿಕೊಂಡಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.